Gummata Nagari

Headlines

ಜಗದ್ಗುರು ರೆಣುಕಾಚಾರ್ಯರ ರಥೋತ್ಸವ ನಾಳೆ

 

ಕಾಳಗಿ: ತಾಲ್ಲೂಕಿನ ರೇವಗ್ಗಿ (ರಟಕಲ್) ಗ್ರಾಮದಲ್ಲಿ ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ತ ಪ್ರತಿವರ್ಷದಂತೆ ಈ ವರ್ಷವೂ ಜಗದ್ಗುರು ರೇವಣಸಿದ್ದೇಶ್ವರ ರಥೋತ್ಸವ ಮಾ. 22ರ ಶುಕ್ರವಾರದಂದು ಸಾಯಂಕಾಲ ಜರಗಲಿದೆ ಎಂದು ದೇವಸ್ಥಾನದ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬ್ರಾಹ್ಮಿ ಮಹುರ್ಥದಲ್ಲಿ ದೇಶದ ದೆವಸ್ಥಾನದ ಪಂಚಾಚಾರ್ಯರ ಸ್ವಾಮಿಯ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ಬೆಳಿಗೆ 6 ಗಂಟೆಗೆ ಸಹಸ್ರ ಬಿಲ್ವರ್ಚನೆ ಸೇರಿ ವಿವಿಧ ಪೂಜೆ ಕೈಂಕರ್ಯಗಳು ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ನಡೆಯಲಿದೆ.

ಬೆಳಿಗ್ಗೆ 8 ಗಂಟೆಗೆ ಸ್ವಾಮಿಯ ರಥೋತ್ಸವಕ್ಕೆ ಕಳಾಸ ರೋಹಣ ಮಾಡುವರು. 10 ಗಂಟೆಗೆ ಜಂಗಮ ವಟುಗಳಿಗೆ ಅಯ್ಯಚಾರ ದಿಕ್ಷಾ ಕಾರ್ಯಮ ನಡೆಯುತ್ತವೆ. ಜಯಂತೋತ್ಸವ ನಿಮಿತ್ತ ಹರ ಗುರುಗಳು ಹಾಗೂ ಮುತ್ತೈದೆರಿಂದ ರೇಣುಕಾಚಾರ್ಯರ ಬೇಳ್ಳಿ ತೋಟ್ಟಿಲು ಕಾರ್ಯಕ್ರಮ ನಡೆಯಲಿದೆ.

ನಂತರ ರೇವಗ್ಗಿ ಗ್ರಾಮದ ಸುಭಾಷಚಂದ್ರ ದೇವರಮನಿ ಅವರ ಮನಿಯಿಂದ ಕುಂಭದ ಮೇರವಣಿಗೆ ಹಾಗೂ ರೇವಗ್ಗಿ, ರಟಕಲ್, ಮುಕರಂಬಾ, ಮಾವಿನಸೂರ, ಅರಣಕಲ್, ಕಂದಗೂಳ, ಬೆಡಸೂರ ಗ್ರಾಮಗಳಿಂದ ನಂದಿಕೋಲು ಮತ್ತು ಕಳಶ, ಮಿಣಿಯನ್ನು ಝೇಂಕಾರ, ಭಾಜಾ ಭಜಂತ್ರಿಗಳ ಮಧ್ಯೆ ಮೇರವಣಿಗೆಯ ಮೂಲಕ ದೇವಸ್ಥಾನಕ್ಕೆ ಕರೆತರುವರು.
ಸಾಯಂಕಾಲ 5 ಗಂಟೆಗೆ ಪುರವಂತರ ವೀರಗಾಸೆ ನೃತ್ಯ ಸಮೇತ ಮೆರವಣಿಗೆ ಮೂಲಕ ರಥೋತ್ಸವದ ಕಡೆಗೆ ತೆರಳುವರು. ರಥದಲ್ಲಿ ರೆಣುಕಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡುವರು.
ಸ್ವಾಗತ ಸಮೀತಿ ಅಧ್ಯಕ್ಷ ಶಾಸಕ ಡಾ.ಅವಿನಾಶ್ ಜಾಧವ, ಸಹಾಯಕ ಆಯುಕ್ತ ಹಾಶಪ್ಪ, ಕಾರ್ಯದರ್ಶಿ ಸದಾಶಿವ ವಗ್ಗೆ, ಹೊನ್ನಕಿರಣಗಿ ಮಠದ ಚಂದ್ರಗುAಡ ಶಿವಾಚಾರ್ಯರು, ಸುಗೂರ ಮಠದ ಚನ್ನರುದ್ರಮುನಿ ಶಿವಾಚಾರ್ಯರು, ಚಂದನಕೇರಾ ಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಕೋಡ್ಲಿ ಬಸವಲಿಂಗ ಶಿವಾಚಾರ್ಯರು, ರಟಕಲ ನಡುವಿನ ಮಠದ ರೇವಣಸಿದ್ದ ಶಿವಾಚಾರ್ಯರು, ವಿರಕ್ತ ಮಠದ ಸಿದ್ದರಾಮ ಶರಣರು, ಗೌರಿ ಗಣೇಶ ಗುಡ್ಡದ ಸಿದ್ದ ಶಿವಯೋಗಿ ಶರಣರು, ಸೇರಿದಂತೆ ಮೊದಲಾದ ಹರಗುರು ಚರಮೂರ್ತಿಗಳು ಭಾಗವಹಿಸುವರು ಎಂದು ಹೇಳಿದರು.

Most Popular

To Top
error: Content is protected !!