Gummata Nagari

Bijapur

ಪಿಯು ಪರೀಕ್ಷೆ: ಗಿರೀಶ ಹೆಳವರ ಕಾಲೇಜಿಗೆ ಪ್ರಥಮ

 

ಬಿಜಾಪುರ: ಇಲ್ಲಿನ ಪುಲಕೇಶಿ ನಗರದ ಶ್ರೀ ಜಗಜ್ಯೋತಿ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಗಿರೀಶ ಹೆಳವರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರತಿಶತ 93 ರಷ್ಟು ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಬಂದಿದ್ದಾನೆ.

ಗಿರೀಶ ಹೆಳವರ ಪತ್ರಕರ್ತ ದೇವೇಂದ್ರ ಹೆಳವರ ಅವರ ಪುತ್ರನಾಗಿದ್ದು, ಪರೀಕ್ಷೆಯಲ್ಲಿ 600 ಕ್ಕೆ 558 ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾನೆ.
ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಈ ವಿದ್ಯಾರ್ಥಿಗೆ ಕಾಲೇಜಿನ ಪ್ರಾಚಾರ್ಯರು, ಎಲ್ಲ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಾಲಕ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲೂ ಶೇ.92 ರಷ್ಟು ಅಂಕ ಪಡೆದ ತಾನು ಕಲಿತ ಇಬ್ರಾಹಿಂಪೂರದ ಚಂದ್ರಕಾAತ ನೀಲಪ್ಪ ಸಜ್ಜನ ಪ್ರೌಢ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

 

Most Popular

To Top
error: Content is protected !!