Gummata Nagari

Bijapur

10 ವಿದ್ಯಾರ್ಥಿಗಳಿಗೆ ಆಕ್ಸಫರ್ಡ್ ಜೀನಿಯಸ್ ಪುರಸ್ಕಾರ

 

ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗುಡ್ಡದ ಹತ್ತಿರ ಇರುವ ಶ್ರೀ ದತ್ತಾತ್ರೇಯ ವಿದ್ಯಾವರ್ಧಕ ಸಂಘದ ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನಲ್ಲಿ ಭಾನುವಾರ ಉತ್ತರ ಕರ್ನಾಟಕದ ಸಿಬಿಎಸ್‌ಇ ಪಠ್ಯಕ್ರಮ ಆಧಾರಿತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಆಕ್ಸಫರ್ಡ್ ಜೀನಿಯಸ್ (ಸಿಬಿಎಸ್‌ಇ)-2024 ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು 10 ವಿದ್ಯಾರ್ಥಿಗಳು ಆಕ್ಸಫರ್ಡ್ ಸಿಬಿಎಸ್‌ಇ ಜೀನಿಯಸ್‌ಗಳಾಗಿ ಹೊರಹೊಮ್ಮುವ ಮೂಲಕ ನಗದು ಪುರಸ್ಕಾರ, ಆಕರ್ಷಕ ಟ್ರೋಫಿ ಗಳಿಸಿ ಸಂಭ್ರಮಿಸಿದರು.

ಬಿಜಾಪುರ ಜೆಎನ್‌ವಿಯ ಪ್ರದೀಪ ಮೂರಮನ್ ಪ್ರಥಮ, ಬೆಳಗಾವಿಯ ಕಿತ್ತೂರಿನ ರಾಣಿ ಚನ್ನಮ್ಮ ವಸತಿ ಶಾಲೆಯ ಅದಿತಿ ಸವಣೂರ ದ್ವಿತೀಯ ಮತ್ತು ವಿಜಯಪುರ ಜೆಎನ್‌ವಿಯ ಸುದರ್ಶನ್ ಕುಲಕರ್ಣಿ ತೃತಿಯ ಸ್ಥಾನ ಪಡೆದುಕೊಂಡರು ಇವರಿಗೆ ತಲಾ 50000, 25000 ಮತ್ತು 15000 ನಗದು ಪುರಸ್ಕಾರ ಮತ್ತು ಟ್ರೋಫಿ ವಿತರಿಸಲಾಯಿತು.
ಬಿಜಾಪುರ ಜೆಎನ್‌ವಿಯ ರಾಜಶೇಖರ ತಾರಾಪುರ, ವಿಜಯಪುರದ ಆ್ಯಕ್ಟ್ ಶಾರದಾ ಶಾಲೆಯ ತನ್ಮಯಿ ಕೋಟಿ, ವಿಜಯಪುರ ಜೆಎನ್‌ವಿಯ ಅಬಿಷೇಕ ಎಚ್., ಬೆಳಗಾವಿಯ ಮುಗಳಖೋಡದ ರೇನ್‌ಬೋ ಸೆಂಟ್ರಲ್ ಶಾಲೆಯ ಅಭಿಷೇಕ ಯರಗಟ್ಟಿ, ವಿಜಯಪುರ ಜೆಎನ್‌ವಿಯ ರಾಹುಲ್ ಬಿರಾದಾರ, ಬೆಳಗಾವಿಯ ಲೋಕಾಪುರದ ಎಕ್ಸಲೆಂಟ್ ಪಬ್ಲಿಕ್ ಶಾಲೆಯ ಕೃತಿಕಾಶ್ರೀ ಎಸ್.ಜಿ., ಕೊಪ್ಪಳದ ಗಂಗಾವತಿಯ ಸೈಯದ್‌ಗೌಸ್ ಮೊಹಿದ್ದೀನ್ ಇವರು ಸಮಾಧಾನಕರ ಸ್ಥಾನ ಗಳಿಸಿ ತಲಾ 1000 ರೂ ನಗದು ಪುರಸ್ಕಾರಕ್ಕೆ ಪಾತ್ರರಾದರು.

ಮೊದಲ 3 ಸ್ಥಾನ ಗಳಿಸಿದವರು ಇದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದುಕೊಂಡಲ್ಲಿ ತಲಾ 1.70 ಲಕ್ಷ ಮತ್ತು 7 ಸಮಾಧಾನಕರ ಸ್ಥಾನ ಗಳಿಸಿದವರು ಇದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದುಕೊಂಡಲ್ಲಿ ತಲಾ 70000 ಶಿಷ್ಯವೇತನಕ್ಕೆ ಅರ್ಹರಾಗುತ್ತಾರೆ. ಇವರಲ್ಲಿ ಈಗಾಗಲೇ ಮೂವರು ಶಿಷ್ಯವೇತನ ಸೌಲಭ್ಯ ಪಡೆದುಕೊಂಡರು ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತ್‌ಗೌಡ ಪಾಟೀಲ ತಿಳಿಸಿದರು.

ಫಲಿತಾಂಶದ ನಂತರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬಾಗಲಕೋಟ ಜಿಲ್ಲೆ ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿಯವರು, ಶಿಕ್ಷಣ ಸಂಸ್ಥೆಗಳ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ವೃದ್ಧಿಸುವುದಾಗಿದೆ. ಶಿಕ್ಷಣ ಸಂಸ್ಥೆ ದೊಡ್ಡದಾಗಿರುವುದಕ್ಕಿಂತ ಅಲ್ಲಿ ಯಾವ ರೀತಿಯ ಶಿಕ್ಷಣ ಸಿಗುತ್ತದೆ ಅನ್ನೋದು ಮುಖ್ಯವಾಗುತ್ತದೆ. ಪ್ರಾಚೀನ ಕಾಲದಲ್ಲಿ ನಳಂದಾ ವಿಶ್ವವಿದ್ಯಾಲಯವೇ ದೊಡ್ಡ ವಿಶ್ವವಿದ್ಯಾಲಯವಾಗಿತ್ತು. ಈಗ ಈ ಭಾಗಕ್ಕೆ ಆಕ್ಸಫರ್ಡ್ ಸಂಸ್ಥೇಯೇ ದೊಡ್ಡ ವಿಶ್ವವಿದ್ಯಾಲಯವೆಂದರೆ ತಪ್ಪಾಗಲಾರದು. ಕಾಲೇಜಿನ ಆಡಳಿತಾಧಿಕಾರಿ ಅಮಿತ್‌ಗೌಡರು 25 ವಯಸ್ಸಿನ ಉತ್ಸಾಹಿ ಯುವಕರಾಗಿದ್ದು ಅತಿ ದೊಡ್ಡ ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದು ಶಿಕ್ಷಣದ ಮೇಲಿನ ಅವರ ಇಚ್ಛಾಶಕ್ತಿಗೆ ಉದಾಹರಣೆಯಾಗಿದೆ. ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವ ಕೆಲಸ ಆಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಅಮಿತ್‌ಗೌಡ ಪಾಟೀಲ ಅವರು ಮಾತನಾಡಿ 1995ರಲ್ಲಿ ಮೋಬೈಲ್ ನೆಟ್ವರ್ಕ್ ಇಲ್ಲದಿರುವ ಕುಗ್ರಾಮದಲ್ಲಿ ಪ್ರಾರಂಭಗೊAಡ ಈ ಸಂಸ್ಥೆ ಕೇವಲ 28 ವರ್ಷಗಳಲ್ಲಿ ರಾಜ್ಯಮಟ್ಟದಲ್ಲಿ ಗುರ್ತಿಸಿಕೊಳ್ಳುವಂತೆ ಬೆಳೆದಿರುವುದರ ಹಿಂದೆ ಸಂಸ್ಥೆಯ ಸಂಸ್ಥಾಪಕರಾದ ನಮ್ಮ ತಂದೆ ಎಂ.ಎಸ್.ಪಾಟೀಲ ಅವರ ಶ್ರಮ ಅಗಾಧವಾಗಿದೆ. ಇವರೊಂದಿಗೆ ಕೈಜೋಡಿಸಿದ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಪಾಲಕರ ಸಹಕಾರ ಸದಾ ಸ್ಮರಣೀಯವಾದದ್ದಾಗಿದೆ. 6ನೇ ತರಗತಿಯಿಂದ ಪಿಯುಸಿ ದ್ವಿತೀಯ ವರ್ಷದವರೆಗೂ ಶಿಕ್ಷಣ ಕೊಡುವ ವ್ಯವಸ್ಥೆ ಇಲ್ಲಿದ್ದು ಸ್ಪರ್ಧಾತ್ಮಕ ತರಬೇತಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಐಐಟಿ, ನೀಟ್, ಸಿಇಟಿ, ಜೆಇಇ ಮುಂತಾದ ಉನ್ನತ ತರಬೇತಿ ಕೊಡುವ ಸುಸಜ್ಜಿತ ವ್ಯವಸ್ಥೆ ಇಲ್ಲಿದೆ. ಕಳೆದ 3 ವರ್ಷಗಳಿಂದ ಫಲಿತಾಂಶದಲ್ಲಿ ಈ ಸಂಸ್ಥೆಯ ಪಿಯು ಕಾಲೇಜು ರಾಜ್ಯಮಟ್ಟದ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಕೇತವಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲೂ ನಮ್ಮ ಸಂಸ್ಥೆಯ ಪ್ರೌಢಶಾಲಾ ವಿಭಾಗ ರಾಜ್ಯದ ಮೊದಲ ಸ್ಥಾನದಲ್ಲಿರುವುದು ಸಾಧನೆಯ ಕಿರೀಟಕ್ಕೆ ಗರಿ ಮೂಡಿಸಿದಂತಾಗಿದೆ. ಗ್ರಾಮೀಣ ಭಾಗದ ಬಡವರು, ರೈತಾಪಿ ವರ್ಗದವರು, ಆರ್ಥಿಕವಾಗಿ ಅಶಕ್ತರಾದವರನ್ನು ಉನ್ನತ ಶಿಕ್ಷಣಕ್ಕೆ ಸಜ್ಜುಗೊಳಿಸಿ ಅವರು ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗುವಂತೆ ಮಾಡುವುದು ನಮ್ಮ ಸಂಸ್ಥೆ ಮತ್ತು ಸಂಸ್ಥೆಯ ಚೇರ್ಮನ್‌ರ ಉದ್ದೇಶವಾಗಿದೆ. ನಮ್ಮಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿರುವುದು ಚೇರಮನ್‌ರ ಮಾನವೀಯತೆಗೆ ಕನ್ನಡಿ ಹಿಡಿದಂತಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಆಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ವಿದ್ಯಾಧರ ಯಾತಗಿರಿ, ಶಿಕ್ಷಕರಾದ ಟಿ.ಡಿ.ಲಮಾಣಿ, ಬಸವರಾಜ ಶಾಂತಪ್ಪನವರ್, ಸಣ್ಣಕ್ಕೆಪ್ಪ ಹುಂಡೇಕಾರ, ಕಾಶಿನಾತ ಹೊಸಮಠ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಸಂಸ್ಥೆಯ ಸಾಧನೆಗಳ ಕುರಿತು ಮಾತನಾಡಿ ಕಳೆದ 2-3 ವರ್ಷಗಳಿಂದ ಈ ಕಾಲೇಜಿನಲ್ಲಿ ನೀಟ್ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ 160ರವರೆಗೆ ಮೆಡಿಕಲ್ ಶಿಕ್ಷಣಕ್ಕೆ ಆಯ್ಕೆಯಾಗಿರುವುದು ಸುಲಭದ ಮಾತಲ್ಲ. ಅದರ ಹಿಂದೆ ಕಠಿಣ ಪರಿಶ್ರಮ ಇದೆ ಎಂದರು.

ಅಮೀತ್‌ಗೌಡ ಪಾಟೀಲ ಮತ್ತು ವಿಜಯಕುಮಾರ್ ಪಾಟೀಲ ಅವರ ನೇತೃತ್ವದಲ್ಲಿ ಪರಶುರಾಮ ಹೂಗಾರ, ಸುನೀಲ ನಾಯಕ, ರಾಜಶೇಖರ ಹಿರೇಮಠ, ಗುರುರಾಜ ಕನ್ನೂರ, ಮಹಾಂತೇಶ ಬಿರಾದಾರ, ಇಸ್ಮಾಯಿಲ್ ಮನಿಯಾರ್, ಸಂದೀಪ್ ಘೋರ್ಪಡೆ, ಆನಂದ ನಾವಿ, ಮಂಜುನಾಥ ಮಂಕಣಿ, ರವಿ ನಾಯಕ, ಆನಂದ ಜಲಗೇರಿ, ಪರಶುರಾಮ ಬಿಸನಾಳ ಮತ್ತು ಕಾಲೇಜು, ಪ್ರೌಢಶಾಲೆ ವಿಭಾಗದ ಉಪನ್ಯಾಸಕರು, ಶಿಕ್ಷಕರ ತಂಡ ಪರೀಕ್ಷೆ ಸಂಘಟನೆಯಿAದ ಹಿಡಿದು ಬಹುಮಾನ ವಿತರಣಾ ಸಮಾರಂಭದವರೆಗೂ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

 

Most Popular

To Top
error: Content is protected !!