Gummata Nagari

Headlines

ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರ ನೋವನ್ನು ಆಲಿಸಿದ ಮೋದಿ

 

 

ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದು, ಅಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದರ ನಡುವೆ ಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿರುವ ಸಂದೇಶಖಾಲಿ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿಯಾದರು.

ಈ ಸಮಯದಲ್ಲಿ ಮೋದಿ ಅವರು ಮಹಿಳೆಯರ ಜತೆಗೆ ಮಾತಕತೆ ನಡೆಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮೋದಿ ಮುಂದೆ ತಾವು ಅನುಭವಿಸಿದ ನರಕಯಾತನೆ ಬಗ್ಗೆ ಹೇಳಿದೆ. ಮೋದಿ ಕೂಡ ತಂದೆಯAತೆ ಶಾಂತಚಿತ್ತದಿAದ ಎಲ್ಲವನ್ನು ಕೇಳಿಸಿಕೊಂಡಿದ್ದಾರೆ. ಜತೆಗೆ ಅವರಿಗೆ ಸಮಾಧನದ ಮಾತಗಳು ಕೂಡ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಜತೆಗೆ ಮಾತನಾಡುವಾಗ ಭಾವುಕರಾದರು. ನಿಮ್ಮ ನೋವುವನ್ನು ನಾನು ಅರ್ಥಮಾಡಿಕೊಳ್ಳುವೇ ಎಂದು ಹೇಳಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿದೆ. ಉತ್ತರ 24 ಪರಗಣದ ಸಂದೇಶ್‌ಖಾಲಿ ಎಂಬ ಹಳ್ಳಿಯು ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಷಹಜಹಾನ್ ಮತ್ತು ಅವರ ಸಹಾಯಕರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.

ಇನ್ನು ಪ್ರಧಾನಿ ಮೋದಿ ಅವರು ಬರಾಸತ್‌ನಲ್ಲಿ ರ್ಯಾಲಿಯಲ್ಲಿ ಸಂದೇಶಖಾಲಿ ಕುರಿತು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂದೇಶಖಾಲಿಯಲ್ಲಿ ಏನೇ ನಡೆದರೂ ಅದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಕಾರಣರಾದ ವ್ಯಕ್ತಿಯನ್ನು ರಕ್ಷಿಸಲು ಟಿಎಂಸಿ ಸರ್ಕಾರ ಪ್ರಯತ್ನಿಸುತ್ತಿದೆ. ಆರೋಪಿಗಳು ಸುಪ್ರೀಂ ಮತ್ತು ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಅಲ್ಲಿಯೂ ಅವರು ವಿಫಲವಾಗಿದ್ದಾರೆ. ಸಂದೇಶಖಾಲಿಯ ಈ ಚಂಡಮಾರುತವು ಪಶ್ಚಿಮ ಬಂಗಾಳದ ಪ್ರತಿಯೊಂದು ಭಾಗಕ್ಕೂ ತಲುಪುತ್ತದೆ ಎಂದು ಹೇಳಿದರು.

Most Popular

To Top
error: Content is protected !!