Gummata Nagari

Headlines

ಮಕ್ಕಳ ಮನರಂಜನೆಯ ವಾಟರ್ ಪಾರ್ಕ ಉದ್ಘಾಟನೆ

 

ಮುಧೋಳ: ದೂರದ ಪ್ರೀತಿಯ ಮನಸ್ಸುಗಳನ್ನು ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳಲು ಅಭಿಮಾನದದಿಂದ ಬೆಂಗಳೂರಿನಿAದ ಆಗಮಿಸಿರುವದಾಗಿ ಚಿತ್ರನಟ ವಿಜಯ ರಾಘವೇಂದ್ರ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತಾಲೂಕಿನ ಇಂಗಳಗಿ ರಸ್ತೆಯ ರಾಯಲ್ ಶಾಲೆಯ ವಾರ್ಷಿಕೋತ್ಸವ ಹಾಗೂ ಮಕ್ಕಳ ಮನರಂಜನೆಗಾಗಿ ನಿರ್ಮಿಸಿರುವ ವಾಟರ್ ಪಾರ್ಕ ಉದ್ಘಾಟಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಾಲ್ಯದಿಂದ ಇಲ್ಲಿಯವರೆಗಿನ ನನ್ನ ಸಾಧನೆ ಜೊತೆಗೆ ಪತ್ನಿಯ ಅಗಲಿಕೆಯ ಕುರಿತು ವಿಡಿಯೋ ನೋಡಿದಾಗ ಎದೆ ಭಾರವಾಯಿತು. ನಿಮ್ಮ ಆಶಿರ್ವಾದಗಳ ಮಾತುಗಳ ಇಲ್ಲಿನ ವಿಶೇಷ ಪ್ರೀತಿ ಮೂಲಕ ಮುನ್ನಡೆಯುತ್ತಿರುವೆ. ಎಂದು ನೋವಿನಿಂದ ಹೇಳಿಕೊಂಡರು.

ಅರಳಿಕಟ್ಟಿ ಸಂಸ್ಥೆಯವರ ಬಹುಮುಖ ಸಾಮಾಜಿಕ ಸೇವೆ ಕಣ್ಣಾರೆ ಕಂಡು ತೃಪ್ತಿ ತಂದಿತು. ಯಾವದೇ ಕ್ಷೇತ್ರ ಇರಲಿ ಒಂಚೂರು ಸಮಾಜ ಸೇವೆಯು ಇರಬೇಕು. ಅಂದಾಗ ಜೀವನ ಸಾರ್ಥಕ ಆಗುವದು ಎಂಬುದು ತಿಮ್ಮಣ್ಣ ಅರಳಿಕಟ್ಟಿ ಇವರ ಕಾರ್ಯವೈಖರಿಯಂದ ಕಾಣಬಹುದು. ನಾನು ನಟಿಸಿರುವ ಅಂದಾಜು 70. ಚಲನಚಿತ್ರಗಳಲ್ಲಿ ಎಲ್ಲವೂ ಇಷ್ಟವಾಗಿವೆ. ಪ್ರತಿಯೊಂದವೂ ಕಷ್ಟಕರದಾಗಿರುತ್ತವೆ ಮುಂದಿನ ತಿಂಗಳು ಗ್ರೇ ಗೇಮ್ಸ್ ಚಿತ್ರ ತೆರಗೆ ಬರಲಿದೆ ಎಂದರು.

ಅರಳಿಕಟ್ಟಿ ಫೌಂಡೇಷನ್ ಅಧ್ಯಕ್ಷ ತಿಮ್ಮಣ್ಣ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಧೈರ್ಯ, ಆತ್ಮಸೈರ್ಯ ಬರಲಿ ಎಂದು ಬೇಸಿಗೆ ರಜೆಯಲ್ಲಿ ಈಜು ಮತ್ತು ವಿವಿಧ ಮನರಂಜನಾ ಸ್ಫರ್ಧೆ, ಕುದುರೆ ಸವಾರಿಯ ವ್ಯವಸ್ಥೆ ಮಾಡಲಾಗಿದೆ. ಪ್ರಗತಿಪರ ರೈತ ತಂದೆಯವರ ಆಶೆಯಂತೆ ದೂರದ ನಗರಗಳಲ್ಲಿ ಇಂಥ ಸೌಲಭ್ಯಗಳನ್ನು ಇಲ್ಲಿನ ರೈತರ, ಮಧ್ಯಮ ವರ್ಗದ ಮಕ್ಕಳಿಗೂ ದರಕಿಸಿಕೊಡುವ ಗುರಿ ಹೊಂದಲಾಗಿದೆ. ಎಂದರು.

ಶಿಕ್ಷಣಪ್ರೇಮಿ ಬಸವರಾಜ ಕೊಣ್ಣೂರ(ಯಲ್ಲಟ್ಟಿ), ಎಂ.ಎನ್. ಪಾಟೀಲ(ಬೀಳಗಿ), ಸಾಹಿತಿ ಎಂ.ಜಿ. ದಾಸರ, ಪ್ರಗತಿಪರ ರೈತ ಗಿರೀಶಗೌಡ ಪಾಟೀಲ, ಎ.ಬಿ. ಘರ‍್ಪಡೆ, ವಿನಯ ಅರಳಿಕಟ್ಟಿ, ಬೆಂಗಳೂರು ನಟರಾಜ್, ಗಾಯಕ ಕಂಬದ ರಂಗಯ್ಯ, ಸವಿತಾ ಅರಳಿಕಟ್ಟಿ, ರಾಜೇಶ್ವರಿ ಕೋಮಾರ, ವರ್ಷಾ ಘಾರಗೆ, ವಿದ್ಯಾ ಅರಳಿಕಟ್ಟಿ, ತುಬಾಕಿ ಸರ, ಇಂದಿರಾ ಸಾತನೂರ ಇತರರಿದ್ದರು.

Most Popular

To Top
error: Content is protected !!