Gummata Nagari

Bijapur

ಮಕ್ಕಳಿಗೆ ಪಲ್ಸ ಪೋಲಿಯೋ ಹನಿ ಹಾಕಿಸಿ

 

ಇಂಡಿ: ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಬೇಕು. ಹಾಗೇ ಮಾಡುವುದರಿಂದ ಅಂಗವಿಕಲತೆ ಕಾಣಿಸಿಕೊಳ್ಳುವುದಿಲ್ಲ ಎಂದು ಸಮಾಜ ಸೇವಕ ಹಸನ ಮುಜಾವರ ಹೇಳಿದರು.
ಅವರು ಪಟ್ಟಣದ ವಾರ್ಡ್ ೧೭ ಕರೀಂ ನಗರದಲ್ಲಿ ಹಮ್ಮಿಕೊಂಡ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಪೋಲಿಯೋ ಲಸಿಕೆಯಿಂದ ಮಕ್ಕಳ ಆರೋಗ್ಯ ಸುರಕ್ಷಿತವಾಗುತ್ತದೆ.ಚಿಕ್ಕ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಇಮ್ರಾನ್ ಮುಜಾವರ, ಅಂಗನವಾಡಿ ಕಾರ್ಯಕರ್ತೆ ನಫೀಸಾ ಮುಲ್ಲಾ,ಕೌಸರ್ ಶೇಖ್, ಆಶಾ ಕಾರ್ಯಕರ್ತೆ ರುಕ್ಸಾನಾ ನದಾಫ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Most Popular

To Top
error: Content is protected !!