Gummata Nagari

Bijapur

ಅಂಚೆ ಮತಪತ್ರ ಚುನಾವಣೆ ಕಾರ್ಯಕ್ಕೆ ಜಿಲ್ಲೆಯಲ್ಲಿ 69 ತಂಡಗಳ ರಚನೆ

 

ಬಿಜಾಪುರ: ಬಿಜಾಪುರ ಮೀಸಲು ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು, ವಿಶೇಷ ಚೇತನ ಮತದಾರರು ಹಾಗೂ ಅಂಚೆ ಮತಪತ್ರ ಸಲ್ಲಿಸಲು ನಮೂನೆ 18 ಡಿ ಅರ್ಜಿ ಸಲ್ಲಿಸಿ ಅರ್ಹರಾದ ಮತದಾರರಿಗೆ ಏ.27 ರಿಂದ ಏ.29 ರವರೆಗೆ ಮೂರು ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಮತದಾನ ತಂಡಗಳು ಮನೆಯ ಬಾಗಿಲಿಗೆ ಬರಲಿವೆ. ಅಂಚೆ ಮತ ಪತ್ರ ಚುನಾವಣೆ ಕಾರ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 69 ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.

ಮುದ್ದೇಬೀಹಾಳ ವಿಧಾನಸಭಾ ವ್ಯಾಪ್ತಿಯಲ್ಲಿ 251 ಹಿರಿಯ ಮತದಾರರು, 142 ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು 393 ಮತದಾರರಿಗೆ 8 ಮತದಾನ ತಂಡಗಳನು ನೇಮಕ ಮಾಡಲಾಗಿದೆ. ದೇವರಹಿಪ್ಪರಗಿ ವಿಧಾನಸಭಾ ವ್ಯಾಪ್ತಿಯಲ್ಲಿ 187 ಹಿರಿಯ ಮತದಾರರು, 58 ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು 245 ಮತದಾರರಿಗೆ 6 ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ. ಬಸವನ ಬಾಗೇವಾಡಿ ವಿಧಾನಸಭಾ ವ್ಯಾಪ್ತಿಯಲ್ಲಿ 332 ಹಿರಿಯ ಮತದಾರರು, 123 ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು 445 ಮತದಾರರಿಗೆ 9 ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ. ಬಬಲೇಶ್ವರ ವಿಧಾನಸಭಾ ವ್ಯಾಪ್ತಿಯಲ್ಲಿ 374 ಹಿರಿಯ ಮತದಾರರು, 102 ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು 476 ಮತದಾರರಿಗೆ 10 ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ.

ಬಿಜಾಪುರ ನಗರ ವಿಧಾನಸಭಾ ವ್ಯಾಪ್ತಿಯಲ್ಲಿ 194 ಹಿರಿಯ ಮತದಾರರು, 42 ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು 236 ಮತದಾರರಿಗೆ 5 ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ. ನಾಗಠಾಣ ವಿಧಾನಸಭಾ ವ್ಯಾಪ್ತಿಯಲ್ಲಿ 219 ಹಿರಿಯ ಮತದಾರರು, 66 ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು 285 ಮತದಾರರಿಗೆ 7 ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ. ಇಂಡಿ ವಿಧಾನಸಭಾ ವ್ಯಾಪ್ತಿಯಲ್ಲಿ 450 ಹಿರಿಯ ಮತದಾರರು, 226 ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು 676 ಮತದಾರರಿಗೆ 14 ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ. ಸಿಂದಗಿ ವಿಧಾನಸಭಾ ವ್ಯಾಪ್ತಿಯಲ್ಲಿ 350 ಹಿರಿಯ ಮತದಾರರು, 127 ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು 477 ಮತದಾರರಿಗೆ 10 ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ.
ಈ ದಿನಾಂಕಗಳAದು ಮತದಾನ ತಂಡಗಳು ಮನೆಗಳಿಗೆ ಭೇಟಿ ನೀಡಲಿದ್ದು, ಎಲ್ಲಾ ಅರ್ಹ ಅಭ್ಯರ್ಥಿಗಳು ಮನೆಯಲ್ಲಿ ಇದ್ದು ಅಂಚೆ ಮತಪತ್ರದ ಮೂಲಕ ಮತದಾನ ಮಾಡಬೇಕು. ಈ ಸೌಲಭ್ಯ ಹೊರತುಪಡಿಸಿ, ಗೈರು ಹಾಜರಾದ ಮತದಾರರಿಗೆ ಮತದಾನ ಮಾಡಲು ಬೇರೆ ಯಾವುದೇ ಪರ್ಯಾಯ ವ್ಯವಸ್ಥೆ ಇರುವುದಿಲ್ಲ ಎಂದು ಜಿಲ್ಲಾ÷ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೈರು ಹಾಜರಿ ಮತದಾರರಿಗೆ ಮತದಾನಕ್ಕೆ ಅವಕಾಶ

ಬಿಜಾಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ವಿಜಯಪುರ ಮೀಸಲು ಕ್ಷೇತ್ರದ ಮತದಾರರಾಗಿದ್ದು, ಲೋಕಸಭಾ ಕ್ಷೇತ್ರದಲ್ಲಿ ಮತ್ತು ಬೇರೆ ಲೋಕಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮತದಾರರು ಮೇ.7 ರಂದು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಸಾಧ್ಯವಾಗದೇ ಇರುವ ಅರ್ಹ ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಮೇ. 1 ರಿಂದ 3ರವರೆಗೆ ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ಪೋಸ್ಟ್ಲ್ ವೊಟಿಂಗ್ ಸೆಂಟರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಸಹಾಯಕ ನಿರ್ದೇಶಕರ ಕಚೇರಿ, ಅನೌಪಚಾರಿಕ ಪಡಿತರ ವಿಭಾಗ, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವಿಜಯಪುರ ಇಲ್ಲಿ ಪೋಸ್ಟ್ಲ್ ವೋಟಿಂಗ್ ಸೆಂಟರ್ ಸ್ಥಾಪಿಸಲಾಗಿದೆ. ಅದರಂತೆ ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರು ಮತದಾನ ಕೇಂದ್ರದಲ್ಲಿ ಚುನಾವಣೆ ಆಯೋಗ ಸೂಚಿಸಿರುವ ದಾಖಲಾತಿಗಳನ್ನು ಅಥವಾ ಗುರುತಿನ ಚೀಟಿಯೊಂದಿಗೆ ಹಾಜರಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Most Popular

To Top
error: Content is protected !!