Gummata Nagari

Bijapur

ಬಾಂಬ್ ಸ್ಪೋಟ ಕುರಿತು ಬಹಿರಂಗವಾಯ್ತು ಸ್ಪೋಟಕ ಮಾಹಿತಿ

 

ಬಳ್ಳಾರಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬAಧಿಸಿದAತೆ ಎನ್‌ಐಎನಿಂದ ಸುಲೇಮಾನ್ ಮತ್ತು ಸೈಯದ್ ಸಮೀರ್ ವಿಚಾರಣೆ ಮಾಡಿದ್ದು, ಅಕ್ಟೋಬರ್ 22 ರಂದು ಬಳ್ಳಾರಿಯಲ್ಲಿ ಅಮೋನಿಯಂ ನೈಟ್ರೇಟ್ ಖರೀದಿ ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಸಿಕ್ಕಿದೆ.

ಸ್ಫೋಟಕ ವಸ್ತುಗಳ ತಯಾರಿಕೆಗೆ ರಸಗೊಬ್ಬರದ ಅಂಗಡಿಯಲ್ಲಿ 1 ಕೆ.ಜಿ ಅಮೋನಿಯಂ ನೈಟ್ರೇಟ್ ಖರೀದಿ ಮಾಡಿದ್ದಾರೆ. ಇವರೊಂದಿಗೆ ಮತ್ತೊಬ್ಬ ಇದ್ದನಾ ಎಂಬುದರ ಬಗ್ಗೆ ಎನ್‌ಐಎ ಹುಡುಕಾಟ ನಡೆಸಿದ್ದು, ರಸಗೊಬ್ಬರದ ಅಂಗಡಿಗೆ ಭೇಟಿ ನೀಡಿರುವ ಓIಂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ವಸ್ತುಗಳ ಖರೀದಿಯಲ್ಲಿ ಭಾಗಿಯಾದವರಿಗಾಗಿ ಎನ್‌ಐಎನಿಂದ ಹುಡುಕಾಟ ನಡೆದಿದ್ದು, ಸ್ಫೋಟಕ ವಸ್ತುಗಳ ತಯಾರಿಕೆ ಬಗ್ಗೆ ಶಂಕಿತ ಪಕ್ಕಾ ಮಾಹಿತಿ ಹೊಂದಿದ್ನಾ? ಸುಲೇಮಾನ್ ಮತ್ತು ಸೈಯದ್ ಸಮೀರ್ ಸಹಚರನಿಂದ ಬಾಂಬ್ ಸ್ಫೋಟ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಬಳ್ಳಾರಿಯ ಕೌಲ್‌ಬಜಾರ್ ಸೇರಿ ಹಲವೆಡೆ ಓIಂ, ಪೊಲೀಸರಿಂದ ಶೋಧ ಮಾಡಲಾಗುತ್ತಿದೆ. 48 ಗಂಟೆಗಳಿAದ ಎನ್‌ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಬೀಡುಬಿಟ್ಟಿದ್ದಾರೆ. ಸ್ಥಳೀಯ ಪೊಲೀಸರೊಂದಿಗೆ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ಮಾಡಲಾಗುತ್ತಿದ್ದು, ಆತನ ಭಾವ ಚಿತ್ರ ಹಿಡಿದು ತನಿಖೆ ಮಾಡಲಾಗುತ್ತಿದೆ.

Most Popular

To Top
error: Content is protected !!