Gummata Nagari

Headlines

ಗೌತಮ ಬಾರ್, ರೆಸ್ಟೊರೆಂಟ್ ಮೇಲೆ ಅಬಕಾರಿ ದಾಳಿ

 

ಯಾದಗಿರಿ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ನಿಮಿತ್ಯ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರ ಆದೇಶದ ಅನ್ವಯ ಯಾದಗಿರಿ ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಪ್ರಯುಕ್ತ 2024ರ ಮಾರ್ಚ್ 24 ರಂದು ಸಂಜೆ 6 ಗಂಟೆಯಿAದ 2024ರ ಮಾರ್ಚ್ 27ರ ಬೆಳಿಗ್ಗೆ 6 ಗಂಟೆಯ ವರೆಗೆ ಎಲ್ಲಾ ವಿವಿಧ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶಿಸಿದ್ದರೂ ಈ ಆದೇಶ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿತನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಡಿ.ಸಿ. ತಿಳಿಸಿದ್ದಾರೆ.

ಅಬಕಾರಿ ಉಪ ಆಯುಕ್ತರಾದ ಶ್ರೀಮತಿ ಶಾರದಾ ಸಿ.ಕೋಲಕಾರ ಅವರ ಮಾರ್ಗದರ್ಶನದಂತೆ, ಅಬಕಾರಿ ಉಪ ಅಧೀಕ್ಷರಾದ ಶ್ರೀ ಆನಂದ ಉಕ್ಕಲಿ ಅವರ ನೇತೃತ್ವದಲ್ಲಿ ಉಪ ವಿಭಾಗದ ಸಿಬ್ಬಂದಿ ಹಾಗೂ ಜಿಲ್ಲಾ ವಿಚಕ್ಷಣದಳದ ಅಬಕಾರಿ ನಿರೀಕ್ಷಕರಾದ ಶ್ರೀಶೈಲ್ ಎಸ್ ಒಡೆಯರ್ ಹಾಗೂ ಸಿಬ್ಬಂದಿಗಳು ಯಾದಗಿರಿ ವಲಯ ನಿರೀಕ್ಷಕರಾದ ಶ್ರೀ ಸಿದ್ರಾಮಪ್ಪ ತಾಳಿಕೋಟಿ ಹಾಗೂ ಸಿಬ್ಬಂದಿಗಳು ಖಚಿತ ಭಾತ್ಮಿ ಮೇರೆಗೆ ಯಾದಗಿರಿ ನಗರದಲ್ಲಿರುವ ಗೌತಮ ಬಾರ್ ಮತ್ತು ರೆಸ್ಟೊರೆಂಟ್ ಸಿಎಲ್-9 ಸನ್ನದು ಮಳಿಗೆ ಮೇಲೆ ಅಬಕಾರಿ ದಾಳಿ ಮಾಡಲಾಗಿದೆ.

ಮದ್ಯ ಮಾರಾಟ ನಿಷೇಧವಿದ್ದರೂ ಈ ಸನ್ನದುವಿನ ಆವರಣದಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡುಬAದ ಪ್ರಯುಕ್ತ ಈ ಸನ್ನದುದಾರರ ವಿರುದ್ಧ ಘೋರ ಪ್ರಕರಣ ದಾಖಲಿಸಿ, 1070,865 ಲೀಟರ್ ಮದ್ಯ ಹಾಗೂ 2120,990 ಲೀಟರ್ ಬಿಯರ್ ಜಪ್ತುಪಡಿಸಿಕೊಂಡಿದ್ದು, ಈ ಮದ್ಯ ಮಾಲಿನ ಅಂದಾಜು ಮೌಲ್ಯ 13,28,223 ರೂ.ಗಳು ದಾಳಿಯ ಸಮಯದಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಆರೋಪಿತನಾದ ಹಣಮಂತ ತಂದೆ ಲಕ್ಷö್ಮಣ ಎಂಬುವವನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡೆಸಲಾಗಿದೆ. ಯಾದಗಿರಿ ವಲಯ ಅಬಕಾರಿ ನಿರೀಕ್ಷಕ ಶ್ರೀ ಸಿದ್ರಾಮಪ್ಪ ತಾಳಿಕೋಟಿ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Most Popular

To Top
error: Content is protected !!