Gummata Nagari

Bijapur

ಬಿಜಾಪುರದಲ್ಲಿ ಖಾಲಿ ಬಸ್ ಸಂಚಾರ: ಬಣ್ಣದೋಕುಳಿ ಎಫೆಕ್ಟ

 

ಬಿಜಾಪುರ: ಸಾರಿಗೆ ಬಸ್ ಎಂದರೆ ಸಾಕು ಎಲ್ಲರಿಗೆ ಸದಾ ರಷ್ ಆಗಿರುವ ನೆನಪು. ವಾಸ್ತವದಲ್ಲಿ ಎಲ್ಲಿನೋಡಿದರಲ್ಲಿ ಬರಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿತುಳುಕುತ್ತಿದ್ದ ಸಾರಿಗೆ ಬಸ್ ಹಾಗೂ ಬಸ್ ನಿಲ್ದಾಣದಲ್ಲಿ ಇದಕ್ಕೆ ಅಪವಾದ ಎಂಬoತೆ ಇಂದು ಸಾರಿಗೆ ಬಸ್‌ನಲ್ಲಿ ಮಹಿಳೆಯರು ಬಿಡಿ ಪ್ರಯಾಣಿಕರೆ ಬೆರೆಳೆಣಿಕೆಯಷ್ಟು ಕಂಡು ಬಂದ ದೃಶ್ಯ ಬಿಜಾಪುರ ನಗರದಲ್ಲಿ ಕಂಡು ಬಂದಿತು.

 


ಹೌದು, ಗುಮ್ಮಟ ನಗರಿ ಬಿಜಾಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ ಇಂತಹ ಅಪರೂಪದ ನೋಟ ಇಂದು ಬೆಳಿಗ್ಗೆ ಇಂದ ಕಂಡು ಬಂದಿತು. ಇದಕ್ಕೆ ಪ್ರಮುಖ ಕಾರಣ ಬಣ್ಣದ ಓಕುಳಿ. ನಿನ್ನೆಯ ದಿನ ಎಲ್ಲೆಡೆ ಜನರು ಹೋಳಿ ಹುಣ್ಣಿಮೆ ಆಚರಿಸಿ ಇಂದು ಜಿಲ್ಲೆಯ ಎಲ್ಲೆಡೆ ಬಣ್ಣದ ಓಕುಳಿ ಆಡುವಲ್ಲಿ ತಲ್ಲಿನರಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರು ನಾವು ನಗರಕ್ಕೆ ಹೋದರೆ ಮೈಗೆ ಬಣ್ಣ ಗ್ಯಾರಂಟಿ. ಈ ಹಿನ್ನಲೆ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಇದ್ದರೂ ಹಳ್ಳಿಯಿಂದ ನಗರಕ್ಕೆ ಬರಲು ಹಿಂದೆಟು ಹಾಕಿದರೆ, ಇತ್ತ ಪುರುಷರು ಬೇಡಪ್ಪ ಬೇಡ ಇಂದು ಈ ಬಸ್ಸಿನ ಸಹವಾಸ ಎಂದು ಸಂಚಾರವನ್ನೆ ನಿಲ್ಲಿಸಿದ ಪರಿಣಾಮ ಎಲ್ಲ ಬಸ್ಸುಗಳಲ್ಲಿ ಬೆರೆಳೆಣಿಕೆಯಷ್ಟು ಪ್ರಯಾಣಿಕರು ಕಂಡುಬoದರು.

ಇತ್ತ ನಿತ್ಯ ಪ್ರಯಾಣಿಕರ ಕಿರಿಕಿರಿ ಅನುಭವಿಸಿದ ಸಾರಿಗೆ ಸಿಬ್ಬಂದಿ ಇಂದು ನಿಶ್ಚಿಂತೆಯಿAದ ಇದ್ದ ನೋಟ ಕಂಡು ಬಂದಿತು. ನಿತ್ಯ ನಿರ್ವಾಹಕರಿಗೂ ಜಾಗ ಸಿಗದ ಬಸ್‌ನಲ್ಲಿ ಇಂದು ನಿರ್ವಾಕರು ಪ್ರಯಾಣಿಕರನ್ನು ಕೈ ಬೀಸಿ ಕರೆದ ನೋಟ ಸಾಮಾನ್ಯವಾಗಿ ಕಂಡು ಬಂದಿತು.

ಒಟ್ಟಾರೆಯಾಗಿ ಹೊಳಿ ಹುಣ್ಣಿಮೆಯ ಅಂಗವಾಗಿ ನಡೆಯುವ ಬಣ್ಣದ ಓಕುಳಿಯ ಎಫೆಕ್ಟ ಸಾರಿಗೆ ಬಸ್ ಮೇಲೆ ಉಂಟಾಗಿತ್ತು. ಮತ್ತೊಂದೆಡೆ ನಗರದಲ್ಲಿ ಉಪಹಾರ ಕೇಂದ್ರ, ಇನ್ನಿತರ ಅಂಗಡಿ ಮುಂಗಟ್ಟುಗಳಲ್ಲಿ ಗ್ರಾಹಕರ ಕೊರತೆ ಎದ್ದು ಕಾಣುತ್ತಿತ್ತು. ಮತ್ತೆ ಕೆಲವೆಡೆ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿ ಬಣ್ಣದ ಓಕುಳಿಯಲ್ಲಿ ಮಿಂದೆದ್ದ ದೃಶ್ಯ ಕಂಡು ಬಂದಿತು.

ವರದಿ : ಎಂ. ವ್ಹಿ. ಹೂಗಾರ.

Most Popular

To Top
error: Content is protected !!