Gummata Nagari

Bijapur

ನಿರುದ್ಯೋಗಿಗಳಿಗೆ ಬಿಜಾಪುರದಲ್ಲಿ ನೇರ ಸಂದರ್ಶನ

 

ಬಿಜಾಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಪ್ರಕೃತಿ ಪ್ರಾಥಮಿಕ ಹಾಗೂ ಪ್ರೌಡಶಾಲೆ ಕಗ್ಗೋಡ ಇವರ ಸಹಯೋಗದೊಂದಿಗೆ ಮಾ.24ರಂದು ಬೆಳಗ್ಗೆ 10 ಗಂಟೆಗೆ ಪ್ರಕೃತಿ ಶಾಲಾ ಆವರಣ ಕಗ್ಗೋಡದಲ್ಲಿ ಬೋಧಕ-ಬೋಧಕೇತರ ಹುದ್ದೆಗಳಿಗಾಗಿ ಸಂದರ್ಶನವನ್ನು ಆಯೋಜಿಸಲಾಗಿದೆ.

ಬಿಎ, ಎಂಎ, ಬಿ.ಎಡ್, ಬಿ.ಎಸ್ಸಿ, ಎಂಎಸ್ಸಿ, ಹಿಂದಿ ಬಿ.ಎಡ್, ಬಿಪಿಈಡಿ ವಿದ್ಯಾರ್ಹತೆಯುಳ್ಲ ಹಾಗೂ ಬೋಧಕೇತರ ಹುದ್ದೆಗಳಾದ ಕಂಪ್ಯೂಟರ್ ಆಪರೇಟರ್, ಪ್ರಥಮ ದರ್ಜೆ ಸಹಾಯಕರು, ವಾರ್ಡನ್, ಜವಾನ್, ಸಂಗೀತ ಶಿಕ್ಷಕರು, ನೃತ್ಯ ಶಿಕ್ಷಕರು ಹಾಗೂ ವಾಹನ ಚಾಲಕರ ಹುದ್ದೆಗಳಿಗಾಗಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಆಗಮಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿಗಳು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ(9945000793)ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

 

Most Popular

To Top
error: Content is protected !!