Gummata Nagari

Bijapur

ಬಾಲ ಬಸವ ವೇಷಧಾರಿ ಮಕ್ಕಳು

 

ಬಿಜಾಪುರ: ಶುಕ್ರವಾರ ಬಸವ ಜಯಂತಿ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಮಕ್ಕಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಬಸವ ವೇಷಧಾರಿಯಾಗಿ ವಿಶೇಷವಾಗಿ ಕಾಣಿಸಿಕೊಂಡು ಬಸವ ಜಯಂತಿ ಆಚರಿಸಿದರು.
ಹನ್ನೆರಡನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕರು ಬಸವಣ್ಣನವರು. ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಇವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತ. ಇದು ಜೀವನ ಪಾಠವೂ ಹೌದು. ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಜೀವನ ಸುಖಮಯ, ಸಮಾಜವೂ ಸುಂದರ. `ಕಾಯಕವೇ ಕೈಲಾಸ’ ಎಂದು ಕಲಿಸಿಕೊಟ್ಟವರು ಬಸವಣ್ಣನವರು.
ಸಮಾನತೆಯ ಹರಿಕಾರ, ಸುಂದರ ಸಮಾಜದ ಕನಸುಗಾರ, ಕರುನಾಡು ಕಂಡ ಮಹಾನ್ ಚಿಂತಕ ಜಗಜ್ಯೋತಿ ಬಸವಣ್ಣನವರ ಒಂದೊAದು ವಚನಗಳು ನಮಗೆ ದಾರಿದೀಪ.

Most Popular

To Top
error: Content is protected !!