Gummata Nagari

Headlines

ಜಿತೊ ಲೇಡಿಜ ವಿಂಗ ವತಿಯಿಂದ ಮಾರ್ಚ 31 ರಂದು ಅಹಿಂಸಾ ರನ್ ಮ್ಯಾರಾಥಾನ್

 

ಬೆಳಗಾವಿ: ಜೈನ ಇಂಟರ್ ನ್ಯಾಷನಲ್ ಟ್ರೆಡ ಆರ್ಗನೈಝೇಶನ ಜಿತೋ ಲೇಡಿಜ ವಿಂಗ ವತಿಯಿಂದ ಇದೇ ಮಾರ್ಚ 31 ರಂದು ಬೆಳಗಾವಿಯಲ್ಲಿ ಅಹಿಂಸಾ ರನ್ ಮ್ಯಾರಾಥಾನ ಓಟವನ್ನು ಆಯೋಜಿಸಲಾಗಿದೆ ಎಂದು ಜಿತೋ ಲೇಡಿಜ ವಿಂಗ ಅಧ್ಯಕ್ಷೆ ಮಾಯಾ ಜೈನ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿತೋ ಸಂಸ್ಥೆಯು ಇದೊಂದು ಅಂತರ್‌ರಾಷ್ಟಿçÃಯ ಮಟ್ಟದ ಸಂಸ್ಥೆಯಾಗಿದ್ದು ವಿಶ್ವದ 28 ದೇಶಗಳಲ್ಲಿ ಹಾಗೂ ಭಾರತದಲ್ಲಿ 69 ವಿಭಾಗಗಳನ್ನು ಹೊಂದಿದ್ದು, ಈ ಎಲ್ಲ ವಿಭಾಗಗಳಲ್ಲಿ ಈ ಅಹಿಂಸಾ ರನ್ನ ನಡೆಸಲಾಗುವುದೆಂದು ಅವರು ಹೇಳಿದರು.

ಕಳೆದ 2023 ರಲ್ಲಿ ಆಯೋಜಿಸಲಾಗಿದ್ದ ಅಹಿಂಸಾ ರನ್ನ ಓಟದಲ್ಲಿ ಒಟ್ಟು 1.16 ಸಾವಿರ ಜನರು ಭಾಗವಹಿಸಿ ಈ ಓಟವನ್ನು ಯಶಸ್ವಿಗೊಳಿಸಿದ್ದರು. ಈ ವರ್ಷವೂ ಸಹ ಜನರು ಸಹಭಾಗಿತ್ವ ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ. ಈ ಮ್ಯಾರಾಥಾನ ಓಟದ ನಿಮಿತ್ಯ ವಿಶ್ವದಲ್ಲೆಡೆ ಅಹಿಂಸೆಯನ್ನು ಪ್ರತಿಪಾದಿಸುವ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮ್ಯಾರಾಥಾನ ಓಟದ ಸಂಚಾಲಕಿ ಕೀರ್ತಿ ದೊಡ್ಡಣ್ಣವರ ಅವರು ಮಾತನಾಡಿ, ಮಾರ್ಚ 3 ರಂದು ಬೆಳಿಗ್ಗೆ 5:30 ಗಂಟೆಗೆ ಬೆಳಗಾವಿಯ ಕ್ಯಾಂಪ ಮರಾಠಿ ವಿದ್ಯಾನಿಕೇತನ ಶಾಲಾ ಮೈದಾನದಿಂದ ಈ ಓಟ ಆರಂಭವಾಗಲಿದೆ. ಈ ಓಟದಲ್ಲಿ 3 ಕಿಮಿ, 5 ಕಿಮೀ, ಹಾಗೂ 10 ಕಿಮೀ ಅಂತರದ ಅಹಿಂಸಾ ರನ್ ಮ್ಯಾರಾಥಾನ ಓಟ ನಡೆಯಲಿದೆ. ಈ ಓಟದಲ್ಲಿಒ ಭಾಗವಹಿಸುವ ಪ್ರತಿಯೊಬ್ಬರಿಗೂ ಟಿ ಶರ್ಟ, ಪದಕ, ಪ್ರಮಾಣ ಪತ್ರ, ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಓಟದಲ್ಲಿ ಭಾಗವಹಿಸುವವರು ತಮ್ಮ ಹೆಸರುಗಳನ್ನು ನೊಂದಾಯಿಸುವುದು ಕಡ್ಡಾಯವಾಗಿದೆ. ಈ ಮ್ಯಾರಾಥಾನ ಓಟದಿಂದ ಬಂದAತಹ ಹಣದಲ್ಲಿ ಬೆಳಗಾವಿಯ ಸದಾಶಿವ ನಗರದಲ್ಲಿನ ಸರಕಾರಿ ಕನ್ನಡ ಶಾಲೆ ನಂ26 ಈ ಶಾಲೆಯ ಕಟ್ಟಡ ನಿರ್ಮಾಣಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಳಿಸಿಕೊಳ್ಳಲಾಗುವುದೆಂದು ಅವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಜಿತೋ ಲೇಡಿಜ ವಿಂಗ ಕಾರ್ಯದರ್ಶಿ ಮಮತಾ ಜೈನ, ಜಿತೋ ಅಧ್ಯಕ್ಷ ವೀರಧವಲ ಉಪಾಧ್ಯೆ, ಜಿತೋ ಯುವ ಘಟಕದ ಅಧ್ಯಕ್ಷ ದೀಪಕ ಸುಬೇದಾರ, ಲೇಡಿಜ ವಿಂಗ ಸಮನ್ವಯಕ ಅಭಯ ಆದಿಮನಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Most Popular

To Top
error: Content is protected !!