Gummata Nagari

Bijapur

ಬಿಜಾಪುರ ಮಹಿಳಾ ವಿವಿಯಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ

 

ಬಿಜಾಪುರ: ನಗರದ ಹೊರವಲಯದ ತೋರವಿ ಹತ್ತಿರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರೊಫೆಸರ್ ಪಿಹೆಚ್‌ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಮ್ಯಾನೇಜ್ಮೆoಟ್ ವಿಭಾಗದ ಪ್ರೋ. ಮಲ್ಲಿಕಾರ್ಜುನ ಎನ್‌ಎಲ್ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತುಳಸೀಮಾಲಾ ಅವರಿಗೆ ಫೆಬ್ರವರಿ 27 ರಂದು ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಇನ್ನು ವಿದ್ಯಾರ್ಥಿನಿ ನೀಡಿರುವ ದೂರನ್ನು ಕುಲಪತಿ ಪ್ರೋ. ತುಳಸೀಮಾಲಾ ಅವರು ಆಂತರಿಕ ದೂರು ಸಮಿತಿಗೆ ರವಾನಿಸಲಿದ್ದಾರೆ. ಬಳಿಕ ಆಂತರಿಕ ದೂರು ಸಮಿತಿ ವಿಚಾರಣೆ ನಡೆಸಲಿದೆ.

ಪ್ರೋ. ಮಲ್ಲಿಕಾರ್ಜುನ ಎನ್‌ಎಲ್ 2017 ರಿಂದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.

Most Popular

To Top
error: Content is protected !!