Gummata Nagari

Bijapur

ಮುದ್ದೇಬಿಹಾಳ : 25 ಕೋಟಿ 69 ಲಕ್ಷ ರೂ. ಪರಿಹಾರ ಬಿಡುಗಡೆ

 

ಮುದ್ದೇಬಿಹಾಳ: ತಾಲೂಕಿನಲ್ಲಿ 2023-24 ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಪರಿಹಾರದ ಹಣ 25 ಕೋಟಿ 69 ಲಕ್ಷದ 17 ಸಾವಿರದ 455 ರೂಪಾಯಿ ಬಿಡುಗಡೆ ಆಗಿದೆ.
ತಾಲೂಕಿನಲ್ಲಿ ಒಟ್ಟು 20035 ರೈತರು ಅರ್ಹರಾಗಿದ್ದಾರೆ. ಇದರಲ್ಲಿ 1862 ಜನ ರೈತರಿಗೆ ವಿವಿಧ ಕಾರಣ ಅಥವಾ ತಾಂತ್ರಿಕ ದೋಷದಿಂದ ಪರಿಹಾರ ಜಮೆ ಆಗಿರುವುದಿಲ್ಲ. ( ಉದಾ : ಆಧಾರ್ ಕಾರ್ಡ್ ಮತ್ತು ಪಹಣಿಯಲ್ಲಿ ಇರುವ ಹೆಸರು ವ್ಯತ್ಯಾಸ, ಆಧಾರ್ ಕಾರ್ಡನ್ನು ಬ್ಯಾಂಕ್ ಗೆ ಲಿಂಕ್ ಮಾಡದೆ ಇರುವುದು eಣಛಿ )
ತೋಗರಿ, ಗೋವಿನ ಜೋಳ, ಕಬ್ಬು, ಹತ್ತಿ, ಸಜ್ಜೆ, ಲಿಂಬೆ, ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ, ಬದನೆ, ಅಜವಾನ ಬೆಳೆಗಳನ್ನು ಪರಿಹಾರಕ್ಕೆ ಅರ್ಹ ಎಂದು ಪರಿಗಣಿಸಲಾಗಿದೆ.
ಕುಷ್ಕಿ ಬೇಳೆಯಾಗಿದ್ದರೆ ಒಂದು ಹೆಕ್ಟೇರ್ ಗೆ 8500 ರೂಪಾಯಿ, ನೀರಾವರಿ ಬೆಳೆಯಾಗಿದ್ದರೆ ಒಂದು ಹೆಕ್ಟೇರ್ ಗೆ 17000 ರೂಪಾಯಿ, ಬಹು ವಾರ್ಷಿಕ ಬೆಳೆಯಾಗಿದ್ದರೆ ಒಂದು ಹೆಕ್ಟೇರ್ ಗೆ 22500 ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ತಹಶೀಲ್ದಾರ ಕಚೇರಿಯ ಪ್ರಕಟಣೆ ತಿಳಿಸಿದೆ.

 

Most Popular

To Top
error: Content is protected !!