Gummata Nagari

Bijapur

ಶಿಕ್ಷಕರು ಮಕ್ಕಳಲ್ಲಿನ ಸೃಜನಶೀಲತೆ ಅಭಿವ್ಯಕ್ತಗೊಳಿಸಿ: ಬಂಡೆ

 

ಬಿಜಾಪುರ: ಇಂದಿನ ವಿದ್ಯಾರ್ಥಿಗಳಲ್ಲಿ ಗ್ರಹಿಕಾ ಶಕ್ತಿ, ಆಲೋಚನಾ ಶಕ್ತಿ, ಆಸಕ್ತಿಯ ಕೌಶಲ್ಯಗಳ ಜೊತೆಗೆ ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಗೊಳಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯವಾಗಿದೆ ಎಂದು ಹಿರೇರೂಗಿ ಶಿಕ್ಷಕ ಸಂತೋಷ ಬಂಡೆ ಹೇಳಿದರು.

ಅವರು ತಾಲೂಕಿನ ಜಂಬಗಿ ಗ್ರಾಮದ ಶ್ರೀ ಬಿ ಎಂ ಪಾಟೀಲ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಶಾಲಾ ವಾರ್ಷಿಕೋತ್ಸವ ಹಾಗೂ 10ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

ಶಿಕ್ಷಕರು ಬಿತ್ತಿದ ಜ್ಞಾನ, ಬುದ್ಧಿವಂತಿಕೆ, ಮೌಲ್ಯಗಳು ವಿದ್ಯಾರ್ಥಿಯ ಜೀವನವನ್ನು ಪರಿವರ್ತಿಸುತ್ತವೆ.ವಿದ್ಯಾರ್ಥಿಗಳ ಬೆನ್ನೆಲುಬಾದ ಶಿಕ್ಷಕರು ಪ್ರತಿಯೊಬ್ಬರ ಜೀವನಕ್ಕೆ ಸ್ಪೂರ್ತಿಯಾಗಿ, ವಿದ್ಯಾರ್ಥಿಗಳಿಗೆ ನೀತಿಯುತ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುತ್ತಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯ ಶಿಕ್ಷಕಿ ರೇಣುಕಾ ಕೊಣ್ಣೂರ ಮಾತನಾಡಿ, ಸಮಾಜಕ್ಕೆ ಧನಾತ್ಮಕ ಮತ್ತು ಪ್ರೇರಿತ ಭವಿಷ್ಯದ ಪೀಳಿಗೆಯನ್ನು ನಿರ್ಮಿಸುವ ಸಾಮರ್ಥ್ಯವನ್ನು ಶಿಕ್ಷಕರು ಹೊಂದಿದ್ದಾರೆ. ಅವರು ಮಕ್ಕಳಿಗೆ ಮಾದರಿಯಾಗಿ, ಯುವಜನರಿಗೆ ಶಿಕ್ಷಣದ ಶಕ್ತಿಯನ್ನು ನೀಡುತ್ತಾರೆ ಎಂದು ಹೇಳಿದರು.

ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಬಸವರಾಜ ಅವಟಿ, ಗುರುಬಾಯಿ ಉಕ್ಕಲಿ ಅವರನ್ನು ಸನ್ಮಾನಿಸಲಾಯಿತು.

ವೇದಮೂರ್ತಿ ಗುರುಬಸಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಶೈಲ ಮಸೂತಿ ಉದ್ಘಾಟಿಸಿದರು.ಬಸವರಾಜ ಭಾವಿಮನಿ, ಮುತ್ತಪ್ಪ ನಾಯ್ಕೊಡಿ,ಶಿವಪ್ಪ ಪೂಜಾರಿ,ಶರಣಪ್ಪ ಕಡ್ಲೆವಾಡ,ಹನಮಂತ ಉಕ್ಕಲಿ,ಶಿಕ್ಷಕರಾದ ರಿಯಾಜ್ ಮುಜಾವರ, ಎ ಆರ್ ತುಬಾಕೆ, ನಿಂಗನಗೌಡ ಬಿರಾದಾರ, ಸಂತೋಷಕುಮಾರ ಜಿತ್ತಿ,ಕಲ್ಲಪ್ಪ ಕಾಂಬಳೆ, ಬಾಳು ಮಾನೆ,ಆರತಿ ಗಾಣಿಗೇರ, ವಿದ್ಯಾರ್ಥಿ ಪ್ರತಿನಿಧಿ ಸವಿತಾ ಗೇರಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಿಕ್ಷಕರಾದ ಮಲ್ಲಪ್ಪ ಸ್ವಾಗತಿಸಿದರು. ಚಂದ್ರಶೇಖರ ಅರವತ್ತು ವರದಿ ವಾಚಿಸಿದರು. ಪ್ರವೀಣ ಮಂಗಳೂರೆ ನಿರೂಪಿಸಿದರು. ಸಾವಿತ್ರಿ ಅಂಗಡಿ ವಂದಿಸಿದರು.

Most Popular

To Top
error: Content is protected !!