Gummata Nagari

Bijapur

ಸಂಸದ ಅನಂತಕುಮಾರ ಹೆಗಡೆ ಗಡಿಪಾರಿಗೆ ಆಗ್ರಹ

 

ದೇವರಹಿಪ್ಪರಗಿ: ಪದೇ ಪದೇ ಸಂವಿಧಾನ ಬದಲಾವಣೆ ಹೇಳಿಕೆ ಮೂಲಕ ಸಮಾಜದಲ್ಲಿ ಶಾಂತಿ ಕದಡುತ್ತಿರುವ ಸಂಸದ ಅನಂತಕುಮಾರ ಹೆಗಡೆಯವರನ್ನು ತಕ್ಷಣವೇ ಗಡಿಪಾರು ಮಾಡಬೇಕು ಎಂದು ವಿವಿಧ ಸಂಘಟನೆ ಪದಾಧಿಕಾರಿಗಳು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಚುನಾವಣೆ ಬಂದಾಗ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಸಂಭದ್ಧ ಹೇಳಿಕೆಗಳನ್ನು ನೀಡಿ ಪ್ರಚಾರದಲ್ಲಿರಬೇಕೆಂಬ ಗುಮಾನಿಯಲ್ಲಿದ್ದಾರೆ. ಕಳೆದ ಹಲವಾರು ಬಾರಿ ಸಂವಿಧಾನ ತಿದ್ದುಪಡಿ, ಬದಲಾವಣೆ ಮಾಡುವುದಾಗಿ ಹೇಳುತ್ತ ಆರ್‌ಎಸ್‌ಎಸ್ ಅಝೆಂಡಾವನ್ನು ಸಾರ್ವಜನಿಕರ ಮೇಲೆ ಹೇರುವ ತಂತ್ರ ನಡೆಸಿದ್ದಾರೆ. ಅಭಿವೃದ್ಧಿ ಕುರಿತು ಮಾತನಾಡದೆ ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆಗಳಿಂದ ಚುನಾವಣೆ ಗೆಲ್ಲುವ ತಂತ್ರ ಮಾಡುತ್ತಿದ್ದಾರೆ. ಅವರ ಪಕ್ಷದವರೇ ಹೇಳಿಕೆಗಳನ್ನು ಖಂಡಿಸುತ್ತಿದ್ದು, ಹೆಗಡೆಯವರ ಸಂಸದ ಸ್ಥಾನ ಅನರ್ಹಗೊಳಿಸಬೇಕು ಎಂದು ಕಿಡಿಕಾರಿದ್ದಾರೆ.

ಮುಂದಿನ ಚುನಾವಣೆಯಲ್ಲಿ ನಿಲ್ಲದಂತೆ ನಿರ್ಬಂಧ ಹೇರಬೇಕು. ಸಾಧ್ಯವಾದರೆ ಅವರನ್ನು ಗಡಿಪಾರು ಮಾಡಬೇಕು. ಚುನಾವಣೆಗಳು ಬಂದರೆ ಸಾಕು ಇಂತಹ ಸೂಕ್ಷö್ಮ ವಿಷಯಗಳನ್ನು ಮಾತನಾಡಿ, ಗೊಂದಲ ಸೃಷ್ಠಿಸಿ ಸುಮ್ಮನಾಗುವುದು ಇವರ ಜಾಯಮಾನವಾಗಿದೆ. ಅದಕ್ಕಾಗಿ ಯಾವುದೇ ಕಾರಣಕ್ಕೂ ಚುನಾವಣೆಗೆ ನಿಲ್ಲದಂತೆ ನಿರ್ಬಂಧ ಹೇರಬೇಕು. ಬಿಜೆಪಿ ಪಕ್ಷದ ವರಿಷ್ಠರು ಇವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಪ್ರಕಾಶ ಗುಡಿಮನಿ, ರಾಜು ಸಿಂದಗೇರಿ, ಪರಶುರಾಮ ದಿಂಡವಾರ, ಬ್ಲಾಕ್ ಅಲ್ಪಸಂಖ್ಯಾತ ಅಧ್ಯಕ್ಷ ಲಾಡ್ಲೇಮಶಾಕ ರೂಗಿ, ನಜೀರ ಬೀಳಗಿ, ರಾಜು ಮೆಟಗಾರ, ಬಸವರಾಜ ಇಂಗಳಗಿ, ರಾವುತ್ ಮಾಸ್ತರ್ ತಳಕೇರಿ, ಮಹೇಶ ಮುರಾಳ, ರಾಘವೇಂದ್ರ ಪಡಗಾನೂರ ಪರಶುರಾಮ ಬಡಿಗೇರ, ಪರಶುರಾಮ ನಾಯ್ಕೋಡಿ, ಬೀರು ಹಳ್ಳಿ, ಆನಂದ ಗೊರಗುಂಡಗಿ, ಸುನೀಲ್ ಕನಮಡಿ, ಯಮನಪ್ಪ ಭೂತಾಳಿ, ಪ್ರಕಾಶ ಶಾಂತಗಿರಿ ಸೇರಿದಂತೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ವಿವಿಧ ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು ಪ್ರಕಟಣೆ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.

 

Most Popular

To Top
error: Content is protected !!