Gummata Nagari

Bijapur

ಭಾರತೀಯ ಭಕ್ತಿ ಪರಂಪರೆ ಪುಣ್ಯಮಯ

ಬಿಜಾಪುರ: ಭಾರತವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಪಡೆದ ದೇಶ. ಇಲ್ಲಿ ಸಾಧು ಸಂತರು ಮಹಾತ್ಮರು ತಮ್ಮದೇ ಆದ ಕೊಡುಗೆಯ ಮೂಲಕ ಇದನ್ನು ಪಾವನ ಮಾಡಿದ್ದಾರೆ. ಇಲ್ಲಿರುವ ಭಕ್ತಿಯ ಶ್ರೀಮಂತಿಕೆ ನಮ್ಮ ಮನಸ್ಸನ್ನು ಸದಾ ಶುದ್ಧೀಕರಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ಭಕ್ತಿ ಪರಂಪರೆ ಪುಣ್ಯಮಯವಾಗಿದೆ ಎಂದು ವಿ ಎಚ್ ಪಿ ಬೆಂಗಳೂರು ಕ್ಷೇತ್ರಿಯ ಪ್ರಮುಖರಾದ ಬಸವರಾಜ್ ಜಿ .ಇಂದಿಲ್ಲಿ ಅಭಿಪ್ರಾಯ ಪಟ್ಟರು.

ಅವರು ನಗರದ ಆಶ್ರಮ ರಸ್ತೆಯ ಐಶ್ವರ್ಯ ಬಡಾವಣೆಯ ಶ್ರೀ ವರದಾಂಜನೇಯ ದೇವಸ್ಥಾನದಲ್ಲಿ ನಡೆದ 539ನೆಯ ಸತ್ಸಂಗ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು
ಮುಂದುವರೆದ ಅವರು ಭಾರತದಲ್ಲಿ ಭಗವಂತನನ್ನು ನಂಬಿರುವ ಜನರು ಇದ್ದಾರೆ. ಅವನನ್ನು ಎಲ್ಲೆಲ್ಲೂ ಕಾಣುವ ಭಾವ ಇವರಲ್ಲಿದೆ. ಇದು ಆತ್ಮ ಶಾಂತಿಗೆ ಮುಂದಾಗುತ್ತದೆ ಎಂದು ತಿಳಿಸಿ ಕನಕದಾಸರು ,ಪುರಂದರದಾಸರು, ರಾಮಕೃಷ್ಣ ಪರಮಹಂಸರು, ವಿವೇಕಾನಂದರು ,ತಾನಸೇನರು, ಸೂರದಾಸರು ಮುಂತಾದ ಮಹಾತ್ಮರ ಬದುಕಿನ ನಿದರ್ಶನಗಳನ್ನು ತಿಳಿಸಿದರು. ಭಕ್ತಿ ಪರಂಪರೆ ನಮ್ಮಲ್ಲಿ ಶಿಸ್ತು ,ಸಮಯ ಪಾಲನೆ ,ಹಾಗೂ ಸತ್ಯ ನಿಷ್ಠೆಯನ್ನು ಅಳವಡಿಸಿಕೊಳ್ಳುವಂತೆ ಮಾಡುತ್ತವೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಥಮ ದರ್ಜೆ ಗುತ್ತಿಗೆದಾರರಾದ ಎನ್ ಬಿ ದೇಸಾಯಿ ಅವರು ವಹಿಸಿ ಮಾತನಾಡುತ್ತಾ ಭಕ್ತಿ ಪರಂಪರೆ ಭಾರತೀಯರಲ್ಲಿ ನಿರಂತರವಾಗಿ ಇದೆ .ಈ ಹಿನ್ನೆಲೆಯಲ್ಲಿ ಭಾರತೀಯರು ಆಸ್ತಿಕರಾಗಿ ದೇವರನ್ನು ನಂಬಿ ನಡೆಯುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಸಾದ ಸೇವೆಯನ್ನು ಅರವಿಂದ ಗೊಬ್ಬೂರ ಅವರು ಅವರ ಹಿರಿಯ ಸಹೋದರರಾದ ದಿವಂಗತ ಶಿವಪುತ್ರಪ್ಪ ಗೊಬ್ಬೂರ ಅವರ ಸ್ಮರಣಾರ್ಥವಾಗಿ ಹಮ್ಮಿಕೊಂಡು ಮಾತನಾಡಿ ಹಿರಿಯರ ಸ್ಮರಣೆ ನಮ್ಮನ್ನು ಸದಾ ಕಾಡುತ್ತದೆ. ಅವರ ಮಾರ್ಗದರ್ಶನ ನಮ್ಮ ಬದುಕನ್ನು ಗಟ್ಟಿ ಮಾಡುತ್ತದೆ .ಅವರ ಆದರ್ಶಗಳು, ನಡೆ-ನುಡಿಗಳು ನಮಗೆ ಸದಾ ಸ್ಪೂರ್ತಿಯಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ರಮೇಶ ಮರನೂರ ಹಾಗೂ ಸುನಿತಾ ಬಿರಾದಾರ ಅವರು ಪ್ರಾರ್ಥನೆ ಗೀತೆಗಳು ಹಾಡಿದರು. ಸಾಹಿತಿಗಳಾದ ಡಾ. ಮಲ್ಲಿಕಾರ್ಜುನ ಮೇತ್ರಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತ ಕೋರಿದರು. ವಿಶ್ರಾಂತ ಪ್ರಾಚಾರ್ಯರಾದ ಎಂ ಓ ಶಿರೂರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವೇದಮೂರ್ತಿ ಮಲ್ಲಯ್ಯ ಚೆನ್ನಯ್ಯ ಹಿರೇಮಠ ಅವರು ಫಲಪುಷ್ಪ ಸೇವೆ ಹಾಗೂ ಮಹಾಮಂಗಳಾರತಿಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ರಾಜುಗೌಡ ಪಾಟೀಲ, ಹನುಮಂತ ಚಿಂಚಲಿ , ಸಂಬಣ್ಣಿ , ವೀರಣ್ಣ ಹುಲಸುರ,ರಾಜಣ್ಣ ಜಕ್ಕುಂಡಿ, ಮಾರುತಿ ದೇವಸ್ಥಾನದ ಅಧ್ಯಕ್ಷರಾದ ಬಿ ಎನ್ ಬಿರಾದಾರ, ಎಸ್ ಕೆ ಬಿರಾದಾರ, ಜಯಪ್ರಕಾಶ್ ಸೊಡ್ಡಗಿ , ಎಂ ಕೆ ಬಿಸನಾಳ ,ಡಾ. ಆರ್.ಎನ್ ದಿಂಡೂರ್
ಪಾಯಣ್ಣ ಪಡಸಲಗಿ ,ಎಂ ಕೆ ಪಟ್ಟಣದ, ಸಾರವಾಡ , ಬಾಗೇವಾಡಿ ಮುಂತಾದ ಗಣ್ಯಮಾನ್ಯರು ಉಪಸ್ಥಿತರಿದ್ದರು.

Most Popular

To Top
error: Content is protected !!