Gummata Nagari

Bijapur

ರೈತರಿಗೆ ಸಾಲಗಾರರಿಂದ ಕಿರಿಕಿರಿ: ವಿಮಾ ಮಂಜುರಾತಿಗೆ ಆಗ್ರಹ

 

ತಿಕೋಟಾ: ತಾಲೂಕಿನಾದ್ಯಂತ ರೈತರು ಆಯಾ ಬೆಳೆಗಳಿಗೆ ಅನುಗುಣವಾಗಿ ರೈತರು ವಿಮಾಕಂತು ತುಂಬಿದ್ದು ಇನ್ನುವರೆಗೂ ಕೆಲವು ರೈತರ ಖಾತೆಗಳಿಗೆ ವಿಮಾ ಜಮಾ ಆಗಿರುವದಿಲ್ಲ ಎಂದು ಅಕ್ರೋಶಗೊಂಡ ರೈತರು ಮಂಗಳವಾರದAದು ತಹಸೀಲ್ದಾರ ಸುರೇಶ ಮುಂಜೆ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಅದ್ಯಕ್ಷರಾದ ಎಸ ಎಸ ಸಾಲಿಮಠ ಮನವಿ ಸಲ್ಲಿಸಿ ಮಾತನಾಡಿ, ಜಿಲ್ಲಾಧಿಕಾರಿಗಳು ಬೆಳೆ ನಷ್ಟಗೊಂಡ ರೈತರನ್ನು ಕುದ್ದಾಗಿ ಸರ್ವೇ ಮಾಡಿಸಿ ವಿಮಾ ಮಂಜುರಾತಿ ಮಾಡಿಸಬೇಕು. ಈ ಬಾರಿ ಮಳೆ ಬಾರದೇ ಬರಗಾಲದಿಂದ ಸಾಕಷ್ಟು ರೈತರು ನಷ್ಟ ಅನುಭವಿಸುವಂತಾಗಿದೆ, ಸಾಲ ಸೋಲ ಮಾಡಿ ಭಿತ್ತಿದ ಬೆಳೆಗೆ ಕರ್ಚು ಸಹ ಬಾರದಂತಾಗಿಗಿದೆ, ಕೂಡಲೆ ವಿಮಾ ಪರಿಹಾರ ಬಾರದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.

ಮಳೆಯಿಲ್ಲದೆ ಬರಗಾಲಕ್ಕೆ ತುತ್ತಾಗಿರುವ ರೈತರು ವಿಮಾ ಆಸರೆ ಆದಿತೆಂದು ಸಾಲ ಮಾಡಿಯಾದರೂ ಬೆಳೆಗಳ ವಿಮಾ ಪಾವತಿಸಿದ್ದಾರೆ. ಅದರೆ ವಿಮಾ ಬಾರದೆ ರೈತರು ದಿಕ್ಕು ತೋಚದೆ ಸಂಕಷ್ಟ ಎದುರಿಸುವಂತಾಗಿದೆ. ವಿಮಾ ಕಂಪನಿಯವರ ಷಡ್ಯಂತ್ರದಿoದ ಪ್ರಭಾವಿಗಳಿಗೆ ರಾಜ್ಯದ ಹಲವು ಕಡೆ ಮಾತ್ರ ವಿಮಾ ಪರಿಹಾರ ಜಮಾ ಆಗುತ್ತಿರುವುದು ಕಂಡು ಬರುತ್ತಿದೆ, ಆದರೆ ನಿಜವಾಗಿ ನಷ್ಟಗೊಂಡ ರೈತರಿಗೆ ಪರಿಹಾರ ದೊರಕುತ್ತಿಲ್ಲ ಎಂದು ದೂರಿದರು.

ಸರಕಾರ ಬರಗಾಲ ಘೋಷಣೆ ಮಾಡಿದರು ಸ್ಥಳೀಯ ಬ್ಯಾಂಕ, ಪೈನಾನ್ಸ್ ಹಾಗೂ ಕೋ ಆಪರೆಟೀವ ಸೋಸಾಟಿಯವರು ಕಿರಿಕಿರಿ ಉಂಟುಮಾಡುತ್ತಿದ್ದು ಇವರಿಂದ ಒಂದಿಲ್ಲಾ ಒಂದು ಸಮಸ್ಯ ಎದುರಿಸುವಂತಾಗಿ ರೈತರು ತಮ್ಮ ಮಾನಕ್ಕೆ ಅಂಜಿ ಆತ್ಮಹತೈ ಮಾಡಿಕೊಳ್ಳುವಂತಾಹ ಉದಾಹರಣೆಗಳು ತಾಲೂಕಿನಲ್ಲಿ ನಡೆದಿವೆ, ಸಾಲವಸೂಲಾತಿಯನ್ನು ಈ ವರ್ಷ ಸಂಪೂರ್ಣ ಕೈಬಿಡಬೇಕೆಂದು ಆದೇಶ ಮಾಡಬೇಕು ಎಂದರು.

ಈ ವೇಳೆ ಜಿಲ್ಲಾ ಸಂಚಾಲಕರಾದ ನಜೀರ ನಂದರಗಿ, ಹೊನವಾಡ ಅಧ್ಯಕ್ಷರಾದ ಹಣಮಂತ ಬ್ಯಾಡಗಿ, ಮುಖಂಡರಾದ ಟೋಪುಗೌಡ ಪಾಟೀಲ, ಎಸ ಎಸ ಜಿದ್ದಿ, ಖಾದರಸಾಬ ಅ ವಾಲಿಕಾರ, ಗೈಬುಸಾಬ ರಾ ತಿಗಣಿಬಿದರಿ, ಎಸ ಎಸ ಹೊಸಮನಿ, ಮಾಹಾದೇವ ಕದಂ, ಎಂ ಡಿ ಖುರ್ಫಿ, ಸುಭಾಷ ವಳಸಂಗ, ಜಿ ಜಿ ಪವಾರ, ಮತ್ತಿತರರು ಇದ್ದರು.

ಮನವಿ ಸ್ವಿಕರಿಸಿದ ತಹಶೀಲ್ದಾರ ಸುರೇಶ ಅರಮುಂಜೆ ಮಾತನಾಡಿ, ಈ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಲಾಗುವದು, ಬರಗಾಲ ಇರುವುದರಿಂದ ವಿಮಾ ಸಮಸ್ಯೆ ಬ್ಯಾಂಕು, ಪೈನಾನ್ಸ್ ಮತ್ತು ಕೋ ಆಪರೇಟಿವ ಸೊಸೈಟಿ ಅವರಿಂದ ರೈತರಿಗೆ ಸಾಲವಸೂಲಾತಿ ಕಿರುಕುಳ ಆಗದಂತೆ ಆದೇಶ ಇದೆ, ಇನ್ನು ವಿಮಾಕ್ಕೆ ಸಂಬAಧಿಸಿದAತೆ ವಿಚಾರಣೆ ಮಾಡಲಾಗುವುದು ಎಂದರು.

 

Most Popular

To Top
error: Content is protected !!