Gummata Nagari

Headlines

ಬಿಜೆಪಿ ಕಾಂಗ್ರೆಸ್‌ನ ಖಾತೆಗಳನ್ನು ರದ್ದುಪಡಿಸಿದೆ: ಕಾಂಗ್ರೆಸ್ ಆರೋಪ

 

ದೆಹಲಿ: ಬಿಜೆಪಿ ತಪ್ಪಾಗಿ ದೇಣಿಗೆ ಪಡೆದು ತನ್ನ ಬೊಕ್ಕಸ ತುಂಬಿಸಿಕೊAಡಿದ್ದು, ಇದೀಗ ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ರದ್ದುಪಡಿಸಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಈಗ ಕಾಂಗ್ರೆಸ್ ಚುನಾವಣಾ ಬಿಕ್ಕಟ್ಟು ಎದುರಿಸುತ್ತಿದೆ. ಪ್ರಚಾರಕ್ಕಾಗಿ ನಮ್ಮ ಬಳಿ ಹಣವಿಲ್ಲ. ಸೀತಾರಾಮ್ ಕೇಸರಿ ಅವರ ಕಾಲದ ನಿಧಿಗೆ ಸಂಬoಧಿಸಿದoತೆ ನಮಗೆ ನೋಟಿಸ್ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಿತು. ಐಟಿಯಂತಹ ಸಾಂವಿಧಾನಿಕ ಹಾಗೂ ನ್ಯಾಯಾಂಗ ಸಂಸ್ಥೆಗಳ ಮೇಲೆ ಆಡಳಿತ ಪಕ್ಷವು ನೇರ ಅಥವಾ ಪರೋಕ್ಷ ನಿಯಂತ್ರಣವನ್ನು ಹೊಂದಿರಬಾರದು ಎಂದಿದ್ದಾರೆ.
ಷಡ್ಯAತ್ರದ ಭಾಗವಾಗಿ ಪ್ರಮುಖ ವಿರೋಧ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದ್ದು, ಹಣದ ಕೊರತೆಯಿಂದ ಚುನಾವಣೆಗೆ ಸ್ಪರ್ಧಿಸಲು ಸಮಾನ ಅವಕಾಶ ಸಿಗುವುದಿಲ್ಲ ಎಂದು ಖರ್ಗೆ ಹೇಳಿದರು. ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಬೇಕಾದರೆ ಸಮತಟ್ಟಾದ ಮೈದಾನ ನಿರ್ಮಾಣವಾಗಬೇಕು.

ಚುನಾವಣಾ ಬಾಂಡ್‌ಗಳಿoದ ಬಿಜೆಪಿಯು ಶೇ.56ರಷ್ಟು ಹಣವನ್ನು ಪಡೆದಿದೆ, ಕಾಂಗ್ರೆಸ್ ಕೇವಲ ಶೇ.11ರಷ್ಟು ಹಣವನ್ನು ಪಡೆದಿದೆ. ಬಿಜೆಪಿಯ ಜಾಹೀರಾತುಗಳು ಎಲ್ಲೆಡೆ ರಾರಾಜಿಸುತ್ತಿವೆ, ದಿನಪತ್ರಿಕೆ, ಟಿವಿ, ರೇಡಿಯೋದಲ್ಲಿ ಎಲ್ಲೆಲ್ಲೂ ಜಾಹೀರಾತುಗಳು ಕಾಣುತ್ತಿವೆ. ರ್ಯಾಲಿಗಳು, ರೋಡ್‌ಶೋಗಳು ನಡೆಯುತ್ತಿವೆ, ಈ ಹಣ ಎಲ್ಲಿಂದ ಬಂತು, ಹಣವಿಲ್ಲದೆ ಇವೆಲ್ಲಾ ನಡೆಯುತ್ತಿದೆಯೇ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಸಾಂವಿಧಾನಿಕ ಸಂಸ್ಥೆಗಳು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಬಯಸಿದರೆ, ನಮ್ಮ ಬ್ಯಾಂಕ್ ಖಾತೆಗಳನ್ನು ಮುಕ್ತವಾಗಿ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಖರ್ಗೆ ಹೇಳಿದರು. ಯಾವುದೇ ರಾಜಕೀಯ ಪಕ್ಷಗಳು ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದರು.

ದುರದೃಷ್ಟವಶಾತ್ ಇತ್ತೀಚೆಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿದ ನಂತರ ಚುನಾವಣಾ ಬಾಂಡ್‌ಗಳಿಗೆ ಸಂಬoಧಿಸಿದoತೆ ಹೊರಬಿದ್ದಿರುವ ಸಂಗತಿಗಳು ಆತಂಕಕಾರಿ ಹಾಗೂ ನಾಚಿಕೆಗೇಡಿನ ಅಂಗತಿಯಾಗಿದೆ ಎಂದು ಖರ್ಗೆ ಹೇಳಿದರು. ಇದು ದೇಶದ ಪ್ರತಿಷ್ಠೆಗೆ ಧಕ್ಕೆ ತಂದಿದೆ, 70 ವರ್ಷಗಳಲ್ಲಿ ನಮ್ಮ ದೇಶದಲ್ಲಿ ನಿರ್ಮಿಸಲಾದ ನ್ಯಾಯಯುತ ಚುನಾವಣೆ ಹಾಗೂ ಆರೋಗ್ಯಕರ ಪ್ರಜಾಪ್ರಭುತ್ವದ ಚಿತ್ರವನ್ನು ಪ್ರಶ್ನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಆರ್ಥಿಕವಾಗಿ ಗುರಿಯಾಗಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಬಿಜೆಪಿ ಚುನಾವಣಾ ಸಂಪನ್ಮೂಲಗಳ ಏಕಸ್ವಾಮ್ಯವನ್ನು ಹೊಂದಿದೆ ಎಂದು ಖರ್ಗೆ ಆರೋಪಿಸಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಧಾನಿಯವರಿಂದ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಏಳು ಹಂತದ ಲೋಕಸಭೆ ಚುನಾವಣೆ ಏಪ್ರಿಲ್ 19 ರಂದು ಆರಂಭವಾಗಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

Most Popular

To Top
error: Content is protected !!