ಸುಖ ದುಃಖಗಳ ಸಮ್ಮಿಲನವೆ ಯುಗಾದಿ …. ಸುರಕ್ಷತೆ ಹಾಗೂ ಜಾಗೃತೆಯ ಆಚರಣೆ ಯುಗಾದಿ

0

Gummata nagari : Spacial article

ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ, ಮನೆಯ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತೆವೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಮಾನವನ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು. ನೋವು ನಲಿವು ಎರಡಕ್ಕೂ ನಾವು ಸ್ವಾಗತ ನೀಡಬೇಕು. ನಾವು ಬೇವಿನ ಸಮಾನವಾದ ದು:ಖ, ಅಶಾಂತಿ, ಬೆಲ್ಲದ ಸಮಾನವಾದ ಶಾಂತಿ, ಸುಖ, ಆತ್ಮೀಯತೆ, ಸ್ನೇಹ, ಮಧುರತೆಯ ಅನುಭವ ಮಾಡುವುದು
‘ಯುಗಾದಿ’ ಬಂದಿತೆಂದರೆ ಎಲ್ಲಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನು ಬೀರುವವು. ಪ್ರಕೃತಿಯಲ್ಲಿ ಎಲ್ಲಿ ನೋಡಿದರೂ ಮರ ಗಿಡಬಳ್ಳಿಗಳು ಹಸಿರಾಗಿ ನಳನಳಿಸುತ್ತಿರುತ್ತವೆ.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್ ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿಯನ್ನು ಯುಗಾದಿಯೆನ್ನುವರು. ಈ ಹಬ್ಬವನ್ನು ಭಾರತದಲ್ಲಿ ಬೇರೆ-ಬೇರೆ ಹೆಸರಿನಿಂದ ಆಚರಿಸುವರು.
ಕರ್ನಾಟಕದಲ್ಲಿ ‘ಯುಗಾದಿ’, ಮಹಾರಾಷ್ಟ್ರದಲ್ಲಿ ‘ಗುಢಿಪಾಡವಾ’, ಆಂಧ್ರ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ‘ಹೊಸ ವರ್ಷದ ಹಬ್ಬ’ವೆಂದು, ಉತ್ತರ ಭಾರತದಲ್ಲಿ ‘ಬೈಸಾಖಿ’ ಎಂದು ಇದು ಆಚರಿಸಲ್ಪಡುತ್ತದೆ. ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ.
ಎಲ್ಲಿ ನೋಡಿದರೂ ಯುಗಾದಿ ಸೇಲ್, ಮಾರಾಟ, ಆಫರ್ -ಡಿಸ್ಕೌಂಟ್! ಹಣ್ಣು-ಹಂಪಲುಗಳ ಭರ್ಜರಿ ಮಾರಾಟ, ಕಲರ್‍ಫುಲ್ ಹೂವುಗಳ ರಂಗಿನ ವ್ಯಾಪಾರ. ರಸ್ತೆಯ ಇಕ್ಕೆಲಗಳಲ್ಲೆ ಬೇವಿನ ಸೊಪ್ಪಿನ ಆಗರ. ಅದರಲ್ಲೂ ಸಿಟಿಯಲ್ಲಿರುವ ಮಾಲ್‍ಗಳು ತುಂಬಿ ತುಳುಕಾಡುತ್ತಿವೆ. ಎಲ್ಲೆಡೆ ರೆಶ್ಯೋ ರಶ್ಯು. ಬಟ್ಟೆ, ಆಭರಣ, ಆಕ್ಸೆಸರೀಸ್ ಹೀಗೆ ಎಲ್ಲ ಶಾಪ್‍ಗಳಲ್ಲೂ ಗ್ರಾಹಕರು ಹೆಚ್ಚಾಗುತ್ತಾರೆ. ಹಬ್ಬದ ಆಫರ್ಸ್ ಎಲ್ಲರನ್ನು ಹತ್ತಿರ ಸೆಳೆಯುತ್ತಿದೆ. ಮಕ್ಕಳಿಂದಿಡಿದು ಹಿರಿಯರವರೆಗೂ ಡಿಸ್ಕೌಂಟ್ಸ್ ಹಾಗೂ ಆಫರ್‍ಗಳ ಸುರಿಮಳೆಯಾಗುತ್ತಿವೆ. ಆದರೆ ಈ ವರ್ಷ ನಮ್ಮ ಕುಟುಂಬ ಸುರಕ್ಷತೆಯನ್ನು ಅರಿಯಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ವರ್ಷ ಕೋವಿಡ್ 2 ಅಲೆ ಅತಿ ವೇಗವಾಗಿ ಹರಡುತ್ತಿರುವುದರಿಂದ ಅತಿ ಜಾಗೃತೆಯಲ್ಲಿ ಹಬ್ಬವನ್ನು ಆದಷ್ಟು ಸರಳ ಹಾಗೂ ಸುರಕ್ಷತೆಯಿಂದ ಆಚರಿಸುವದರು ಸೂಕ್ತ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದಲ್ಲದೆ. ಇತರರಿಗೂ ಪಾಲಿಸಲು ತಿಳಿಸುವುದು. ಸುರಕ್ಷಿತವಾಗಿ ಸಂತೋಷದಿಂದ ಕುಟುಂಬದೊಂದಿಗೆ ಆಚರಿಸೋಣ..
ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಎಂದು ಈ ಯುಗಾದಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಣಿಯಾಗೋನ

-ಗಣೇಶ ಬಡೆಪ್ಪನವರ
ಅಪ್ರೆಂಟಿಸ್ ಪ್ರಶಿಕ್ಷಣಾರ್ಥಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಧಾರವಾಡ

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.