ಮಾಹಾಮಾರಿ ರಣಕೇಕೆಗೆ ಸಂಬಂಧಗಳು ಬಲಿ

0

Gummata Nagari : Article

ಸುಮಾರು ಒಂದು ವರ್ಷಗಳ ಕಾಲ ಗತಿಸಿದ್ದರೂ ಕೊರೋನಾ ಆಟ ಸ್ತಬ್ಧ ವಾಗುತ್ತಿಲ್ಲಾ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆಯೂ ಏರಿಕೆ ಕ್ರಮದಲ್ಲಿಯೇ ಮುಂದುವರಿಯುತ್ತದೆ. ಮಹಾಮಾರಿಯನ್ನು ಮಟ್ಟಹಾಕಲು ಜನತಾ ಕರ್ಫೂ, ಲಾಕಡೌನ್ ನಿಯಮ ಜಾರಿಗೆಯಲ್ಲಿ ಇದ್ದರೂ ಕೂಡಾ ಯಾವುದೇ ಲಾಭ ವಾಗುತ್ತಿಲ್ಲಾ ಕೇವಲ ನಷ್ಟ ಮಾತ್ರ.

ವ್ಯಕ್ತಿಗೆ ಕೊರೋನಾ ಪಾಸಿಟಿವ್ ಇದೆ ಎಂದು ದೃಡಪಟ್ಟ ಕೂಡಲೇ ಆ ವ್ಯಕ್ತಿಯೂ ತನ್ನ ಆತ್ಮ ವಿಶ್ವಾಸವನ್ನು ಕಳೆದುಕೊಂಡು ಜೀವನದಲ್ಲಿ ನಿರಾಸಕ್ತಿಯನ್ನು ಹೊಂದುತ್ತಾರೆ. ಕೊರೋನಾ ಸಾಕ್ರಾಂಮಿಕ ಇದ್ದ ವ್ಯಕ್ತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದರೂ ಕೂಡಾ ಯಾವುದೇ ಫಲಸುವುದೇ ಇಲ್ಲ.

ಕೊರೋನಾಕ್ಕೆ ಎಷ್ಟು ಸಂಬಂಧಗಳೂ ಕೂಡಾ ಬಲಿಯಾಗಯತ್ತಿದೆ. ಅದೇಷ್ಟು ಜನರು ಬೀದಿಗೆ ಬಂದಿದ್ದು ಉಂಟು. ಒಂದು ಸುಂದರ ಕುಟುಂಬಕ್ಕೆ ತಂದೆ ತಾಯಿಯೇ ಭದ್ರ ಬುನಾದಿಯಾಗಿ ಆ ಕುಟುಂಬವನ್ನು ನಿಭಾಯಿಸಿಕೊಂಡು ಹೋಗಿರುತ್ತಾರೆ. ನಾವಿಕನಲ್ಲಿದೇ ದೋಣಿ ಸಾಗುವುದು ಹೇಗೆ? ಪಾಲಕರೇ ಇಲ್ಲದೇ ಆ ಕುಟುಂಬ ಅಪರಿಪೂರ್ಣ. ಸಂಸಾರದ ಮುಖ್ಯಸ್ಥ
ತಂದೆ ಕಳೆದುಕೊಂಡು ಕುಟುಂಬ, ಕುಟುಂಬದ ಭದ್ರಬುನಾದಿ ತಾಯಿ ಇಲ್ಲದ ತಬ್ಬಿಲಿಯಾದ ಮಕ್ಕಳು, ಮನೆಯ ಬೆಳೆಕಾದ ಮಕ್ಕಳುನ್ನು ಕಳೆದುಕೊಂಡ ತಂದೆ ತಾಯಿ. ಮನೆಯ ಸದಸ್ಯರು
ಇಂತಹ ಎಷ್ಟು ಕುಂಟುಂಬಗಳ ಸಂತೋಷವನ್ನು ಕೊರೋನಾ ಬಲಿ ಪಡೆದುಕೊಂಡ ರಣ ಕೇಕೆ ಹಾಕುತ್ತಿದೆ.

ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಜನರ ಆಕ್ರಂದನ ಮುಗಿಲುಮುಟ್ಟಿರುತ್ತದೆ. ಮಹಾಮಾರಿಯನ್ನು ಭಾರತಕ್ಕೆ ಆವರಿಸಿಕೊಂಡಾಗ ದಿಂದಲೂ ಅದೆಷ್ಟು ಸಂಬಂಧಗಳು ಬೀದಿ ಪಾಲಾಗಿದೆ. ಒಂದು ಸುಂದರ ಸಂಸಾರದಲ್ಲಿ ಒಬ್ಬ ಸದಸ್ಯನನ್ನು ಕಳೆದುಕೊಂಡು ಜೀವನವನ್ನು ಸಾಗಿಸುವುದು ಈ ಸಮಾಜದಲ್ಲಿ ತುಂಬಾ ಕಷ್ಟ ಕರ. ಆ ವ್ಯಕ್ತಿಯ ಇಲ್ಲದ ನೋವಿನ ಜೊತೆಗೆ ಜನರ ನಿಂದನೆಯ ಮಾತು ಇನ್ನೊಂದಡೆ. ಈ ಎಲ್ಲಾ ತೊಂದರೆ, ಸಮಸ್ಯೆಗಳ ಮೆಟ್ಟಿ ನಿಲ್ಲುವಷ್ಟುರಲ್ಲಿ ಜೀವನದಲ್ಲಿ ಜಿಗುಪ್ಸೆ ಉಂಟಾಗುತ್ತದೆ.

ಆದಷ್ಟು ಬೇಗ ಈ ಮಾಹಾಮಾರಿ ನಮ್ಮ ಭಾರತದಿಂದ ತೊಲಗಿ ಕೊರೋನಾ ಮುಕ್ತ ಭಾರತವಾಗಲ್ಲಿ. ಎಲ್ಲ ಸಂಬಂಧಗಳು ಗಟ್ಟಿಯಾಗಲ್ಲಿ.

ಕೀರ್ತಿ ಎಸ್. ಕೋಟೂರ
ಧಾರವಾಡ

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.