ಚುನಾವಣಾ ವೆಚ್ಚ ಮಿತಿ ಹೆಚ್ಚಳಕ್ಕೆ ಆಯೋಗ ಒಲವು

ರಾಜಕಾರಣಿಗಳಿಗೆ ಸಿಹಿ ಸುದ್ದಿ ಕೊಡಲಿರುವ ಚುನಾವಣಾ ಆಯೋಗ

0

ಸುಧಾರಣೆಯ ಹೆಸರಲ್ಲಿ ಜಾರಿಗೆ ತರಲಾದ ಚುನಾವಣಾ ವಚ್ಚದ ಮೇಲಿನ ಮಿತಿಯನ್ನು ಹೆಚ್ಚಿಸುವ ಸಂಬಂಧ ಚರ್ಚೆ ನಡೆದಿದೆ. ಈ ಸಂಬಂಧ ಆಯೋಗವು ಸರಕಾರಕ್ಕೆ ಶಿಫಾರಸು ಮಾಡಿದ್ದು ಅದಕ್ಕೆ ಅನುಮೊದನೆ ದೊರುಕುವುದು ಕೇವಲ ಉಪಚಾರಿಕ ಎನ್ನಲಾಗುತ್ತಿದೆ. ಈ ಕುರಿತು ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ

Gummata Nagari : ಗುಮ್ಮಟ ನಗರಿ ಸುದ್ದಿ ತಾಣ

ಹೊಸದಿಲ್ಲಿ : ರಾಜಕಾರಣಿಗಳಿಗೆ ಅದರಲ್ಲಿಯೂ ಚುನಾವಣಾ ರಾಜಾಕರಣದಲ್ಲಿ ನಿರತರಾಗಿರುವ ನೇತಾರರಿಗೆ ಶುಭ ವಾರ್ತೆ ಕಾದಿದೆ. ಸುಧಾರಣೆಯ ಹೆಸರಲ್ಲಿ ಜಾರಿಗೆ ತರಲಾದ ಚುನಾವಣಾ ವಚ್ಚದ ಮೇಲಿನ ಮಿತಿಯನ್ನು ಹೆಚ್ಚಿಸುವ ಸಂಬಂಧ ಚರ್ಚೆ ನಡೆದಿದೆ.

ವೈಯಕ್ತಿಕ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಶೇ. 10 ಹೆಚ್ಚಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಸಂಬಂಧ ಆಯೋಗವು ಸರಕಾರಕ್ಕೆ ಶಿಫಾರಸು ಮಾಡಿದ್ದು ಅದಕ್ಕೆ ಅನುಮೊದನೆ ದೊರುಕುವುದು ಕೇವಲ ಉಪಚಾರಿಕ ಎನ್ನಲಾಗುತ್ತಿದೆ. ನವೆಂಬರ್‌ನಲ್ಲಿ ಬಿಹಾರ ಅಸೆಂಬ್ಲಿ ಚುನಾವಣೆಗೂ ಮುನ್ನವೇ ಈ ಕುರಿತು ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ.

ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯ ವೆಚ್ಚ ಮಿತಿ 28 ಲಕ್ಷ ರೂಗಳಿದ್ದು, ಆಯೋಗದ ಶಿಫಾರಸು ಜಾರಿಯಾದರೇ ಅದು 30.8 ಲಕ್ಷ ರೂಗಳಿಗೆ ಹಿಗ್ಗಲಿದೆ. ಕಳೆದ ಬಾರಿ 2004ರ ಲೋಕಸಭಾ ಚುನಾವಣೆಗೂ ಮುನ್ನ ಆಯೋಗವು ಚಿನಾವಣಾ ವೆಚ್ಚದಲ್ಲಿ ಹೆಚ್ಚಳ ಮಾಡಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಮುಸುಕು, ಸ್ಯಾನಿಟೈಸರ್‌ಗಳ ಬಳಕೆ ಚುನಾವಣಾ ಪ್ರಚಾರದಲ್ಲಿ ಅತ್ಯಗತ್ಯವಾಗಿರುವ ಕಾರಣ ವೆಚ್ಚ ಹೆಚ್ಚಳಕ್ಕೆ ಬಿಜೆಪಿ ಮನವಿ ಮಾಡಿತ್ತು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.