ಯಾರ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಪಾ ಕಟಾಕ್ಷ

ಬಾದಾಮಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ

0

Gummata Nagari : Bagalkot News

ಬಾದಾಮಿ : ಮಾಜಿ ಮುಖ್ಯಮಂತ್ರಿ, ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೆದ್ದ ಬಂದ ಕ್ಷೇತ್ರ ಬಾದಾಮಿ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಗದ್ದುಗೆಗೆ ಸದಸ್ಯರ ಪೈಪೋಟಿ ಜೋರಾಗಿದೆ.

ಪುರಸಭೆ ಪ್ರತಿನಿಧಿಗಳು ಅಧಿಕಾರವಿಲ್ಲದೆ ನಿರಾಸೆನಿಂದ ಅಧಿಕಾರವನ್ನು ಎದುರು ನೋಡುತ್ತಾ 2018 ರಿಂದ 2020 ಸುಮಾರು ಎರಡು ವರ್ಷಗಳ ಕಾಲ ಕಾಯುತ್ತ ಕುಳಿತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವು ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯ ಪೈನಲ್ ಪಟ್ಟಿ ಬಿಡುಗಡೆ ಮಾಡಿದ್ದು ಬಾದಾಮಿ ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬಂದಿದೆ, ಇನ್ನೂ ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಇನ್ನೂ ಪಕ್ಷವಾರು ಬಲಾಬಲ ನೋಡಿದರೆ ಬಾದಾಮಿ ಪುರಸಭೆಯಲ್ಲಿ 23 ವಾರ್ಡಗಳಲ್ಲಿ 13 ಕಾಂಗ್ರೆಸ್ ಪಕ್ಷದ ಸದಸ್ಯರು ಆಯ್ಕೆ ಆಗಿದ್ದರೆ ಅದರಲ್ಲಿ 10 ಸ್ಥಾನವನ್ನು ಬಿಜೆಪಿ ಪಡೆದುಕೊಂಡಿದೆ.

ಅದೃಷ್ಟ ಪರೀಕ್ಷೆಯಲ್ಲಿ ಹಲವು ಆಕಾಂಕ್ಷಿಗಳು:

ಕಳೆದ ಬಾರಿ ಚುನಾವಣೆಯಲ್ಲಿ ಜೆ.ಡಿ.ಎಸ್ ಸದಸ್ಯರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡ ಫಾರೂಕಹಮ್ಮದ ದೊಡಮನಿ ಮತ್ತೊಮ್ಮೆ ಅದೃಷ್ಟದ ಬಾಗಿಲಿಗೆ ನಿಂತಿದ್ದಾರೆ.

ಇನ್ನೂ ಎಲ್ಲರ ಜೊತೆ ಒಳ್ಳೆಯ ಒಡನಾಟ, ಯಾವುದೇ ಕಾರ್ಯಕ್ರಮಗಳಲ್ಲಿ ಮುಂಚೂಣಿಲ್ಲಿ, ಮತ್ತು ಸೋಲಿಲ್ಲದ ಸರ್ದಾರ ಖ್ಯಾತಿಯ ರಾಜಮಹಮ್ಮದ ಬಾಗವಾನ ಹೆಸರು ಕೂಡ ಬಹಳ ಕೇಳಿಬರುತ್ತದೆ.

ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಮಹೇಶ ಹೊಸಗೌಡ್ರ ಕುಟುಂಬದ ಸೊಸೆ ಯಮುನಾ ಸಾಬಣ್ಣ ಹೊಸಗೌಡ್ರ, ಮಂಜುನಾಥ ಹೊಸಮನಿ ಅವರ ನಡುವೆ ತೀವ್ರ ಪೈಪೋಟಿ ನಡೆದಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಒಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಪಕ್ಷದ ವರಿಷ್ಠರ ಕೃಪಾಕಟಾಕ್ಷ ಯಾರ ಮೇಲೆ ಇದೆ, ಬಾದಾಮಿಯಲ್ಲಿ ಬಿಜೆಪಿಗರ ಆಟವು ವಿರೋಧ ಪಕ್ಷದ ನಾಯಕ ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಮುಂದೆ ನಡೆಯುವ ಕಾಂಗ್ರೆಸ್ ಪಕ್ಷದ ಅಧಿಕಾರದ ಚುಕ್ಕಾಣಿ ಹಿಡಿದು ಗದ್ದುಗೆ ಎರಲು ಸಜ್ಜಾಗಿದ್ದಾರೆ ಎಂದು ಪ್ರಜ್ಞಾವಂತರ ಲೆಕ್ಕಾಚಾರ ವಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.