Gummata Nagari

Headlines

ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣವೊಂದೆ ರಹದಾರಿ

 

ಮುಧೋಳ: ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು ಆಶಾದಾಯಕ ಬೆಳವಣಿಗೆ, ಶಿಕ್ಷಣ ಮಹಿಳೆ ಯನ್ನು ಸಶಕ್ತಗಳನ್ನಾಗಿಸಲು ಸಹಕಾರಿಯಾಗಿದೆ, ಶಿಕ್ಷಣ ಪಡೆಯುವದರಿಂದ ಬಲವಾದ ಆತ್ಮ ವಿಶ್ವಾಸ ಹೆಚ್ಚಿಸಲಿದೆ. ಎಂದು ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಹೇಳಿದರು.

ಬಾಗಲಕೋಟೆ ಬಿವಿವಿ.ಸಂಘದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟಿçÃಯ ಮಹಿಳಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು, ಭಾರತೀಯ ಸಂಪ್ರದಾಯದಲ್ಲಿ ಮಹಿಳೆಗೆ ವಿಶೇಷ ಮತ್ತು ಉನ್ನತ ಸ್ಥಾನಮಾನವಿದೆ, ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೊ ಅಲ್ಲಿ ದೈವತ್ವವು ಅರಳುತ್ತದೆ, ಪ್ರಸ್ತುತ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಜನ ಮಹಿಳೆಯರು ಇದ್ದಾರೆ, ಶೇ.50 ರಷ್ಟು ಮಹಿಳೆಯರನ್ನು ಮುಖ್ಯ ವಾಹಿನಿಗೆ ತಂದರೆ ನಮ್ಮ ಭಾರತ ದೇಶವು ಎಷ್ಟು ಸಬಲವಾಗುತ್ತದೆ ಎಂಬುದನ್ನು ನಾವಿಂದು ಊಹಿಸಬಹುದು ಎಂದರು.

ಅತಿಥಿ ಡಾ.ರೇಖಾಮನಿ ಮಾತನಾಡಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಗುರುತಿಸಿ ಕೊಂಡರೂ ಇನ್ನೂ ಸ್ವತಂತ್ರಳಾಗಿಲ್ಲ ಎಂಬುದು ಖೇದಕರ ಸಂಗತಿ, ಸಮಾಜದ ವ್ಯವಸ್ಥೆಯಲ್ಲಿ ಮಹಿಳೆಯರು ಬದುಕು ಸಾಗಿಸುವುದು ಕಷ್ಟಕರ, ಇದನ್ನು ಎದುರಿಸಿ ಮುನ್ನುಗ್ಗುವುದು ಅವಳಿಗೊಂದು ಸವಾಲು ಆಗಿದೆ ಎಂದರು.
ಪ್ರೊ.ಶಾರದಾ ಎಸ್. ಬಿರಾದಾರ, ಪ್ರೊ.ಸುಷ್ಮೀತಾ ಮುರಗೋಡ, ಪ್ರೊ.ವಿದ್ಯಾ ಎಸ್. ಶಿಂಧೆ, ಪ್ರೊ.ಕವಿತಾ ಎಸ್.ಶಿವಪ್ಪಯ್ಯನಮಠ, ಪ್ರೊ.ವೀಣಾ ಸಾಲಿಮಠ, ಪ್ರೊ.ಲಕ್ಷಿ÷್ಮÃ ಬಿರಾದಾರ, ಕು.ಅಂಭುಜಾ ಮನಗೂಳಿ ಇತರರಿದ್ದರು.

Most Popular

To Top
error: Content is protected !!