ಒಂದೇ ದಿನ 12,545 ಮಂದಿ ಕೋರೋನಾ ಮುಕ್ತ

ರಾಜ್ಯದಲ್ಲಿ ಕೊರೋನಾ ಗುಣಮುಖರ ಸಂಖ್ಯೆ ವೃದ್ಧಿ

0

ರಾಜ್ಯದಲ್ಲಿ ಈವರೆಗೆ ಕೊರೋನಾ ಹಿಮ್ಮೆಟ್ಟಿಸಿದವರ ಸಂಖ್ಯೆ 3,34,999ಕ್ಕೆ ಏರಿಕೆ ಕಂಡಂತಾಗಿದೆ. ಶುಕ್ರವಾರ 9464 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 98326ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ನಿನಲ್ಲಿ ಮಾಹಿತಿ ನೀಡಲಾಗಿದೆ.

ಬೆಂಗಳೂರು: ಇಡೀ ದೇಶವನ್ನು ಕಾಡುತ್ತಿರುವ ಕೊರೋನಾ ವಿಷಯವಾಗಿ ರಾಜ್ಯ ಭರ್ಜರಿ ದಾಖಲೆಯೊಂದನ್ನು ಸೃಷ್ಟಿ ಮಾಡಿದೆ. ಶುಕ್ರವಾರ ಒಂದೇ ದಿನ ಅಪರೂಪದ ದಾಖಲಯೆ 12,545 ಮಂದಿ ಕೊರೋನಾ ಬಾಧೆಯಿಂದ ಮುಕ್ತರಾಗಿ ಆಸ್ಪತ್ರೆಗಳಿಂದ ಹೊಬಂದಿದ್ದಾರೆ.ಇದು ಈವರೆಗಿನ ಗುಣಮುಖರ ಸಂಖ್ಯೆಯಲ್ಲಿನ ದಾಖಲೆಯ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಕೊರೋನಾ ಹಿಮ್ಮೆಟ್ಟಿಸಿದವರ ಸಂಖ್ಯೆ 3,34,999ಕ್ಕೆ ಏರಿಕೆ ಕಂಡಂತಾಗಿದೆ. ಶುಕ್ರವಾರ 9464 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 98326ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ನಿನಲ್ಲಿ ಮಾಹಿತಿ ನೀಡಲಾಗಿದೆ.

ಬೆಂಗಳೂರಿನಲ್ಲಿ ಶುಕ್ರವಾರ 3426 ಹೊಸ ಪ್ರಕರಣ ದಾಖಲಾದರೇ, 6116 ಮಂದಿ ಚೇತರಿಸಿಕೊಂಡು ಮನೆ ಸೇರಿದ್ದಾರೆ. ರಾಜ್ಯದಲ್ಲಿ ಈವರೆಗೆ 36,50,819 ಮಂದಿಯನ್ನು ಕೊರೋನಾ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಇಲಾಖೆ ಹೇಳಿದೆ. ಈ ಮಧ್ಯೆ ರಾಜ್ಯದಲ್ಲಿ ಕೊರೋನಾ ನಿರ್ನಾಮಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸುವಂತೆ ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.