ಸೆಪ್ಟೆಂಬರ್ 23- ರಾಜ್ಯದ್ಯಾಂತ ಮುಷ್ಕರ

ಎಪಿಎಂಸಿ, ಮಿಲ್, ಗೊಡೌನ್, ಬಜಾರ್,ಹಾಗೂ ಗ್ರಾಮೀಣ ಹಮಾಲಿ ಕಾರ್ಮಿಕರ ಮುಷ್ಕರ

0

ಹಲವು ಭಾರಿ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡರೂ ಸರಕಾರ ಸ್ಪಂದಿಸಲೇ ಇಲ್ಲ

ಬೆಂಗಳೂರು; ಕೋವಿಡ್-೧೯ ಲಾಕಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾದ, ಹಸಿವಿನ ದವಡೆಗೆ ದೂಡಲ್ಪಟ್ಟ ಶ್ರಮಜೀವಿಗಳಾದ ಎಪಿಎಂಸಿ, ಗ್ರಾಮೀಣ ಬಜಾರ, ಮಿಲ್ ಗೋಡೌನ್, ವೇರಹೌಸ್, ಗುಡಶೆಡ್, ಬಂದರು ಮುಂತಾದ

ವಿಭಾಗದ ಹಮಾಲಿ ಕಾರ್ಮಿಕರಿಗೆ ಆರ್ಥಿಕ ನೆರವು ಮತ್ತು ಆಹಾರ ಧಾನ್ಯಗಳ ಕಿಟ್ಟ್ನ್ನು ನೀಡಬೇಕೆಂದು ಹಲವು ಭಾರಿ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡರೂ ಸರಕಾರ ಸ್ಪಂದಿಸಲೇ ಇಲ್ಲ. ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ

ವಿಶೇಷ ಪರಿಹಾರ ಪ್ಯಾಕೇಜ್ ಸಂಕಷ್ಟಕ್ಕೀಡಾದ ಬಹುತೇಕ ಅಸಂಘಟಿತ ಕಾರ್ಮಿಕರನ್ನು ಒಳಗೊಂಡಿಲ್ಲ. ಮಾನ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಸಹಕಾರ ಸಚಿವರು ನೀಡಿದ ಭರವಸೆ ಹುಸಿಯಾಗಿದೆ ಈ ಹಿನ್ನೆಲೆಯಲ್ಲಿ ಇದೇ ಸೆಪ್ಟೆಂಬರ್ ೨೩ ಹಾಗೂ ೨೪ ರಂದು ರಾಜ್ಯದ್ಯಾಂತ ಶ್ರಮಜೀವಿ ಹಮಾಲಿ ಕಾರ್ಮಿಕರ ಕುರಿತು ಸರಕಾರ ತಾಳಿರುವ ನಿರ್ಲಕ್ಷ

ಮತ್ತು ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ ಮತ್ತು ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಎಪಿಎಂಸಿ ಮಾರುಕಟ್ಟೆಗಳು ಮಿಲ್ ಗೊಡೌನ್ ಹಾಗೂ ಬಜಾರ್ ಹಮಾಲಿ ಕಾರ್ಮಿಕರ ಮುಷ್ಕರ ನಡೆಸಿ ಜಿಲ್ಲಾಧಿಕಾರಿ ಕಚೇರಿ ಹಾಗೂ ವಿಧಾನ ಸೌಧ ಚಲೋ ನಡೆಸಲು ತೀರ್ಮಾನಿಸಿದ್ದಾರೆ.

ರಾಜ್ಯದಲ್ಲಿರುವ ಎಪಿಎಂಸಿ, ಗ್ರಾಮೀಣ ಬಜಾರ, ಮಿಲ್ ಗೋಡೌನ್, ವೇರಹೌಸ್, ಗುಡಶೆಡ್, ಬಂದರು ಮುಂತಾದ ಹಮಾಲಿ ಕಾರ್ಮಿಕರು ೪ ಲಕ್ಷದಷ್ಟಿದ್ದು ಬಹುತೇಕರು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಕ್ಕೆ

ಸೇರಿದವರಾಗಿದ್ದು ಆರ್ಥಿಕವಾಗಿ, ಸಮಾಜಿಕವಾಗಿ ಹಿಂದುಳಿದ, ಭೂರಹಿತ ಕಾರ್ಮಿಕರಾಗಿದ್ದು ದಿನದ ಕೂಲಿ ಮತ್ತು ನೆಲಗಾಳು ಇವರ ಜೀವನಾಧಾರವಾಗಿದೆ. ಸರಿಯಾದ ಸಮಾಜಿಕ ಭದ್ರತೆಯೂ ಇವರಿಗಿಲ್ಲ. ಲಾಕಡೌನ್ ಜಾರಿಯಾದ ಪ್ರಾರಂಭದಲ್ಲಿ ಸುಮಾರು ದಿನಗಳು ಬಹುತೇಕ ಮಾರುಕಟ್ಟೆಗಳು ಕಾರ್ಯನಿರ್ವಹಿಸಿಲ್ಲ. ನಂತರದ ದಿನಗಳಲ್ಲಿ

ನಿರಂತರ ವ್ಯಾಪಾರ ವಹಿವಾಟು ಇರುವ ಮುಖ್ಯ ಮಾರುಕಟ್ಟೆಗಳು ಪ್ರಾರಂಭವಾಗಿದ್ದರೂ ವಹಿವಾಟು ತೀರಾ ಕಡಿಮೆಯಾಗಿತ್ತು. ಮಾರುಕಟ್ಟೆಗಳು ನಗರ ಪ್ರದೇಶದಲ್ಲಿರುವುದರಿಂದ ಲಾಕಡೌನ್ ಸಡಿಲಗೊಳ್ಳುವರೆಗೂ ಗ್ರಾಮೀಣ ಪ್ರದೇಶದ ಮತ್ತು ಮಾರುಕಟ್ಟಗಳಿಂದ ದೂರದ ಪ್ರದೇಶದಲ್ಲಿ ವಾಸವಿರುವ ಹಮಾಲಿ ಕಾರ್ಮಿಕರಿಗೆ ಲಾಕಡೌನ್‌ನ

ನಿರ್ಭಂದನೆಗಳಿAದಾಗಿ, ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಕೆಲಸಕ್ಕೆ ಬರಲಿಕ್ಕೆ ಸಾಧ್ಯವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರಮುಖ ಮಾರುಕಟ್ಟೆಗಳು ವ್ಯಾಪಾರ ವಹಿವಾಟು ನಡೆಸುತ್ತಿದ್ದರೂ ವಾರದಲ್ಲಿ ೨-೩ ದಿನಗಳು ಮಾತ್ರ

ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು ಆ ಸಂದರ್ಭದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಕೂಲಿ ಸಿಗುವಷ್ಟು ಕೆಲಸವಿಲ್ಲ. ಆ ಕೆಲಸ ಒಟ್ಟು ಕಾರ್ಮಿಕರಲ್ಲಿ ೧೫%-೨೦% ಜನರಿಗೆ ಮಾತ್ರ ಇದೆ. ಈ ಎಲ್ಲ ಪರಸ್ಥಿತಿಯ ಹಿನ್ನಲೆಯಲ್ಲಿ ಸಾವಿರಾರು ಕಾರ್ಮಿಕರು ಉದ್ಯೂಗವನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಕೂಡಲೇ ಆರ್ಥಿಕ ನೆರವು

ನೀಡುವುದು ಅಗತ್ಯವಾಗಿದೆ. ಇತ್ತೀಚಿಗೆ ರಾಜ್ಯ ಸರಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿ ಮುಕ್ತ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಹತ್ತಾರು ವರ್ಷಗಳಿಂದ ಎಪಿಎಂಸಿ ಆವರಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಹಮಾಲಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದು ಸುಮಾರು

ಒಂದು ಲಕ್ಷದಷ್ಟು ಹಮಾಲಿ ಕಾರ್ಮಿಕರು ಸಂಕಷ್ಟಕ್ಕೀಡಾಗಲಿದ್ದಾರೆ. ಅಲ್ಲದೇ ಎಪಿಎಂಸಿ ಗಳಿಂದ ಜಾರಿಯಾಗಿರುವ ಮತ್ತು ಜಾರಿಯಾಗಬೇಕಿರುವ ಕೆಲ ಯೋಜನೆಗಳಿಂದಲೂ ವಂಚಿತರಾಗುವ ಸಾಧ್ಯತೆ ಇದೆ. ರೈತರು, ಗ್ರಾಹಕರು, ಸಣ್ಣ ವ್ಯಾಪಾರಸ್ಥರು, ಕಾರ್ಮಿಕರ ವಿರೋಧಿಯಾದ ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವ ಮೂಲಕ ರಾಜ್ಯ

ದಲ್ಲಿ ಒಂದು ಲಕ್ಷ ಜನ ಹಮಾಲಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸ್ಥಳೀಯವಾಗಿ ರಾಜ್ಯದ ಹಲವಾರು ಎಪಿಎಂಸಿಗಳಲ್ಲಿ ಮತ್ತು ನಗರ ಗ್ರಾಮೀಣ ಪ್ರದೇಶದಲ್ಲಿ ವಸತಿ ಯೋಜನೆ ಜಾರಿ ಮಾಡುವ ಪ್ರಯತ್ನಗಳು ನೆನೆಗುದಿಗೆ ಬಿದ್ದಿವೆ. ಅವುಗಳನ್ನು ಕೂಡಲೇ ಜಾರಿಮಾಡಲು ಸ್ಪಷ್ಟವಾದ ಯೋಜನೆ ರೂಪಿಸಬೇಕಾಗಿದೆ.

ರಾಜ್ಯದಲ್ಲಿ ಕರ್ನಾಟಕ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿAದ ಅಸಂಘಟಿತ ಕಾರ್ಮಿಕರನ್ನು ಗುರುತಿಸುವ ನಿಟ್ಟಿನಲ್ಲಿ “ಅಂಬೇಡ್ಕರ ಸಹಾಯ ಹಸ್ತ” ಸ್ಮಾರ್ಟ ಕಾರ್ಡ ನೀಡಲು ತೀರ್ಮಾನಿಸಿ ಅರ್ಜಿಗಳನ್ನು ಪಡೆಯಲಾಗಿದೆ. ಆದರೇ ಈವರೆಗೂ ಬಹುತೇಕ ಕಾರ್ಡಗಳು ಕಾರ್ಮಿಕರನ್ನು ತಲುಪಿಲ್ಲ. ಈಗ ಆನ್‌ಲೈನ ಅರ್ಜಿ

ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದರಿಂದ ಹಲವು ಗೊಂದಲಗಳು ಸೃಷ್ಠಿಯಾಗಿವೆ. ಸದರಿ ಮಂಡಳಿಯಿ0ದ ಕೇವಲ ಕಾರ್ಡ ನೀಡಲಾಗುತ್ತಿದೆ ಆದರೇ ಮಂಡಳಿಯಿAದ ಈ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಸೌಲಭ್ಯವಿಲ್ಲ.

ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡುವ ಯೋಜನೆ ರೂಪಿಸಲು ಸರಕಾರ ಮಂಡಳಿಗೆ ಆರ್ಥಿಕ ಸಂಪನ್ಮೂಲ ನೀಡುತ್ತಿಲ್ಲ. ಮಂಡಳಿ ಕೂಡಾ ಆರ್ಥಿಕ ಸಂಪನ್ಮೂಲ ಕ್ರೂಢಿಕರಿಸುವ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು

ರೂಪಿಸುವ ನಿಟ್ಟಿನಲ್ಲಿ ಯಾವ ಪ್ರಯತ್ನಗಳನ್ನು ನಡೆಸುತ್ತಿಲ್ಲ. ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ಬಹುದಿನಗಳ ಬೇಡಿಕೆಯಾದ ಭವಿಷ್ಯನಿಧಿ ಮತ್ತು ಪಿಂಚಣಿ ಯೋಜನೆಯನ್ನು ಜಾರಿಮಾಡಲು ಮಂಡಳಿ ಮತ್ತು ಸರಕಾರ ಮುಂದಾಗುತ್ತಿಲ್ಲ.

ಈ ಹಿನ್ನಲೆಯಲ್ಲಿ ಕೆಳಕಂಡ ಬೇಡಿಕೆಗಳಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ದಿನಾಂಕ: ಸೆ ೨೩ ಹಾಗೂ ೨೪ ರಂದು ರಾಜ್ಯದ್ಯಂತ ಎರಡು ದಿನ ಸಾಮೂಹಿಕ ಧರಣಿ, ಎರಡು ದಿನ ಹಮಾಲಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ಬೇಡಿಕೆಗಳು : ೧. ಸ್ಥಳೀಯವಾಗಿ ರಾಜ್ಯದ ಹಲವಾರು ಎಪಿಎಂಸಿಗಳಲ್ಲಿ ಮತ್ತು ನಗರ ಗ್ರಾಮೀಣ ಪ್ರದೇಶದಲ್ಲಿ ನೆನೆಗುದಿಗೆ ಬಿದ್ದಿರುವ ವಸತಿ ಯೋಜನೆ ಜಾರಿಗೆ

ಅಗತ್ಯ ಕ್ರಮವಹಿಸಬೇಕು. ಹಮಾಲಿ ಕಾರ್ಮಿಕರಿಗೆ ಸೂಕ್ತ ವಸತಿ ಯೋಜನೆ ಜಾರಿಮಾಡಬೇಕು.

೨. ಕೋವಿಡ್-೯ ಲಾಕಡೌನ್ ನಿಂದಾಗಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾದ ಎಲ್ಲಾ ಹಮಾಲಿ ಕಾರ್ಮಿಕರಿಗೆ ಕೂಡಲೇ ಆರು ತಿಂಗಳು

ತಿಂಗಳಿಗೆ ರೂ. ೭,೫೦೦ ರಂತೆ ಆರ್ಥಿಕ ನೆರವು ನೀಡಬೇಕು. ಆರು ತಿಂಗಳು ವಿವಿಧ ಆಹಾರ ವಸ್ತುಗಳಿರುವ ಉಚಿತ ರೇಷನ್ ಕಿಟ್ ನೀಡಬೇಕು.

೩. ಎಪಿಎಂಸಿ ಆವರಣದಲ್ಲಿಯ ಕೆಲಸವನ್ನೇ ನಂಬಿಕೊAಡಿರುವ ಒಂದು ಲಕ್ಷದಷ್ಟು ಹಮಾಲಿ ಕಾರ್ಮಿಕರ ಉದ್ಯೋಗವನ್ನು ಇಲ್ಲವಾಗಿಸಿ ಸಂಕಷ್ಟಕ್ಕೀಡು ಮಾಡಲಿರುವ, ಇಲಾಖೆಯ ಸೌಲಭ್ಯಗಳಿಂದ ವಂಚಿತರನ್ನಾಗಿಸುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಕೂಡಲೇ ವಾಪಸ್ಸ ಪಡೆಯಬೇಕು.

೪. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿAದ ಭವಿಷ್ಯನಿಧಿ ಯೋಜನೆ, ಪಿಂಚಣಿ ಜಾರಿಮಾಡಬೇಕು. ಯೋಜನೆಗಳ ಜಾರಿಗೆ ಸರಕಾರ ಅಗತ್ಯ ಆರ್ಥಿಕ ಸಂಪನ್ಮೂಲ ನೀಡಬೇಕು.

೫. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚಿಸಿದ ಕೂಲಿಯೊಂದಿಗೆ ಕೆಲಸ ೨೦೦ ದಿನಗಳಿಗೆ ಹೆಚ್ಚಿಸಬೇಕು, ನಗರ ಪ್ರದೇಶಗಳ ಬಡವರಿಗೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಬೇಕು.

೬. ಪ್ರಧಾನಮಂತ್ರಿ ಜೀವನ ಭೀಮಾ ಮತ್ತು ಸುರಕ್ಷಾ ವಿಮಾ ಯೋಜನೆಗಳಿಗೆ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ಕಾರ್ಯ ಕೂಡಲೇ ಪ್ರಾರಂಭಿಸಬೇಕು. ನೋಂದಾಯಿತ ಕಾರ್ಮಿಕರಿಗೆ ಮರಣ ಪರಿಹಾರ ನೀಡಬೇಕು ಮತ್ತು ಯೋಜನೆಗೆ ಸೇರುವ ಕಾರ್ಮಿಕರ ವಯಸ್ಸಿನ ಮಿತಿ ೬೦ ವರ್ಷಕ್ಕೆ ಹೆಚ್ಚಿಸಬೇಕು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.