ಸುವರ್ಣ ಚಾನೆಲ್ ವಿರುಧ್ದ ಕ್ರಮಕ್ಕೆ ಆಗ್ರಹ

ಸುವರ್ಣ ಟಿವಿ ಚಾನೆಲ್ ನವರು 'ಡ್ರಗ್ಸ್ ಜಿಹಾದ್' ಎನ್ನುವ ಪದ ಬಳಕೆ

0

‘ಡ್ರಗ್ಸ್ ಜಿಹಾದ್’ ಪ್ರಚೋದನಾತ್ಮಕ ಪದ ಬಳಕೆ ಮಾಡಿದ ಸುವರ್ಣ ಚಾನೆಲ್ ವಿರುಧ್ದ ಕ್ರಮಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

ಬೆಂಗಳೂರು : ಒಂದು ಕಡೆ ಪೋಲೀಸ್ ಇಲಾಖೆ ಡ್ರಗ್ ಮಾಫಿಯಾವನ್ನು ಬಯಲಿಗೆಳೆಯಲು ಹಗಲಿರುಳು ಶ್ರಮಿಸುತ್ತಿದ್ದರೆ, ಇತ್ತ ಮಾಧ್ಯಮಗಳು ಮಾತ್ರ ನಾಲಿಗೆಯ ಮೇಲೆ ಹಿಡಿತವಿಲ್ಲದೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ಹಂಚು ಹಾಕುತ್ತಿರುವುದು ವಿಷಾದನೀಯ. ಸುವರ್ಣ ಟಿವಿ ಚಾನೆಲ್ ನವರು ‘ಡ್ರಗ್ಸ್ ಜಿಹಾದ್’ ಎನ್ನುವ ಪದ ಬಳಕೆ ಮಾಡಿ, ಇಸ್ಲಾಂ ಧರ್ಮೀಯರ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವುದು ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೀರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ

ಈ ಬಗ್ಗೆ ಮಾತನಾಡಿದ ಅವರು, ಇಸ್ಲಾಮ್ ಧರ್ಮದ ಧಾರ್ಮಿಕ ಪದಕ್ಕೆ ಜೋಡಿಸಿ ಮುಸ್ಲಿಮರನ್ನು ಪ್ರಚೋದಿಸುವ ಕೆಲಸದಲ್ಲಿ ಸುವರ್ಣ ಟಿವಿ ಮಾಧ್ಯಮ ನಿರತವಾಗಿದೆ. ‘ಡ್ರಗ್ಸ್ ಜಿಹಾದ್’ ಎಂಬ ಪದ ಬಳಸಿ ಸುವರ್ಣ ನ್ಯೂಸ್ ಚಾನಲ್ ವರದಿ ಮಾಡಿದ ಬಗ್ಗೆ ಚಾನಲ್ ನ ಮುಖ್ಯಸ್ಥ ರವಿ ಹೆಗಡೆಯವರಲ್ಲಿ ಫೋನ್ ಮಾಡಿ ಸ್ಪಷ್ಟೀಕರಣ ಕೇಳಿದಾಗ ‘ಆ ವಿಷಯ ನನ್ನ ಗಮನಕ್ಕೆ ಬರದೆ ಅಜಿತ ಹನುಮಕ್ಕನವರ್ ಎಂಬ ಪತ್ರಕರ್ತ ಅದನ್ನು ಪ್ರಕಟಿಸಿದ್ದಾರೆ’ ಎಂದೂ, ಈ ಪದವನ್ನು ನಾವು ಬಳಕೆ ಮಾಡುವುದಲ್ಲ ಬದಲಾಗಿ ಜನರು ಬಳಸುದನ್ನು ನಾವು ಅದನ್ನು ಪ್ರಕಟಿಸುವುದೆಂದು ಜನರ ಮೇಲೆ ಗೂಬೆ ಕೂರಿಸುವ ಪ್ರಯತ್ನಪಟ್ಟರು. ಆಗ ಚಾನಲ್ ನ ಮುಖ್ಯಸ್ಥರನ್ನು ತರಾಟೆಗೆ ತಗೊಂಡು ‘ಯಾಕೆ ಈ ರೀತಿ ಮಾಡುತ್ತೀರಿ’ ಎಂದು ಕೇಳಿದಾಗ ಅದು ಅಜಿತ್ ರವರು ಮಾಡಿದ ಕಾರ್ಯಕ್ರಮ ಅವರ ಜೊತೆಗೆ ಮಾತನಾಡಿ ಎಂದು ಹೇಳಿ ಜಾರಿಕೊಂಡರು.

ಪ್ರಚೋದನಾತ್ಮಕ ಪದ ಬಳಸಿ, ಬ್ರೇಕಿಂಗ್ ನ್ಯೂಸ್ ಕೊಟ್ಟು ಒಂದು ಸಮುದಾಯವನ್ನು ಗುರಿ ಮಾಡಿ ಅವರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ವ್ಯವಸ್ಥಿತವಾಗಿ ಮಾಡುವ ಬಗ್ಗೆ ಹಾಗೂ ಮಾಧ್ಯಮಗಳಿಗೆ ಜವಾಬ್ದಾರಿ ಇದ್ದು ಸಮಾಜದಲ್ಲಿ ಅಶಾಂತಿಯನ್ನು ಹರಡುವ ಕೆಲಸವನ್ನು ಮಾಡಬಾರದೆಂದು ಮಾಧ್ಯಮಗಳಿಗೆ ಒತ್ತಾಯಿಸಿದರು.

ಕೋಮು ಭಾವನೆಗಳಿಗೆ ಧಕ್ಕೆ ತರುವಂತಹ ಪದಬಳಕೆ ಮಾಡಿ ಸಮಾಜದಲ್ಲಿ ಶಾಂತಿ ಹದಗೆಡಿಸಲು ಯತ್ನಿಸುವ ಇಂತಹ ಮಾಧ್ಯಮಗಳ ವಿರುದ್ಧ ಕೂಡಲೇ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.