ಎಸಿಬಿ ದಾಳಿ: ಲೆಕ್ಕ ಪರಿಶೋಧನಾಧಿಕಾರಿ ಬಂಧನ

0

Gummata Nagari : Yadgiri News

ಯಾದಗಿರಿ : ಹಿರಿಯ ಉಪ ನಿರ್ದೇಶಕರ ಕಚೇರಿಯ ಸ್ಥಳೀಯ ಲೆಕ್ಕ ಪರಿಶೋಧನ ವರ್ತುಲ ಯಾದಗಿರಿಯ ಲೆಕ್ಕ ಪರಿಶೋಧನಾಧಿಕಾರಿ ರವಿಕುಮಾರ ಯಾದಗಿರಿ ತಾಲೂಕಿನ ಪಸಪೂಲ್ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯ ಬಳಿ 30ಸಾವಿರ ರೂ. ಲಂಚದ ಬೇಡಿಕೆ ಆಧಾರದ ಮೇಲೆ ಎ.ಸಿ.ಬಿ ಅಧಿಕಾರಿಗಳು ಬಂದಿಸಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಆರಕ್ಷಕ ನಿರೀಕ್ಷಕರು ತಿಳಿಸಿದ್ದಾರೆ.

ಪಸಪೂಲ್ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ 2019-20ನೇ ಸಾಲಿನ ಲೆಕ್ಕ ತನಿಖೆ ಕೈಕೊಂಡು ಕೆಲವು ನ್ಯೂನ್ಯತೆಗಳನ್ನು ಮಾಡಿ, 40 ಸಾವಿರ ಲಂಚದ ಬೇಡಿಕೆ ಇಟ್ಟು ಅದರಲ್ಲಿ 30ಸಾವಿರ ರೂ. ಗಳಿಗೆ ಒಪ್ಪಿಕೊಂಡಿದ್ದು, ಪದೆ ಪದೆ ಫೋನ್ ಮಾಡಿ ಲಂಚದ ಹಣಕ್ಕಾಗಿ ನನಗೆ ತೊಂದರೆ ಕೊಡುತ್ತಿದ್ದ ಲೆಕ್ಕ ಪರಿಶೋಧನಾಧಿಕಾರಿ ರವಿಕುಮಾರ ಅವರ ಮೇಲೆ ಭ್ರಷ್ಟಾಚಾರ ಕಾಯ್ದೆಯಡಿ ಕ್ರಮ ಜರುಗಿಸಬೆಕು ಎಂದು ಎಸಿಬಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.

ಎಸಿಬಿ ಈಶಾನ್ಯ ವಲಯ ಕಲಬುರಗಿಯ ಪೊಲೀಸ್ ಅಧೀಕ್ಷಕರಾದ ಮಹೇಶ ಮೇಘಣ್ಣನವರ ಮಾರ್ಗದರ್ಶನದಲ್ಲಿ ದೂರಿನ ಪ್ರಕಾರ ತನಿಖೆಯ ಕಾಲಕ್ಕೆ ಆಪಾದಿತ ಲೆಕ್ಕ ಪರಿಶೋಧನಾಧಿಕಾರಿ ರವಿಕುಮಾರ ಅವರು ಸೆಪ್ಟೆಂಬರ್ 23ರಂದು ಬೆಳಿಗ್ಗೆ 11:20ಗಂಟೆಗೆ ಮಲ್ಲಣ್ಣ ಸಂಕನೂರು ಇವರಿಂದ 30ಸಾವಿರ ರೂ ಲಂಚದ ಹಣ ತೆಗೆದುಕೊಂಡಾಗ ಎಸಿಬಿ ಅಧಿಕಾರಿಗಳಾದ ಡಿಎಸ್‌ಪಿ ಬಷೀರೋದ್ದಿನ್ ಪಟೇಲ್, ಪಿಐ ಗುರುಪಾದ ಬಿರದಾರ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.