ಯಾದಗಿರಿ ಜಿಲ್ಲೆ: 16 ಲಕ್ಷ ಮೌಲ್ಯದ ಮದ್ಯ ನಾಶ

0

Gummata Nagari : Yadgiri News

ಯಾದಗಿರಿ : ನಗರದ ಹೊರಭಾಗದಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಮದ್ಯ ಸಂಗ್ರಹ ಘಟಕದ ಗೋದಾಮಿನಲ್ಲಿ ಮಾರಾಟವಾಗದೆ ಉಳಿದಿದ್ದ 16 ಲಕ್ಷ ರೂ. ಅವಧಿ ಮುಗಿದ ಮದ್ಯವನ್ನು ನಾಶಗೊಳಿಸಲಾಯಿತು.

ಅಬಕಾರಿ ನಿರೀಕ್ಷಕ ಪ್ರಕಾಶ ರಾಠೋಡ್, ಮಳಿಗೆ ಅಬಕಾರಿ ನೀರಿಕ್ಷಕ ಪ್ರಕಾಶ ಮಾಕೊಂಡ ನೇತೃತ್ವದ ತಂಡ ಮದ್ಯ ನಾಶ ಪಡಿಸಿದೆ.

ಅವಧಿ ಮುಗಿದ ಮದ್ಯವನ್ನು ನಾಶ ಮಾಡಲು ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆ ಕರ್ನಾಟಕ ರಾಜ್ಯ ಪಾನೀಯ ನಿಗಮದ ನಿಯಮಿತ ಮದ್ಯ ಸಂಗ್ರಹದ ಗೋದಾಮಿನ ಆವರಣದಲ್ಲಿ ಗುಂಡಿ ತೊಡಿ, ಮಾರಾಟವಾಗದೆ ಅವಧಿ ಮುಗಿದ ಪೋಸ್ಟ್ ರ ಗೋಲ್ಡ್ 399 ಪೆಟ್ಟಿಗೆ, ಪೊಸ್ಟರ್ ಲಾಗರ್ 98 ಬಾಕ್ಸ್, ನಾಕೌಟ್ ಬಿಯರ್ 531 ಸೇರಿ 1028 ಮದ್ಯದ ಬಾಕ್ಸ್ಗಳ ನಾಶ ಮಾಡಿದರು.

ಹೀಗೆ ಅವಧಿ ಮುಗಿದ ಒಟ್ಟು 16 ಲಕ್ಷ ರೂ ಮೌಲ್ಯದ ಮದ್ಯ ನಾಶ ಮಾಡಲಾಗಿದೆ.ನಂತರ ಅಧಿಕಾರಿಗಳು ಜೆಸಿಬಿ ಮೂಲಕ ನಾಶ ಮಾಡಿದ ಮದ್ಯವನ್ನು ಮಣ್ಣು ಮುಚ್ಚಿ ಸುರಕ್ಷತೆ ನಿಯಮ ಪಾಲನೆ ಮಾಡಲಾಯಿತು.

ಅಬಕಾರಿ ಅಧಿಕಾರಿ ಶ್ರೀರಾಮ ರಾಠೋಡ್ ಮಾತನಾಡಿ, ಅವಧಿ ಮುಗಿದ ಮದ್ಯವನ್ನು ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ, ಪರಿಸರಕ್ಕೆ ಧಕ್ಕೆಯಾಗದಂತೆ ಇಲಾಖೆಯು ಅಗತ್ಯ ಎಚ್ಚರಿಕೆ ವಹಿಸಿ ನಾಶ ಮಾಡಲಾಗಿದೆ ಎಂದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.