ಗ್ರಾಮದ ಚರಂಡಿಯ ನೀರು ಮನೆಯ ಅಂಗಳದಲ್ಲಿ ಗ್ರಾಮಸ್ಥರು ಆಕ್ರೋಶ

0

Gummata Nagari : Yadagir

ಕೆಂಭಾವಿ :- ಕೆಂಭಾವಿ ಸಮೀಪದ ಹೆಗ್ಗನದೊಡ್ಡಿ ಗ್ರಾಮದಲ್ಲಿ ಸುಮಾರು 3ತಿಂಗಳಿನಿಂದ ಗ್ರಾಮದಲ್ಲಿ ರಸ್ತೆ ಶುದ್ಧ ಕುಡಿಯುವ ನೀರಿನ ಕೊಳವೆಗಳನ್ನು ಜೋಡಿಸುವುದಕ್ಕಾಗಿ ರಸ್ತೆಯನ್ನು ಅಗೆದು ಹಾಳುಗೆಡುವಿರುತ್ತಾರೆ. ಇದೇ ನೆಪವಾಗಿರಿಸಿಕೊಂಡು ಮೂರು ತಿಂಗಳನಿಂದ ಜನ ಸಾಮಾನ್ಯರಿಗೆ ತಿರುಗಾಡಲು ರಸ್ತೆಯಿಲ್ಲದಂತಾಗಿದೆ.

ಕೋರೊನಾ ಮಾಹಾಮಾರಿ ಸಂದರ್ಭದಲ್ಲಿ ಆರೋಗ್ಯದ ದೃಷ್ಟಿಯಲ್ಲಿ ಮೊದಲೇ ಪರಿಣಾಮಕಾರಿಯಾಗಿದ್ದು ಆದರೆ ಇದರ ನಡುವೆ ರಸ್ತೆಯಲ್ಲಿ ನೀರು ನಿಂತು ಕ್ರಿಮಿಕೀಟಗಳು ಉತ್ಪತ್ತಿಯಾಗಿ ಸೊಳ್ಳೆಗಳ ಹಾವಳಿ ಜಾಸ್ತಿಯಾಗಿದೆ ಇದರಿಂದ ಗ್ರಾಮದ ಜನತೆಗೆ ಆರೋಗ್ಯ ಸಮಸ್ಯೆಯಾಗುತ್ತಿದೆ.

ಚರಂಡಿ ವ್ಯವಸ್ಥೆ ಇಲ್ಲಾ ಜೊತೆಗೆ ರಸ್ತೆ ಯಾವ ರೀತಿ ಹದಗೆಟ್ಟಿದೆ ಅಂದರೆ ಹೇಳಲು ಅಸಾಧ್ಯ. ಗ್ರಾಮದ ರಸ್ತೆಗಳಲ್ಲಿ ಹರಿಯುವ ಮಲೀನ ನೀರು ಮನೆಯ ಅಂಗಳದಲ್ಲಿ ನುಗ್ಗುತ್ತಿದ್ದು ಜನಸಾಮಾನ್ಯರ ಸಮಸ್ಯೆ ಹೇಳತೀರದಾಗಿದೆ..ಇಷ್ಟಾದರೂ ಕೂಡ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಕೂಡ ಬಂದಿಲ್ಲ.
ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಕಡೆ ಗಮನ ಹರಿಸಿ ಸೂಕ್ತ ಕ್ರಮಕ್ಕಾಗಿ ಎದುರು ನೋಡುತ್ತಿರುವ ಹೆಗ್ಗನದೊಡ್ಡಿ ಗ್ರಾಮಸ್ಥರು.

3ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಸಲುವಾಗಿ ರಸ್ತೆಯನ್ನು ಅಗೆದು ಹೋಗಿದ್ದಾರೆ ಆದರೆ ಇದುವರೆಗೆ ಆ ರಸ್ತೆಯನ್ನು ಮುಚ್ಚದೆ ಇರುವುದರಿಂದ ಆ ರಸ್ತೆಯ ಚರಂಡಿಯ ನೀರು ಗ್ರಾಮದಲ್ಲಿ ಮನೆಯ ಅಂಗಳಕ್ಕೆ ಬರುತ್ತಿವೆ ಇದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಕೂಡಲೇ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು.

ಮಲ್ಲಪ್ಪ ಕಟ್ಟಿಮನಿ ಹೆಗ್ಗಣದೊಡ್ಡಿ ಗ್ರಾಮಸ್ಥ

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.