ರೈತರ 51 ಲಕ್ಷ ದುರ್ಬಳಕೆ: ಆರೋಪ

0

Gummata Nagari : Yadgiri News

ಶಹಾಪುರ : ತಾಲೂಕಿನ ಹೊತಪೇಠ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಜೊತೆ ಯಾದಗಿರಿಯ ಸಹಕಾರಿ ಸಂಘಗಳ ಸಹಾಯಕ ನಿಭಂದಕರು ಶಾಮಿಲಾಗಿ 2015-17ರ ವರೆಗಿನ ರೈತರ ಹೊಸ ನೊಂದಾವಣಿಯ 15 ಲಕ್ಷ ಮತ್ತು 2015-16ನೇ ಸಾಲಿನ 1438 ರೈತರ ಬೆಳೆ ವಿಮೆ ಒಟ್ಟು 51 ಲಕ್ಷ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಕರ್ನಾಟಕ ರಾಜ್ಯ ದಲಿತ ಸರ್ವೋದಯ ಸಮಿತಿ ಜಿಲ್ಲಾಧ್ಯಕ್ಷ ಹೊನ್ನಯ್ಯ ಪೂಜಾರಿ ಆರೊಪಿಸಿದ್ದಾರೆ.

ಈ ವರದಿಯ ಕುರಿತು ಅಧಿಕಾರಿಗಳಿಂದ ಪರಿಶೀಲಿಸಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳು ಹೋತಪೇಠ ಕಾರ್ಯನಿರ್ವಾಹಕ ಅಧಿಕಾರಿಯನ್ನು ಅಮಾನತು ಮಾಡಿ ಆತನ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಆಸ್ತಿಯನ್ನು ಮುಟ್ಟಿಗೊಲು ಹಾಕಿಕೊಳ್ಳಿ ಎಂದು ದೂರವಾಣಿಯ ಮೂಲಕ ನಮ್ಮ ಮುಂದೆಯೆ ಆದೇಶಿಸಿದರು, ಯಾದಗಿರಿಯ ಸಹಕಾರಿ ಸಂಘಗಳ ನಿಭಂಧಕರಾದ ಕೆ.ಎಂ. ಪೂಜಾರಿ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ, ನಾವು ಕೇಳಿದರೆ ನಮ್ಮ ವಿರುದ್ದ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ, ಇಬ್ಬರು ಸೇರಿ ಸರ್ಕಾರಕ್ಕೆ ವಂಚನೆಮಾಡಿ, ರೈತರಿಗೆ ದ್ರೋಹ ಬಗೆದು ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪವ್ಯಕ್ತಪಡಿಸಿದರು.

ನಂತರ ಕರವೇ ಯುವ ಘಟಕ ತಾಲೂಕು ಅಧ್ಯಕ್ಷರಾದ ಸಿದ್ದು ಪಟ್ಟೇದಾರ ಮಾತನಾಡಿ, 2009-2020ರವರೆಗೆ ಡಿ(9) ಖಾತೆಯ ರೈತರ ಸಾಲ ಮಂಜುರಾತಿ ಮಾಹಿತಿ ನೀಡುತ್ತಿಲ್ಲ, ಕಾರ್ಯದರ್ಶಿ ತಮ್ಮ ಸ್ವಂತ ಕುಟುಂಬದ ಜನರ ಸದಸ್ಯರಿಗೆ ಆಸ್ತಿ ಇರದೆ ಇದ್ದರು ಸಾಲ ಮಂಜುರು ಮಾಡಿ ಅಧಿಕಾರ ದುರುಪಯೊಗ ಮಾಡಿದ್ದಾರೆ, ಜೊತೆಗೆ 3-4 ವರ್ಷಗಳಿಂದ ಕಚೇರಿ ಬೀಗ ತೆಗೆಯದೆ ದುರಾಡಳಿತ ತೊರೊತ್ತಿದ್ದಾರೆ, ಅದರೊಂದಿಗೆ ಸೆಪ್ಟೆಂಬರ 17 ರಂದು ಕಲ್ಯಾಣ ಕರ್ನಾಟಕ ವಿಮೊಚನಾ ದಿನಾಚರಣೆಯಂದು ಕಚೇರಿಯಲ್ಲಿ ಧ್ವಜಾರೋಹಣ ಮಾಡಿಲ್ಲಿ, ಈ ಎಲ್ಲಾ ವಿಷಯಗಳು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿನ ವರದಿ ಹಾಗೂ ತಮ್ಮ ಗಮನಕ್ಕಿದ್ದರು ಯಾದಗಿರಿ ಸಹಾಯಕ ಸಂಘಗಳ ನಿಭಂಧಕರು ಗೊತ್ತಿದ್ದರು ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ, ಆದ್ದರಿಂದ ಈ ಇಬ್ಬರು ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತನಿಖೆಗೆ ಆದೇಶಿಸಲಾಗಿದೆ. ಬೋರ್ಡ್ ಕಾಲಾವಧಿ ಅಂತ್ಯಗೊಂಡಿದೆ, ಚುನಾವಣೆ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಯಾದಗಿರಿ ಸಹಕಾರಿ ಸಂಘಗಳ ನಿಭಂಧಕರು ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.