ಚರಂಡಿ ನೀರಿಗೆ ಮಂಡಗಳ್ಳಿ ಅಂಗನವಾಡಿ ಕೇಂದ್ರ ದ್ವೀಪ

0

Gummata Nagari : Yadgiri News

ಶಹಾಪುರ : ಪುಟ್ಟ ಮಕ್ಕಳಿಗೆ ಆಶಾಕಿರಣವಾದ ಅಂಗನವಾಡಿ ಕೆಂದ್ರದ ಸುತ್ತಮುತ್ತಲಿನಲ್ಲಿ ಚರಂಡಿ ನೀರು ಅವರಿಸಿಕೊಂಡರೂ ದುರ್ವಾಸನೆ ಬೀರಿದರೂ, ಮರಮ ಹಾಕದೆ ಅನೂಕೂಲ ಮಾಡದೆ ಇರುವ ಗ್ರಾಮ ಪಂಚಾಯತ ಆಡಳಿತ ಅಸ್ಥವ್ಯಸ್ಥಗೊಂಡಿದೆ.

ಮೂಲಭೂತ ಸೌಕರ್ಯ ನೀಡುವ ಗ್ರಾಪಂ, ಅಧಿಕಾರಿಗಳು ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಕನಿಷ್ಠ ಸೌಲಭ್ಯ ಒದಗಿಸುವಲ್ಲಿ ಮುಂದಾಗದ ಗ್ರಾಮ ಆಡಳಿತ ನಿರಾವಸ್ತೆಗೊಂಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಮಲಕಣ್ಣ ಚಿಂತಿ ಸಾಹು ಆರೋಪಿಸಿದರು.

ಪತ್ರಿಕೆಗೆ ಹೇಳಿಕೆ ನೀಡಿರುವ ಅವರು, ಈ ಅಂಗನವಾಡಿ ಕೇಂದ್ರಕ್ಕೆ ಗ್ರಾಮದ 40ಕ್ಕೂ ಹೆಚ್ಚು ಮಕ್ಕಳು ದಾಖಲಾತಿ ಹೊಂದಿದ್ದು ಅಂಗನವಾಡಿ ಸಹಾಯಕರು ಮಕ್ಕಳನ್ನು ಕರೆ ತಂದು ಅಂಗನವಾಡಿ ಕೆಂದ್ರದ ಒಳಗೆ ಹೋಗಲು ಹರಸಾಹಸ ಪಡಬೇಕಾಗಿದೆ. ಅಕ್ಕಪಕ್ಕದ ಮನೆಗಳಲ್ಲಿ ಹಾವುಗಳ ಕಾಟ ಹೆಚ್ಚಾಗುತ್ತಿದೆ ಈ ಕುರಿತು ಸಾಕಷ್ಟು ಬಾರಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ನೀಡಿದರೂ ಗಮನ ಹರಿಸುತ್ತಿಲ್ಲ ಅಲ್ಲದೆ ತಾಪಂ ಶಿಶು ಅಭಿವೃದ್ಧಿ ಅಧಿಕಾರಿಗಳು ಸ್ಪಂದನೆ ಮಾಡದೆ ಬೇಜವಾಬ್ದಾರಿತನ ವರ್ತನೇ ತೊರುತ್ತಿದ್ದಾರೆ. ಅಂಗನವಾಡಿ ಕೇಂದ್ರದ ಮುಂದೆ ಸರಾಗವಾಗಿ ನೀರು ಹೋಗಲು ಚರಂಡಿಗಳಿಲ್ಲ ಸ್ವಚ್ಚತೆ ಮರಿಚಿಕೆಯಾಗಿದೆ, ಮಕ್ಕಳಿಗೆ ಮಾರಕ ರೋಗಗಳ ಭಯ ಉಂಟಾಗುತ್ತಿದ್ದು ಕೂಡಲೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮಕ್ಕಳೊಂದಿಗೆ ಅಂಗನವಾಡಿ ಕೇಂದ್ರದ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಮಲಕಣ್ಣ ಚಿಂತಿ ಸಾಹು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕೊವಿಡ್ ಆತಂಕದಲ್ಲಿ ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡಬೇಕು ಎಂದು ನಿರ್ದೇಶನ ನೀಡಿದರೂ ಗ್ರಾಪಂ ಅಧಿಕಾರಿಗಳು ಚರಂಡಿ ಸ್ವಚ್ಚತೆ ಮಾಡುತ್ತಿಲ್ಲ ಅಲ್ಲಲ್ಲಿ ಚರಂಡಿಗಳು ತುಂಬಿಕೊಂಡು ಕೆಟ್ಟ ವಾಸನೆ ನೀಡುತ್ತಿವೆ ಸೊಳ್ಳೆಗಳು ಹೆಚ್ಚಾಗುತ್ತಿವೆ ಇಂದಿನವರೆಗೂ ಯಾವುದೆ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಮತ್ತು ರಸ್ತೆಗೆ ಮುಳ್ಳು ಕಂಠಿಗಳಿಂದ ಅವರಿಸಿಕೊಂಡರೂ ಯಾವುದೆ ಸುಧಾರಣೆಗೆ ಮುಂದಾಗಿಲ್ಲ ಎಂದು ದೂರಿದರು.

ಕೂಡಲೇ ಮಂಡಗಳ್ಳಿ ಗ್ರಾಮಕ್ಕೆ ಮೂಲ ಸೌಕರ್ಯಗಳಿಗೆ ಮತ್ತು ಸ್ವಚ್ಚತೆ ಕಾರ್ಯಗಳಿಗೆ ಮುಂದಾಗಬೆಕು ಎಂದು ಅವರು ಆಗ್ರಹಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.