ಅಂಬಾ ಭವಾನಿ ದರ್ಶನಕ್ಕೂ ಕೊರೊನಾ ಅಡ್ಡಿ

ಅ.31ರವರೆಗೆ ತುಳಜಾಪೂರ ಮಂದಿರಕ್ಕೆ ಭಕ್ತರಿಗಿಲ್ಲ ಅವಕಾಶ

0

Gummata Nagari : Yadgiri News

ಯಾದಗಿರಿ : ದಸರಾ ಹಬ್ಬ ಬಂದರೆ ಇಡೀ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶ ಹಾಗೂ ಉತ್ತರ ಕರ್ನಾಟಕದ ಬಹುತೇಕ ರಸ್ತೆಗಳಲ್ಲಿ ತುಳಜಪೂರ ಅಂಭಾ ಭವಾನಿ ತಾಯಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ವಾಹನ ಹಾಗೂ ಪಾದಯಾತ್ರೆ ಮೂಲಕ ತೆರಳುತ್ತಾರೆ. ಆದರೆ ಈ ಬಾರಿ ದೇವಿಯ ದರ್ಶನಕ್ಕೂ ಕೊರೋನಾ ವಿಘ್ನವನ್ನುಂಟು ಮಾಡಿದೆ. ಕೊರೋನಾ ಹೆಚ್ಚುತ್ತಿರುವುದರಿಂದ ದೇವಿಯ ದರ್ಶನ ಸಹ ಬಂದ್ ಮಾಡಿದ್ದರಿಂದ ಭಕ್ತರಿಗೆ ನಿರಾಸೆಯುಂಟಾಗಿದೆ.

ದಸರಾ ಹಬ್ಬಕ್ಕೂ ಮುಂಚೆಯೇ ದೇವಿಯ ದರ್ಶನ ಪಡೆದುಕೊಂಡು ಬಂದ ಬಳಿಕವೇ ಮನೆಯಲ್ಲಿ ಘಟಸ್ಥಾಪನೆ ಮಾಡುವುದು ಈ ಬಾಗದ ಜನರ ವಾಡಿಕೆ. ಹೀಗಾಗಿ, ದಸರಾ ಮುಂಚೆ ಹಾಗೂ ಹಬ್ಬದ ಬಳಿಕ ತುಳಜಾಪೂರಕ್ಕೆ ಯಾದಗಿರಿ, ಕಲಬುರಗಿ, ಬೀದರ್ ಹಾಗೂ ಬಿಜಾಪುರ ಜಿಲ್ಲೆಯಿಂದ ಲಕ್ಷಾಂತರ ಭಕ್ತರು ತೆರಳಿ ದರ್ಶನ ಪಡೆದುಕೊಳ್ಳುತ್ತಾರೆ. ಈ ಬಾರಿ ಕೊರೋನಾ ರೋಗ ವ್ಯಾಪಕವಾಗಿ ಹಾರಡುತ್ತೀರುವ ಹಿನ್ನಲೆ ಅಕ್ಟೋಬರ್ 01 ರಿಂದ 31 ರ ವರೆಗೆ ಭಕ್ತರಿಗೆ ತುಳಜಾಪೂರ ಅಂಬಾ ಭವನಿ ತಾಯಿಯ ದರ್ಶನ ಇಲ್ಲ ಎಂದು ಶ್ರೀ ತುಳಜಾ ಭವನಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾರಾಷ್ಟ್ರ ಸರ್ಕಾರದ ಕಂದಾಯ, ಅರಣ್ಯ, ಗೃಹ ಇಲಾಖೆ ಹಾಗೂ ಉಪಮುಖ್ಯಮಂತ್ರಿಗಳು ಹಾಗೂ ಉಸ್ಮಾನಾಬಾದ್ ಜಿಲ್ಲಾಧಿಕಾರಿ ಅವರ ಸೂಚನೆ ಹಿನ್ನಲೆಯಲ್ಲಿ ಭಕ್ತರಿಗೆ ಧಾರ್ಮಿಕ, ಪ್ರಾಥನಾ ಸ್ಥಳಕ್ಕೆ ಭೇಟಿ ನೀಡುವುದನ್ನು ನಿರ್ಬಂಧಿಸುವ ನಿರ್ಧಾರಕೈಗೊಳ್ಳಲಾಗಿದೆ. ಮಂದಿರದಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದಿಲ್ಲ. ಕೋಟ್ಯಾಂತರ ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ತುಳಜಾ ಭವನಿ ನವರಾತ್ರಿ ಮಹೋತ್ಸವವನ್ನು ಆತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಕೊರೋನಾ ಹರಡುತ್ತಿರುವ ಈ ವೇಳೆಯಲ್ಲಿ ಸ್ಥಳಿಯ ತುಳಜಾಪೂರ ಪಟ್ಟಣದ ನಿವಾಸಿಗಳು, ಭಕ್ತರು ಸಹ ಮಂದಿರಕ್ಕೆ ಬರಬಾರದು. ಭವಾನಿ ಜ್ಯೋತಿ ತರುವ ಭಕ್ತರಿಗೂ ಸಹ ಪ್ರವೇಶವಿಲ್ಲ. ನವರಾತ್ರಿ ಉತ್ಸವ ಹಾಗೂ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೆರಿಸಲು ಆರ್ಚಕರು ಹಾಗೂ ಸಿಬ್ಬಂದಿಗಳಿಗೆ ಮಾತ್ರ ಕಲ್ಪಿಸಲಾಗಿದೆ. ಆದರೂ, 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಸೂಚಿಸಲಾಗಿದೆ.

ಆನ್‌ಲೈನ್ ದರ್ಶನದ ವ್ಯವಸ್ಥೆ:

ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರದ ಶ್ರೀ ತುಳಜಾ ಭವನಿ ಮಂದಿರ ಸಂಸ್ಥಾನದಿಂದ ಕೊರೋನಾ ಹಿನ್ನಲೆಯಲ್ಲಿ ಈ ಬಾರಿ ಆನ್‌ಲೈನ್ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. www.shrituljabhavani.org ಮೂಲಕ ದೇವಿಯ ದರ್ಶನ ಪಡೆಯಬಹುದಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ, ಸ್ನಾಸಿಟೈಜ್ ಬಳಕೆ ಮಾಡಿ, ಮನೆಯಲ್ಲಿಯೇ ಇರಿ. ಸುರಕ್ಷಿತವಾಗಿರಿ. ದೇವಿಯ ದರ್ಶನವನ್ನು ಆನ್‌ಲೈನ್‌ನಲ್ಲೇ ಪಡೆಯಿರಿ ಎಂದು ಮಂದರಿದ ಆಡಳಿತ ಮಂಡಳಿಯು ಮನವಿ ಮಾಡಿದೆ.

ಆರಾಧ್ಯ ದೇವತೆ:

ದಕ್ಷಿಣ ಕರ್ನಾಟಕದ ಜನರಿಗೆ ಮೈಸೂರಿನ ದಸರಾ ಹೇಗೋ, ಉತ್ತರ ಕರ್ನಾಟಕದ ಜನತೆಗೆ ತುಳಜಾಪುರದ ನವರಾತ್ರಿ ಅಷ್ಟೇ ಮಹತ್ವದ್ದು, ಇಲ್ಲಿನ ಪ್ರತಿ ಹಳ್ಳಿ-ಹಳ್ಳಿಯಿಂದ ಭಕ್ತರು ಮಾಹನ, ಪಾದಯಾತ್ರೆಯ ಮೂಲಕ ದೇವಿಯ ದರ್ಶನಕ್ಕೆ ತೆರಳುವುದು ವಾಡಿಕೆ. ತುಳಜಾಪುರಕ್ಕೆ ಹೋಗಲೆಂದೇ ನುರಾರು ಬಸ್ಸುಗಳ ವ್ಯವಸ್ಥೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರದಿಂದ ಮಾಡಲಾಗುತ್ತದೆ. ಆದರೆ, ಈ ಬಾರಿ ಕೊರೋನಾ ಭಕ್ತರ ಆಸೆಯನ್ನೆಲ್ಲ ನುಚ್ಚೂ ನೂರು ಮಾಡಿದೆ. ದರ್ಶನವಷ್ಟೇ ಅಲ್ಲದೇ, ಹರಕೆಯನ್ನು ಈಡೇರಿಸದಂತೆ ಮಾಡಿದೆ.

ಎಲ್ಲೆಡೆ ಕೊವೀಡ್-19 ಸೊಂಕು ಹರಡುತ್ತಿರುವ ನಿಮಿತ್ತ ತುಳಜಾಪುರ ದೇವಿಯ ದರ್ಶನಕ್ಕೂ ನಿರ್ಬಂಧ ಹೆರಲಾಗಿದೆ. ಭಕ್ತರು ಮಾಹನಗಳ ಮೂಲಕ ಅಥವಾ ಪಾದಯತ್ರೆ ಮುಲಕವಾಗಲಿ ಬರುವುದಕ್ಕೆ ನಿಷೇಧವಿದೆ. ಎಲ್ಲರೂ ಮನೆಯಲ್ಲೇ ಇದ್ದು, ಸಹಕರಿಸಿ ಸುರಕ್ಷಿತವಾಗಿರಬೇಕು ಎಂದು ಶ್ರೀ ತುಳಜಾಪುರ ಭವನಿ ಮಂದಿರ ಸಂಸ್ಥಾನ, ತುಳಜಾಪುರಯ ಸಹಾಯಕ ಜನಸಂಪರ್ಕ ಅಧಿಕಾರಿ ನಾಗೇಶ ಶಿತೋಳೆ ಕೋರಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.