ಎಸಿಬಿ ಬಲೆಗೆ ತೋಟಗಾರಿಕೆ ಇಲಾಖೆ ಅಧಿಕಾರಿ

0

Gummata Nagari : Yadgiri News

ಯಾದಗಿರಿ : ಅನ್ನದಾತರಿಗೆ ಆಶ್ರಯವಾಗಬೇಕಾದ ಅಧಿಕಾರಿಯೊಬ್ಬರು ರೈತರಿಂದಲೇ ಹಣ ಪೀಕುವ ಕೆಲಸಕ್ಕೆ ಕೈಹಾಕಿ ಈಗ ಎಸಿಬಿ ಬಲೆಗೆ ಸಿಕ್ಕಿಕೊಂಡಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಅಧಿಕಾರಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾಬು. ಲಂಚ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುತ್ತಲೇ ಭ್ರಷ್ಟ ಆರೋಪಿ ಅಧಿಕಾರಿಯು ಎಸಿಬಿ ಎಸ್‌ಪಿ ಮಹೇಶ್ ಮೇಘಣ್ಣನವರ್ ಅವರ ಕಾಲಿಗೆ ಬೀಳಲು ಮುಂದಾದ ಘಟನೆಯೂ ನಡೆದಿದೆ.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನಬಾಬು ಅವರು ಕೌಳುರು ಗ್ರಾಮದ ರೈತ ಶಿವಾರೆಡ್ಡಿ ಅವರಿಂದ ಹನಿ ನೀರಾವರಿಯ 1.50 ಲಕ್ಷ ರೂ ಯೋಜನೆ ಸೌಲಭ್ಯ ನೀಡಲು ಪ್ರತಿಯಾಗಿ 6 ಸಾವಿರ ರೂ ಹಣಕ್ಕೆ ಬೇಡಿಕೆ ಇಟ್ಟಿದರು. ರೈತ ಶಿವಾರೆಡ್ಡಿ ಪರವಾಗಿ ವೀರುಪಾಕ್ಷಿ ಮೂಲಕ ಇಂದು 5 ಸಾವಿರ ಲಂಚದ ಹಣವನ್ನು ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ಜಿಲ್ಲಾಡಳಿತ ಭವನದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಚೇರಿಯಲ್ಲಿ ಹಣ ಪಡೆಯುವಾಗ ಎಸಿಬಿ ಎಸ್‌ಪಿ ಮಹೇಶ ಮೇಘಣ್ಣನವರ್, ಡಿವೈಎಸ್‌ಪಿ ಬಿ.ಬಿ. ಪಟೇಲ, ಪಿಐಗಳಾದ ರಾಜು ಬಿರಾದಾರ, ರಾಘವೇಂದ್ರ ಹಾಗೂ ಸಿಬ್ಬಂದಿಯವರಾದ ವಿಜಯಕುಮಾರ್, ಸಾಬಣ್ಣ, ಅಮರನಾಥ, ಗುತ್ತಪ್ಪ ಗೌಡ, ರವಿ ಅವರಿದ್ದ ತಂಡವು ದಾಳಿ ಮಾಡಿದೆ.

ಐದು ಸಾವಿರ ಹಣ ಪಡೆಯುವಾಗ ಅಧಿಕಾರಿ ಮಲ್ಲಿಕಾರ್ಜುನ ಬಾಬು ಸಿಕ್ಕಿಹಾಕಿಕೊಂಡಿದ್ದಾನೆ. ಈತನ ವಿಚಾರಣೆ ನಡೆಸಿ ಎಸಿಬಿ ಪೊಲೀಸರು ಬಂಧನ ಮಾಡಿದ್ದಾರೆ.

ಎಸಿಬಿ ಎಸ್‌ಪಿ ಮಹೇಶ ಮೇಘಣ್ಣನವರ್ ಮಾತನಾಡಿ, 5 ಸಾವಿರ ರೂ ಲಂಚದ ಹಣ ಪಡೆಯುವಾಗ ತೋಟಗಾರಿಕೆ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಸಿಕ್ಕಿಹಾಕಿಕೊಂಡಿದ್ದು ಈಗ ವಿಚಾರಣೆ ಮಾಡಿ ಬಂಧಿಸಲಾಗಿದೆ ಎಂದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.