ಹೈಕಮಾಂಡ್ ನಿರ್ದೇಶನಕ್ಕಾಗಿ ಕಾಯಲಾಗುತ್ತಿದೆ

ಸಚಿವ ಸಂಪುಟ ವಿಸ್ತರಣೆ ವಿಚಾರ: ಡಿಸಿಎಂ ಕಾರಜೋಳ ಹೇಳಿಕೆ

0

Gummata Nagari : Bijapur News

ಬಿಜಾಪುರ : ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ಆಗಲಿದೆ. ಹೈಕಮಾಂಡ್ ನಿರ್ದೇಶನಕ್ಕಾಗಿ ಕಾಯಲಾಗುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಬಿಜಾಪುರ ನಗರದಲ್ಲಿ ನಡೆಯುತ್ತಿರುವ ಗ್ರಾಮಸ್ವರಾಜ್ಯ ಸಮಾವೇಶ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗಾಗಿ ಕೇಂದ್ರ ನಾಯಕರ ಭೇಟಿಗೆ ಹೋಗಿದ್ದ ಸಿಎಂ ಅವರಿಗೆ ವರಿಷ್ಠರು ಸಿಗದ ಹಿನ್ನೆಲೆಯಲ್ಲಿ ಅದನ್ನು ಉದ್ದೇಶಪೂರ್ವಕವಾಗಿ ಸಿಎಂಗೆ ಕೇಂದ್ರ ನಾಯಕರು ಭೇಟಿಯಾಗಿಲ್ಲ ಎಂಬುದು ಸುಳ್ಳು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಗೃಹಸಚಿವ ಅಮಿತ್ ಶಾ ಪ್ರವಾಸದಲ್ಲಿದ್ದ ಕಾರಣ ಭೇಟಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪೂರ್ಣ ಅವಧಿಯವರೆಗೆ ಸಿಎಂ ಆಗಿ ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ, ಸಿಎಂ ಬದಲಾವಣೆ ವಿಚಾರ ಇದು ಗಾಳಿಸುದ್ದಿ, ಮಾಧ್ಯಮಗಳು ಸೃಷ್ಟಿ ಮಾಡಿದ ವಿಚಾರವಾಗಿದೆ ಎಂದರು.

ವಲಸಿಗ ಶಾಸಕರ ಪರ ಬ್ಯಾಟ್ ಬೀಸಿದ ಡಿಸಿಎಂ, ತ್ಯಾಗ ಮಾಡಿದವರಿಗೆ ಸಚಿವ ಸ್ಥಾನ ಸಿಗಬೇಕು. ಸಚಿವಸಂಪುಟ ವಿಸ್ತರಣೆ ಕುರಿತು ಕೇಂದ್ರ ನಾಯಕರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಲಿಂಗಾಯತ ಸಮುದಾಯಕ್ಕೆ ಓಬಿಸಿ ಮಾನ್ಯತೆ ನೀಡುವ ವಿಚಾರವಾಗಿ ಮಾತನಾಡಿ, ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕವಾಗಿ ವಿಚಾರ ಮಾಡಿ ಮುಂದಿನ ಚರ್ಚೆ ತೆಗೆದುಕೊಳ್ಳಲಾಗುತ್ತದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ, ಕಾನೂನು ಸಲಹೆಗಳನ್ನು ತೆಗೆದುಕೊಂಡು ಮುಂದಿನ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ಶಾಸಕ ಚವ್ಹಾಣ ಭ್ರಮೆಯಲ್ಲಿದ್ದಾರೆ

ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ ಗೆ ಜೀವ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶಾಸಕ ದೇವಾನಂದ ಸುಳ್ಳು ಹೇಳುತ್ತಿದ್ದಾರೆ. ಜನರಿಂದ ದೂರವಾಗಿರುವ ಶಾಸಕ ದೇವಾನಂದ್ ಭ್ರಮೆಯಲ್ಲಿದ್ದಾರೆ ಎಂದು ಟಾಂಗ್ ನೀಡಿದರು.

ಶಾಸಕ ದೇವಾನಂದಗೆ ಜೀವಬೆದರಿಕೆ ಇರುವುದಾದರೂ ಯಾರಿಂದ ಎಂದು ಪ್ರಶ್ನಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಹಣ ತಡೆಯಲಾಗುತ್ತದೆ ಎಂದು ದೇವಾನಂದ ಆರೋಪ ಅಲ್ಲಗಳೆದ ಡಿಸಿಎಂ ಕಾರಜೋಳ ಕಳೆದ 27 ವರ್ಷಗಳಿಂದಲೂ ನಾನು ದೇವಾನಂದ ನನ್ನ ನೋಡಿಕೊಂಡು ಬಂದಿದ್ದೇನೆ. ಆತ ಹೇಗೆಂದು ನನಗೆ ಚೆನ್ನಾಗಿ ಗೊತ್ತು ಎಂದರು.

ಸಿಎಂ ಕಾರ್ಯದರ್ಶಿ ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಅದು ಆತ್ಮಹತ್ಯೆ ಯತ್ನ ಅಥವಾ ಮಾತ್ರ ಸೇವಿಸಿದ್ದೊ ನನಗೆ ಗೊತ್ತಿಲ್ಲ. ಈ ಕುರಿತು ಡಿಕೆ ಶಿವಕುಮಾರ್ ಆರೋಪ ಸಲ್ಲದು. ಇಂಥ ವಿಚಾರದಲ್ಲಿಯೂ ರಾಜಕಾರಣ ಮಾಡಬಾರದೆಂದು ಡಿಸಿಎಂ ಕಾರಜೋಳ ಹೇಳಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.