ಕಾಲುವೆ ಮೂಲಕ ನೀರು ಪೂರೈಕೆ

ತುಬಚಿ-ಬಬಲೇಶ್ವರ ಯೋಜನೆ

0

Gummata Nagari : Bijapur News

ಬಿಜಾಪುರ : ತುಬಚಿ-ಬಬಲೇಶ್ವರ ಯೋಜನೆಯಡಿ ಬಬಲೇಶ್ವರ ಕ್ಷೇತ್ರದಲ್ಲಿ ಒಂದು ವರ್ಷದಲ್ಲಿ ನೀರಾವರಿ ಮಾರ್ಗಗಳ ನಿರ್ಮಾಣ (ಎಫ್.ಐ.ಸಿ) ಕಾಮಗಾರಿ ಪ್ರಾರಂಭಿಸಿ ಕೆನಾಲ್ ಮೂಲಕ ನೀರು ಹರಿಯಲಿದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು.

ಇಟ್ಟಂಗಿಹಾಳ ಕೆರೆ ಪೂಜೆ ಸಲ್ಲಿಸಿ, ಬಾಗೀನ ಅರ್ಪಿಸಿ ಮಾತನಾಡಿದ ಅವರು, ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ತುಂಬಿ, ನಿಂತಿರುವ ಕೆರೆಗಳಿಗೆ ಬಾಗೀನ ಅರ್ಪಿಸುವದರ ಮೂಲಕ ಇಂದು ನನ್ನ ಜನ್ಮದಿನೋತ್ಸವವನ್ನು ನೀರಿನೊಂದಿಗೆ ಆಚರಸಿಕೊಳ್ಳುತ್ತಿದ್ದೇನೆ ಎಂದರು.

ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದ್ದು, ಇಂಡಿ ತಾಲೂಕಿನಲ್ಲಿ ಉಳಿದ 19ಕೆರೆಗಳನ್ನು ತುಂಬಿಸಲು 140ಕೋಟಿ ರೂ. ವೆಚ್ಚದ ಯೋಜನೆಗೆ ಹಾಗೂ ಜಿಲ್ಲೆಯ 159ಹಳ್ಳಗಳನ್ನು ತುಂಬಿಸುವದರ ಜೊತೆಗೆ ಇಂಗು ಬಾವಿಗಳನ್ನು ನಿರ್ಮಿಸುವ ಯೋಜನೆಗೂ ಕೂಡ ಸರ್ಕಾರ ಅನುಮೋದನೆ ನೀಡಿದ್ದರಿಂದ ಟೆಂಡರ್ ಪ್ರಕ್ರಿಯೆ ಕೂಡ ಪ್ರಾರಂಭವಾಗಿದೆ, ತದನಂತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕೊರೊನಾ ಕಾಯಿಲೆಗೆ ಬಡವ-ಶ್ರೀಮಂತ ಎನ್ನುವ ಬೇಧ-ಭಾವಗಳು ಇರುವದಿಲ್ಲ. ಯಾರಿಗಾದರೂ ಬರಬಹುದು ಅದಕ್ಕಾಗಿ ಎಲ್ಲರು ಜಾಗೃತರಾಗಬೇಕು. ಸಾಮಾಜಿಕ ಅಂತರ, ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಿ, ಅಗತ್ಯವಿದ್ದಲ್ಲಿ ಮಾತ್ರ ಹೊರಗಡೆ ಸಂಚಾರ ಮಾಡಿ ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿ.ಪಂ ಸದಸ್ಯ ರಾಜು ಪವಾರ, ತಾ.ಪಂ. ಅಧ್ಯಕ್ಷೆ ಪ್ರಭಾವತಿ ನಾಟಿಕಾರ, ತಿಕೋಟಾ ತಹಶೀಲ್ದಾರ ಸಂತೋಷ ಮ್ಯಾಗೇರಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರಾಠೋಡ, ವಲಯ ಅರಣ್ಯಾಧಿಕಾರಿ ಪ್ರಭುಲಿಂಗ ಬುಯ್ಯಾರ, ಗ್ರಾ.ಪಂ ಸದಸ್ಯ ಶಿವಾನಂದ ತಲಕೇರ, ಮುಖಂಡರಾದ ಎಸ್.ಎಚ್.ನಾಡಗೌಡ, ಸೋಮನಾಥ ಬಾಗಲಕೋಟ, ರಾಜುಗೌಡ ಪೊಲೀಸಪಾಟೀಲ, ವಸಂತ ತಂಗಡಿ, ಶ್ರೀಮಂತ ಶಿರಹಟ್ಟಿ, ಬಾಬು ಗುಲಗಂಜಿ, ಗಿರಿಮಲ್ಲ ಮುಚ್ಚಂಡಿ, ವಿಟ್ಠಲ ಮುಚ್ಚಂಡಿ, ಅಶೋಕ ರಾಠೋಡ, ನಿಂಗಪ್ಪ ಜಂಬಗಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಲೋಹಗಾಂವ ಕೆರೆ ಪೂಜೆ ಸಂದರ್ಭದಲ್ಲಿ ಎಚ್.ಎಲ್.ಬಿದರಿ ಸಾಹುಕಾರ, ತಿಕೋಟಾ ತಾ.ಪಂ ಉಪಾಧ್ಯಕ್ಷ ರಾಜು ಮಸಳಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಅಪ್ಪು ಬಗಲಿ, ರಾಜೇಂದ್ರ ಜೋರಾಪುರ, ಅಡಿವೆಪ್ಪಗೌಡ ಬಿರಾದಾರ, ಬಂದಗಿಸಾಬ ಗಸ್ತಿ, ಗಿರಿಮಲ್ಲ ಕರಿಗಾರ, ಪಿಂಟು ನಾಯಕ, ನಾಮದೇವ ಭಜಂತ್ರಿ, ಶ್ರೀಶೈಲ ಮಾಳಿ, ಲಕ್ಷ್ಮಣ ಬಗಲಿ, ಗುರುನಾಥ ಕೊನಾರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ನಂತರದಲ್ಲಿ ಬಾಬಾನಗರ ವರನಕುಡಿ, ಹೊನವಾಡ ಹಾಗೂ ಬರಟಗಿ ಕೆರೆಗಳಿಗೆ ಪೂಜೆ ಸಲ್ಲಿಸಿ, ಬಾಗೀನ ಅರ್ಪಿಸಿದರು.

ಕ್ಷೇತ್ರದಲ್ಲಿ ವಿವಿದೆಡೆ ಎಂ.ಬಿ.ಪಾಟೀಲ್‌ರವರ ಜನ್ಮದಿನ ಆಚರಣೆ:

ಕನಮಡಿ ಗ್ರಾಮದಲ್ಲಿ ಮುಖಂಡರು, ಅಭಿಮಾನಿಗಳು ನೆಡುವದರ ಮೂಲಕ ಜನ್ಮದಿನ ಆಚರಿಸಿದರು. ಬಬಲೇಶ್ವರ ಗ್ರಾಮದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ವಿ.ಎಸ್.ಪಾಟೀಲ ಬಬಲೇಶ್ವರ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಗುರುಪಾದೇಶ್ವರ ಬೃಹನ್ಮಠದ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

ಹಲಗಣಿ ಗ್ರಾಮದೇವತೆ ಹಲಗಣೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಎಂ.ಬಿ.ಪಾಟೀಲರವರ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಶಿಷ್ಟವಾಗಿ ಆಚರಣೆ ಮಾಡಿದರು.

ತಾಜಪುರ ಎಚ್ ಗ್ರಾಮದಲ್ಲಿ ಯುವಕರು ರಕ್ತದಾನ ಮಾಡುವ ಮೂಲಕ ಎಂ.ಬಿ.ಪಾಟೀಲರಿಗೆ ಜನ್ಮದಿನದ ಶುಭಾಶಯ ಕೋರಿದರು.

ಬಿ.ಎಲ್.ಡಿ.ಇ ಸಂಸ್ಥೆ ಬಿ.ಎಂ.ಪಾಟೀಲ್ ಕಾಲೇಜಿನಲ್ಲಿ ಆಡಳಿತಾಧಿಕಾರಿ ಡಾ.ಆರ್.ವಿ.ಕುಲಕರ್ಣಿ ಅವರ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಎಂ.ಬಿ.ಪಾಟೀಲರಿಗೆ ಶುಭಾಷಯ ಕೋರಿದರು.

ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರಾದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯ 5 ವಿಶಿಷ್ಟ ತಳಿಗಳ ಫಲ ಪ್ರದಾನ ಗಿಡಗಳಾದ ನೆಲ್ಲಿಕಾಯಿ, ಮೊಸಂಬಿ, ಕಿತ್ತಳೆ, ಹಲಸು, ಜಲಸೇಬು ಸಸಿಗಳನ್ನು ನೆಟ್ಟು ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ, ಅಧ್ಯಾಪಕ, ಹಾಗೂ ವಿದ್ಯಾರ್ಥಿಗಳಿಂದ ಡಾ. ಎಂ.ಬಿ. ಪಾಟೀಲರ 56ನೇ ಜನ್ಮ ದಿನದ ಶುಭಾಶಯಗಳನ್ನು ಕೋರಿದರು.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೋಡ ಗ್ರಾಮದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಸೈಕ್ಲಿಂಗ್ ಗ್ರುಪ್ ಸಂಚಾಲಕ ಡಾ.ಮಹಾಂತೇಶ ಬಿರಾದಾರ ಅವರು ಎಂ.ಬಿ.ಪಾಟೀಲರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜಾಪುರ ಸೈಕ್ಲಿಂಗ್ ಗ್ರುಪ್ ಕಾರ್ಯದರ್ಶಿ ಸೋಮಶೇಖರ ಸ್ವಾಮಿ, ಬಸವರಾಜ ದೇವರ, ಡಾ.ರಾಜು ಯಲಗೊಂಡ, ಸಂದೀಪ ಮಡಗೊಂಡ, ನಂದೀಶ ಹುಂಡೇಕಾರ, ಬಕ್ಬುಲ್ ಬಂದುಗೋಳ ಮತ್ತಿತರರು ಭಾಗವಹಿಸಿದ್ದರು.

ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ರಾಷ್ಟ್ರೀಯ ಬಸವ ಸೇನೆಯ ಶರಣಗೌಡ ಬಿರಾದಾರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.