ವಾಹನ ಚಾಲಕರಿಗೆ ಎಚ್ಚರಿಕೆ ಗಂಟೆ

ಅಪಾಯದ ಅಂಚಿನಲ್ಲಿ ನಾದ ಮೇನ್ರೋಡ್ ಸೇತುವೆ

0

Gummata Nagari : Bijapur News

ಇಂಡಿ : ತಾಲೂಕಿನ ಇಂಡಿ-ಆಲಮೇಲ ಮುಖ್ಯ ಡಾಂಬರೀಕರಣ ರಸ್ತೆಯ ಮಧ್ಯ ಇರುವ ನಾದ ಸೇತುವೆಯು 80 ವರ್ಷಗಳ ಹಳೆ ಸೇತುವೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಶಿಥಿಲಗೊಳ್ಳುತ್ತಿದೆ.

ಸೇತುವೆ ತುಂಬೆಲ್ಲಾ ಗುಂಡಿಗಳು ಕಾಣಿಸುತ್ತಿದ್ದು, ಮಳೆಗಾಲದಲ್ಲಿ ನದಿಯಂತೆ, ವಾಹನಗಳ ಸವಾರರು ಭಯ-ಭೀತರಾಗಿ ವಾಹನಗಳನ್ನು ಚಲಾಯಿಸುವಂತಾಗಿದೆ. ಅಷ್ಟೇ ಅಲ್ಲದೆ ಅನೇಕ ಸವಾರರು ಅಲ್ಲಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಉದಾಹರಣೆಗಳಿವೆ. ಅಲ್ಲಿ ಅನೇಕ ಬಾರಿ ಮಾಡಿದ ಕಾಮಗಾರಿಗಳು ಕಳಪೆ ಮಟ್ಟದ್ದಾಗಿರುವುದರಿಂದಲೇ ಈ ಅಪಾಯಮಟ್ಟದ ಸೇತುವೆಯಾಗಿದೆ.

ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಈ ಸೇತುವೆಯ ಬಗ್ಗೆ ಗಮನಿಸಬೇಕೆಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.