ರಾಹುಲ್ ಗಾಂಧಿ ಅವರ ಮೇಲೆ ದೌರ್ಜನ್ಯ ಖಂಡನೀಯ

0

Gummata Nagari : Bijapur News

ಬಿಜಾಪುರ : ಉತ್ತರ ಪ್ರದೇಶ ಹತ್ರಾಸ್‌ನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೀಡಾದ ಮನೀಷಾ ವಾಲ್ಮೀಕಿ ಯುವತಿಯ ಕುಟುಂಬದವರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ಅವರ ಕಾರನ್ನು ತಡೆದು ಉತ್ತರ ಪ್ರದೇಶ ಪೊಲೀಸರು ನಡೆಸಿರುವ ದೌರ್ಜನ್ಯ ಅತ್ಯಂತ ಖಂಡನೀಯವಾಗಿದೆ ಎಂದು ಬಿಎಸ್ಪಿ ಲೋಕಸಭೆ ಅಭ್ಯರ್ಥಿ ಶ್ರೀನಾಥ್ ಪೂಜಾರಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತರ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಇದೆಯೋ ಅಥವಾ ಅದೊಂದು ಸ್ವತಂತ್ರ ಸರ್ವಾಧಿಕಾರಿ ಆಡಳಿತದ ರಾಜ್ಯವಾಗಿದೆಯೋ ಎಂಬ ಪ್ರಶ್ನೆ ಉದ್ಭವಿಸುತ್ತಿದ್ದು, ರಾಹುಲ್ ಗಾಂಧಿ ಅಂತಹ ಒಂದು ಪಕ್ಷದ ರಾಷ್ಟ್ರಮಟ್ಟದ ನಾಯಕರ ಮೇಲೆ ಈ ರೀತಿ ದೌರ್ಜನ್ಯ ನಡೆಯುತ್ತೆ ಎಂದ ಮೇಲೆ ಉತ್ತರ ಪ್ರದೇಶ ಅಕ್ಕ ತಂಗಿಯರ ಗತಿಯೇನು ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಮನೀಷಾ ವಾಲ್ಮೀಕಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಹಾಗೂ ಉತ್ತರ ಪ್ರದೇಶ ಕಾನೂನು ಸುವ್ಯವಸ್ಥೆ ಕಾಪಾಡಲು ಕೊಡಲೇ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಪ್ರದೇಶದ ಅಸಹಾಯಕ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ರವರ ರಾಜೀನಾಮೆ ಪಡೆಯಬೇಕಾಗಿದೆ ಮತ್ತು ಇಂದು ಉತ್ತರ ಪ್ರದೇಶ ಸರ್ಕಾರದಿಂದ ನಡೆಯುತ್ತಿರುವ ಈ ದಮನಕಾರಿ ಪ್ರವೃತ್ತಿಯನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ನ್ಯಾಯವಾದಿ, ಬಹುಜನ ಸಮಾಜ ಪಕ್ಷದ ಮುಖಂಡರಾದ ಶ್ರೀನಾಥ್ ಪೂಜಾರಿ ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.