ಗ್ರಾಮಾಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಮುಖ್ಯ

ಪಂಚಾಯತ್ನ ನೂತನ ಕಟ್ಟಡ ಉದ್ಘಾಟನೆ: ಘನತ್ಯಾಜ್ಯ ವಿಲೇವಾರಿ ವಾಹನಕ್ಕೆ ಚಾಲನೆ

0

Gummata Nagari : Bijapur News

ಬಸವನಬಾಗೇವಾಡಿ : ಗ್ರಾಮಗಳು ಅಭಿವೃದ್ದಿ ಹೊಂದಲು ಗ್ರಾಮಸ್ಥರ ಸಹಕಾರ ಅತಿ ಮುಖ್ಯವಾಗಿರುತ್ತದೆ ಎಂದು ಜಿಡಿಎಸ್ ಮುಖಂಡ ರಾಜುಗೌಡ ಪಾಟೀಲ ಹೇಳಿದರು.

ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದಲ್ಲಿ ಶುಕ್ರವಾರ ನವೀಕರಿಸಲ್ಪಟ್ಟ ಗ್ರಾಮ ಪಂಚಾಯತನ ನೂತನ ಕಟ್ಟಡ ಉದ್ಘಾಟನೆ ಹಾಗೂ ಘನತ್ಯಾಜ್ಯ ವಿಲೇವಾರಿ ವಾಹನ ಚಾಲನೆ ಮತ್ತು ಪರಿಕರಗಳ ವಿತರಣಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮಸ್ಥರ ಸಹಕಾರದಿಂದ ಕುದರಿ ಸಾಲವಾಡಗಿ ಪಂಚಾಯಿತಿಯು ಸತತವಾಗಿ ಎರಡು ಬಾರಿ ಗಾಂಧೀ ಗ್ರಾಮ ಪುರಸ್ಕೃತಗೊಂಡಿದ್ದು ಹೆಮ್ಮೆಯ ಸಂಗತಿಯಾಗಿದೆ ಸರಕಾರ ಗ್ರಾಮೀಣ ಭಾಗದ ಅಭಿವೃದ್ದಿಗಾಗಿ ಸಾಕಷ್ಟು ಅನುಧಾನವನ್ನು ಬಿಡುಗಡೆ ಮಾಡುವ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತದೆ ಸರಕಾರದ ಯೋಜನೆಗಳು ಯಶಸ್ವಗೊಳ್ಳ ಬೇಕಾದರೆ ಅಧಿಕಾರಿಗಳ ಇಚ್ಚಾಶಕ್ತಿಯು ಪ್ರಮುಖವಾಗಿರುತ್ತದೆ ಇದಕ್ಕೆಲ್ಲ ಪೂರಕವೆಂಬಂತೆ ಕುದರಿ ಸಾಲವಾಡಗಿ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗಳು ಸೇರಿದಂತೆ ಎಲ್ಲ ಸಿಬ್ಬಂದಿಗಳು ಶಿಸ್ತಿನಿಂದ ಕಾರ್ಯ ನಿರ್ವಹಿಸುವ ಮೂಲಕ ಇತರ ಪಂಚಾಯಿತಿಯ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ಇಂದು ಪಂಚಾಯಿತಿಯಿಂದ ಘನತ್ಯಾಜ್ಯವನ್ನು ಸಂಗ್ರಹಿಸಲು ಎರಡು ಬಕೆಟ್‌ನ್ನು ನೀಡುತ್ತಿದ್ದಾರೆ ಒಂದರಲ್ಲಿ ಹಸಿ ಕಸ ಇನ್ನೊಂದರಲ್ಲಿ ಒಣ ಕಸ ಹಾಕಬೇಕು ಬೆಳಿಗ್ಗೆ ಪಂಚಾಯಿತಿಯ ಘನತ್ಯಾಜ್ಯ ವಿಲೆವಾರಿ ವಾಹನ ನಿಮ್ಮ ಮನೆ ಮುಂದೆ ಬರುತ್ತದೆ ನೀವು ಸಂಗ್ರಹಿಸಿದ ಕಸವನ್ನು ವಾಹನಕ್ಕೆ ಹಾಕುವ ಮೂಲಕ ಗ್ರಾಮದ ಸ್ವಚ್ಚತೆಗೆ ಆದ್ಯೇತೆ ನೀಡಿಬೇಕು ಎಂದು ಹೇಳಿದರು.

ಮುಖಂಡ ಬಿ.ಎಲ್.ಪಾಟೀಲ ಮಾತನಾಡಿ, ಎರಡು ಬಾರಿ ಸತತವಾಗಿ ಗಾಂಧೀ ಪುರಸ್ಕಾರಗೊಳ್ಳುವ ಮೂಲಕ ಕುದರಿಸಾಲವಾಡಗಿ ಪಂಚಾಯಿತಿಯು ತಾಲೂಕಿನಲ್ಲಿಯೇ ಮಾದರಿ ಪಂಚಾಯಿತಿಯಾಗಿ ಹೂರ ಹೊಮ್ಮಿದೆ ಗ್ರಾಮದ ಅಭಿವೃದ್ದಿಗೆ ಪಂಚಾಯಿತಿ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ಕೈ ಜೊಡಿಸಬೇಕು ಕೊವೀಡ್-19 ಹೊಡೆದೊಡಿಸುವಲ್ಲಿ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ ಅಂತಹ ಮಹನೀಯರನ್ನು ಇಂದು ಇಲ್ಲಿ ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರಣ್ಯಧಿಕಾರಿ ಗ್ರಾಪಂ ನೂಡಲ್ ಅಧಿಕಾರಿ ಎ.ಎಸ್.ಪಾಕಿ ಮಾತನಾಡಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿ.ಎಸ್.ಬಡಗೇರ, ಮುಖಂಡ ಬಸವರಾಜ ದೇಸಾಯಿ, ಎಸ್.ಬಿ.ಪಾಟೀಲ, ಎ.ಬಿ.ಪಾಟೀಲ, ಜಾಕೀರ ಹುಸೇನ ಶಿವಣಗಿ, ದೇವಕಮ್ಮಾ ಹಚಡದ, ಪಿ ಎಸ್ ಲಗಳಿ, ಭೀಮನಗೌಡ ಹಚಡದ, ಶೇಕರಗೌಡ ಪಾಟೀಲ, ರುದ್ರಗೌಡ ಹಚಡದ, ಗುರುನಗೌಡ ಪಾಟೀಲ ಅಭಿವೃದ್ದಿ ಅಧಿಕಾರಿ ಬಿ,ಎಸ್ ಬಡಿಗೇರ ವೇದಿಕೆಯಲ್ಲಿದ್ದರು. ಎನ್ ಶೈಲಜಾ ಸ್ವಾಗತಿಸಿದರು. ಎಸ್ ಬಿ ಬಾಗೇವಾಡಿ ನಿರೂಪಿಸಿದರು. ಎಮ್ ಎ ಅಣ್ಣಾಪುರ ವಂದಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.