ಮಹಿಳೆಯರಿಗೆ ರಕ್ಷಣೆ ಒದಗಿಸಲು ಆಗ್ರಹ

0

Gummata Nagari : Bijapur News

ಬಿಜಾಪುರ : ದಲಿತ ಯುವತಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವುದು ಹಾಗೂ ಈ ರೀತಿಯ ಘಟನೆ ಮರುಕಳಿಸದಂತೆ ಮಹಿಳೆಯರಿಗೆ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಎಐಡಿವೈಓ ಹಾಗು ಎಐಡಿಎಸ್‌ಓ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

`ಮಹಿಳೆಯರ ಕೂಗು ಕೇಳದ ಸರ್ಕಾರಕ್ಕೆ ಧಿಕ್ಕಾರ’, `ಅತ್ಯಾಚಾರಿ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಎಐಎಂಎಸ್‌ಎಸ್ ಸಂಘಟನೆ ಸಂಚಾಲಕಿ ಎಚ್. ಗೀತಾ ಮಾತನಾಡಿ, ಉತ್ತರಪ್ರದೇಶದ ಹತ್ರಾಸ್‌ಜಿಲ್ಲೆಯ 20ವರ್ಷದ ದಲಿತ ಯುವತಿಯ ಮೇಲೆ ದುಷ್ಕರ್ಮಿಗಳು ಅಮಾನುಷವಾಗಿ ಕೊಲೆ ಮಾಡಿ ದೌರ್ಜನ್ಯವೆಸಗಿರುವ ಘಟನೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದಾಗಿದೆ, ಈ ರೀತಿಯ ದುಷ್ಕೃತ್ಯವೆಸಗಿದ ಆರೋಪಿಗಳಿಗೆ ಇಲ್ಲಿಯವರೆಗೂ ಶಿಕ್ಷೆಯಾಗಿಲ್ಲ, ಯುವತಿಯ ಬೆನ್ನುಹುರಿಯನ್ನು ಮುರಿದು, ನಾಲಿಗೆ ಕತ್ತರಿಸಿ ಆಕೆಯನ್ನು ಚಿತ್ರಹಿಂಸೆ ನೀಡಿದ ಆರೋಪಿಗಳು ಮನುಷ್ಯರೇ ಅಲ್ಲ, ಆದರೂ ಸಹ ಅವರಿಗೆ ಬಂಧಸಿಲಾಗಿಲ್ಲ, ಅವರು ಹೊರಗಡೆ ಸ್ವಾತಂತ್ರ್ಯವಾಗಿ ಓಡಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಉನ್ನತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷೆ ಶೋಭಾ ಯರಗುದ್ರಿ ಮಾತನಾಡಿ, ಉತ್ತರ ಪ್ರದೇಶದ ಆಡಳಿತಾರೂಡ ಮಹಿಳಾ ವಿರೋಧಿ, ಸಮಾಜ ವಿರೋಧಿಧೋರಣೆಯಿಂದ ಮಹಿಳೆಯರ ಮತ್ತು ಮಕ್ಕಳ ಮೇಲೆ ಶೋಷಣೆ ನಡೆಯುತ್ತಿದೆ ಎಂದು ದೂರಿದರು.

ಈ ಪ್ರಕರಣದ ವಿಚಾರಣೆಯನ್ನು ಶೀಘ್ರತಿ ನ್ಯಾಯಾಲಯದಲ್ಲಿ ನಡೆಸುವುದು, ಪ್ರಕರಣ ದಾಖಲು ಮಾಡುವಲ್ಲಿ ವಿಳಂಭ ಮಾಡಿದ ಎಲ್ಲಾ ಪೋಲೀಸ್ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವುದು ಹಾಗೂ ಮಾದಕ ವಸ್ತು, ಅಶ್ಲೀಲತೆ, ಮಧ್ಯಪಾನವನ್ನು ನಿಷೇಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡಗೂಳಿ ಮಾತನಾಡಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.