ನಗರೋತ್ಥಾನ ಯೋಜನೆಯಡಿಯಲ್ಲಿ ಪಟ್ಟಣದ ಹೊಸನಗರ, ಬಝಾರ್ ಹತ್ತಿರ ಹಾಗೂ ತಾಳಿಕೋಟಿ ರಸ್ತೆಗೆ ಹೊಂದಿಕೊAಡAತಿರುವ ಹಳ್ಳದ ಹತ್ತಿರ ಮೂರು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ನಿರ್ಮಾಣ ಮಾಡಿ ವರ್ಷ ಕಳೆದರೂ ಗುತ್ತಿಗೆದಾರರು ಶೌಚಾಲಯಕ್ಕೆ ಅಗತ್ಯ ನೀರು ವಿದ್ಯುತ್ ಒದಗಿಸಿಲ್ಲ ಇದರ ಜೊತೆಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪಪಂ ಜವಾಬ್ದಾರಿಗೆ ನೀಡಿಲ್ಲ ಹೀಗಾಗಿ ಹೊಸದಾಗಿ ನಿರ್ಮಾಣವಾದರೂ ಸಾರ್ವಜನಿಕರಿಗೆ ಉಪಯುಕ್ತವಿಲ್ಲದೆ ನಿರುಪಯುಕ್ತವಾಗಿವೆ.
ದೇವರಹಿಪ್ಪರಗಿ : ಪಟ್ಟಣದ ವಿವಿಧ ಕಡೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳು ನಿರ್ಮಾಣವಾಗಿದ್ದರೂ ಮೂಲಸೌಕರ್ಯಗಳ ಕೊರತೆಯಿಂದ ನಿರುಪಯುಕ್ತವಾಗಿದ್ದು, ತಕ್ಷಣವೇ ಶೌಚಾಲಯಕ್ಕೆ ಬೇಕಾದ ನೀರು ಒದಗಿಸಿ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲೂಕು ಕೇಂದ್ರವಾಗಿರುವ ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಅಗತ್ಯ ನೀರು, ವಿದ್ಯುತ್ ವ್ಯವಸ್ಥೆಯಿಲ್ಲದೆ ಸಾರ್ವಜನಿಕರ ಬಳಕೆಗೆ ನಿರುಪಯುಕ್ತವಾಗಿದೆ. ಹೀಗಾಗಿ ಮನೆಯಲ್ಲಿ ಶೌಚಾಲಯ ಇಲ್ಲದವರು ಪರದಾಡುವಂತಾಗಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಶೌಚಾಲಯಕ್ಕೆ ತೊಂದರೆ ಅನುಭವಿಸುವಂತಾಗಿದೆ. ಇಡೀ ದೇಶವೇ ಸ್ವಚ್ಛತೆಯೆಗೆ ಒಂದು ಹೆಜ್ಜೆ ಮುಂದು ಹೋಗುತ್ತಿದ್ದರೂ ಇಲ್ಲಿ ಮಾತ್ರ ಅದು ಮರಿಚೀಕೆಯಾಗಿದೆ.
ನಗರೋತ್ಥಾನ ಯೋಜನೆಯಡಿಯಲ್ಲಿ ಪಟ್ಟಣದ ಹೊಸನಗರ, ಬಝಾರ್ ಹತ್ತಿರ ಹಾಗೂ ತಾಳಿಕೋಟಿ ರಸ್ತೆಗೆ ಹೊಂದಿಕೊAಡAತಿರುವ ಹಳ್ಳದ ಹತ್ತಿರ ಮೂರು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ನಿರ್ಮಾಣ ಮಾಡಿ ವರ್ಷ ಕಳೆದರೂ ಗುತ್ತಿಗೆದಾರರು ಶೌಚಾಲಯಕ್ಕೆ ಅಗತ್ಯ ನೀರು ವಿದ್ಯುತ್ ಒದಗಿಸಿಲ್ಲ ಇದರ ಜೊತೆಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪಪಂ ಜವಾಬ್ದಾರಿಗೆ ನೀಡಿಲ್ಲ ಹೀಗಾಗಿ ಹೊಸದಾಗಿ ನಿರ್ಮಾಣವಾದರೂ ಸಾರ್ವಜನಿಕರಿಗೆ ಉಪಯುಕ್ತವಿಲ್ಲದೆ ನಿರುಪಯುಕ್ತವಾಗಿವೆ.
ಈ ಕುರಿತು ಪಪಂ ಅಧಿಕಾರಿಗಳಿಗೆ ಸಂಪರ್ಕಿಸಿದರೆ ನಗರೋತ್ಥಾನ ಕಾಮಗಾರಿ ಮಾಡುತ್ತಿರುವವವರು ಇನ್ನು ನಮಗೆ ವಹಿಸಿಲ್ಲ. ಸಂಪೂರ್ಣ ಕಾಮಗಾರಿ ಮುಗಿದು ಸಾರ್ವಜನಿಕರಿಗೆ ಉಪಯೋಗಕ್ಕೆ ಯೋಗ್ಯವಾದ ಬಳಿಕ ನಮ್ಮ ವಶಕ್ಕೆ ಪಡೆಯುತ್ತಿವೆ ಎಂದು ಹೇಳುತ್ತಾರೆ ಎಂದು ಆ ಪ್ರದೇಶದ ಜನರ ಅಳಲಾಗಿದೆ. ತಕ್ಷಣವೇ ಈ ಮೂರು ಸಾಮೂಹಿಕ ಶೌಚಾಲಯಗಳಿಗೆ ನೀರು, ವಿದ್ಯುತ್ ವ್ಯವಸ್ಥೆ ಮಾಡಬೇಕು ಎಂದು ಯುವ ಮುಖಂಡರಾದ ಅಕ್ಬರ ಬಾಗವಾನ, ಆದಮ್ ಟಕ್ಕಳಕಿ, ಮಹಿಬೂನ ನಾಯ್ಕೋಡಿ, ಅಶೋಕ ಅಂಬಲಗಿ,ಯಲ್ಲಪ್ಪ ದೇವಣಗಾಂವ, ಶಾಂತವ್ವ ದೇವಣಗಾಂವ, ರೇಣುಕಾ ದೆವಣಗಾಂವ, ಭಾಗವ್ವ ಅಂಬಲಗಿ, ಖಾತುನ್ ಟಕ್ಕಳಕಿ, ಮಮತಾಜ ಕೊರ್ತಿ ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..