ಸಂಗೀತದಲ್ಲಿ ಅದ್ಭುತ ಶಕ್ತಿ ಅಡಗಿದೆ

ಕಸಾಪ ಸಂಗೀತಗೋಷ್ಠಿ, ದತ್ತಿ ಉಪನ್ಯಾಸ ಕಾರ್ಯಕ್ರಮ ಚಾಲನೆ

0

Gummata Nagari : Bijapur News

ಬಿಜಾಪುರ : ಸಂಗೀತದಿಂದ ದೇವರನ್ನು ಒಲಿಸಿಕೊಳ್ಳಬಹುದಾಗಿದೆ, ಸಂಗೀತದಲ್ಲಿ ಅದ್ಭುತವಾದ ಶಕ್ತಿ ಅಡಗಿದೆ ಎಂದು ನ್ಯಾಯವಾದಿ ವೀರಣ್ಣ ಹುಂಡೇಕಾರ ಹೇಳಿದರು.

ಬಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಕಸಾಪ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಂಗೀತಗೋಷ್ಠಿ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಗವಂತನ ಸಾಕ್ಷಾತ್ಕಾರವನ್ನು ಪಡೆಯುವದಕ್ಕೆ ಯೋಗ, ತಪಸ್ಸು, ಜ್ಞಾನ ಮತ್ತು ಭಕ್ತಿ ಇವೇ ಮೊದಲಾದ ಮಾರ್ಗಗಳಿದ್ದು ಅದರಲ್ಲಿ ನಾದರೂಪನಾಗಿರುವ ಪರಮಾತ್ಮನನ್ನು ನಾದರೂಪದಿಂದಲೇ ಒಲಿಸಿಕೊಳ್ಳುವುದೊಂದು ಸುಲಭ ಸಾಧನ. ಅಂತಹ ಶಕ್ತಿ ಸಂಗೀತಕ್ಕೆ ಮಾತ್ರ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಪ್ರಪಂಚದಲ್ಲಿರುವ ಎಲ್ಲಾ ಸಂಗೀತ ಪ್ರಕಾರಗಳಿಗಿಂತ ಭಾರತೀಯ ಸಂಗೀತ ಪರಂಪರೆ ವಿಭಿನ್ನವಾಗಿದ್ದು, ಈ ಸಂಗೀತ ಪರಂಪರೆಗೆ ಪೂಜನೀಯ ಸ್ಥಾನ ನೀಡಲಾಗಿದೆ. ಸಂಗೀತವನ್ನು ಗಂಧರ್ವ ವಿದ್ಯಾ ಎಂದು ಕರೆಯುತ್ತಾರೆ ಅದಕ್ಕೆಂದೇ ಸಂಗೀತದ ಮೂಲಕ ಭಗವಂತನನ್ನು ಮತ್ತು ಆಧ್ಯಾತ್ಮವನ್ನು ಒಲಿಸಿಕೊಳ್ಳುವವ ಶಕ್ತಿ ಭಾರತೀಯ ಪರಂಪರೆಗಿದ್ದು, ಸಂಗೀತದಲ್ಲಿ ರಾಗವೇ ಅಭಿವ್ಯಕ್ತಿಯಾಗಿರಲಿದೆ ಮತ್ತು ಸಂಗೀತದ ಶ್ರೇಷ್ಠತೆಯಲ್ಲಿ ಸಾಹಿತ್ಯಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ ಎಂದು ಸಂಗೀತದ ಮಹತ್ವ ವಿವರಿಸಿದರು.

ಖ್ಯಾತ ಗಾಯಕ ವೀರೇಶ್ ವಾಲಿ ಭಕ್ತಿಗೀತೆಗಳನ್ನು ಹಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಪ್ರಶಾಂತ ಚೌಧರಿ ಮಾತನಾಡಿದರು. ಡಾ. ಕಾಂತು ಇಂಡಿ ದತ್ತಿ ದಾನಿಗಳನ್ನು ಪರಿಚಯಿಸಿದರು.

ರಶ್ಮಿ ಕುಮಟಗಿ, ಪೃಥ್ವಿಶ್ರೀ ಇಂಡಿ, ಸಂತೋಷ್ ಚವಾನ್, ಸುರೇಖಾ ಗೊಳಸಂಗಿಮಠ ಪ್ರೀತಿ ಪಾಟೀಲ, ಸೌಮ್ಯ ಪಾಟೀಲ, ಸುನಂದಾ ಘಾಟಗೆ, ಶ್ರೀಮಂತ ಬೂದಿಹಾಳ, ಸಂತೋಷ ಚವಾಣ್, ಸಾಕ್ಷಿ ಹಿರೇಮಠ, ಶಂಕರ್ ಕೆಂದುಳ್ಳಿ, ಈಶ್ವರ ಉಮರಾಣಿ, ಸಾಗರ ಬಾಗಲಕೋಟ, ಪಾರ್ವತಿ ಜೋರಪೂರಮಠ, ಮುಂತಾದ ಸ್ಥಳೀಯ ಕಲಾವಿದರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಬಿ.ಆರ್.ಬನಸೋಡೆ, ಬಸವರಾಜ ಕುಂಬಾರ, ದಾಕ್ಷಾಯಣಿ ಬಿರಾದಾರ್, ಶರಣಗೌಡ ಪಾಟೀಲ, ಎಸ್.ವೈ.ನಡುವಿನಕೆರಿ, ವಿದ್ಯಾ ಕೋಟೆಣವರ, ರವಿ ಕಿತ್ತೂರು, ಜಯಶ್ರೀ ಮಣೂರ, ರಶ್ಮಿ ಕುಮಟಗಿ, ಸುರೇಖಾ ಗೋಸಂಗಿಮಠ, ಸುಮಂಗಲಾ ಪೂಜಾರಿ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.