ಅಪ್ರತಿಮ ನಾಯಕ ಟಿಪ್ಪು ಸುಲ್ತಾನ್

ಬಿಜಾಪುರದಲ್ಲಿ ಸರಳ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

0

Gummata Nagari : Bijapur News

ಬಿಜಾಪುರ : ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ದೇಶಭಕ್ತ ಹಜರತ್ ಟಿಪ್ಪು ಸುಲ್ತಾನ್ ಅವರ 270ನೇ ಜಯಂತಿಯನ್ನು ಸರಳವಾಗಿ ಮಂಗಳವಾರ ಆಚರಿಸಲಾಯಿತು.

ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ನಾಯಕ ಅಬ್ದುಲ್ ಹಮೀದ್ ಮುಶ್ರೀಫ್ ಮಾರ್ಲಾಪಣೆ ಮಾಡಿ, ಹಜರತ್ ಟಿಪ್ಪು ಸುಲ್ತಾನ್ ದೇಶಕ್ಕಾಗಿ ಹೋರಾಡಿದ ಅಪ್ರತಿಮ ನಾಯಕ. ಟಿಪ್ಪು ಸುಲ್ತಾನ್ ಅವರ ಆದರ್ಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಹೇಳಿದರು.

ಮುಖಂಡ ರವೀಂದ್ರ ಜಾಧವ ಮಾತನಾಡಿ, ಇತಿಹಾಸದ ಪುಟಗಳನ್ನು ನೋಡಿದಾಗ ಶೃಂಗೇರಿ ಮಹಾರಾಜರು ತಮ್ಮನ್ನು ರಕ್ಷಣೆ ಮಾಡುವಂತೆ ಟಿಪ್ಪು ಸುಲ್ತಾನ್ ಅವರಿಗೆ ಪತ್ರ ಬರೆದಾಗ, ಕೂಡಲೇ ತನ್ನ ಸೈನ್ಯವನ್ನು ಕಳಿಸಿ, ಅಲ್ಲಿಯ ಹಿಂದುಗಳ ರಕ್ಷಣೆ ಮಾಡಿ ಸರ್ವಧರ್ಮಕ್ಕೆ ಗೌರವ ನೀಡಿದ ಮಹಾನ್ ನಾಯಕ ಎಂದು ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಸಿ ಕಲಾದಗಿ ಮಾತನಾಡಿ, ಟಿಪ್ಪು ಸುಲ್ತಾನ್ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಎರಡು ಮಕ್ಕಳನ್ನು ಬ್ರೀಟಿಷರಲ್ಲಿ ಒತ್ತೆ ಇಟ್ಟ ಮಹಾನ್ ನಾಯಕ ಹಾಗೂ ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಿದ ದೇಶಭಕ್ತ ಎಂದು ತಿಳಿಸಿದರು.

ಜಾತ್ಯತೀತ ನಾಯಕ ಟಿಪ್ಪು ಸುಲ್ತಾನ್ ಅವರ ಜೀವನ ಚರಿತ್ರೆಯನ್ನು ಎಲ್ಲೆಡೆ ಪ್ರಚಾರ ಪಡಿಸುವ, ಆದರ್ಶಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಟಿಪ್ಪು ಸುಲ್ತಾನ್ ಅಭಿಮಾನಿಗಳು ಮಾಡಬೇಕಾಗಿದೆ. ವೀರಶೂರ ಟಿಪ್ಪು ಸುಲ್ತಾನ್ ಮತ್ತೊಮ್ಮೆ ಹುಟ್ಟಿ ಬರಬೇಕು ಎಂದು ಕಲಾದಗಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಮಹ್ಮದ್ ಇರ್ಫಾನ್ ಶೇಖ್, ಸದಾನಂದ ಮೋದಿ, ಸುರೇಖಾ ರಜಪೂತ, ಜಾಫರ್ ಕಲಾದಗಿ, ಅಜೇಯ್ ಹಜಾರೆ, ಅಶ್ಫಾಕ್ ಮನಗೂಳಿ, ಅಲ್ಲಾಪೀರ್, ಹಾಜಿ ಪಿಂಜಾರ್, ಆಸಿಫ್ ಮುಳಸಾವಳಗಿ, ಮೊಹ್ಮದ್ ಹನ್ನಾನ್ ಶೇಖ್ ಮತ್ತಿತರರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.