ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ

0

Gummata Nagari : Bijapur News

ಇಂಡಿ : ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ನಗರದ ಸ್ಟೇಷನ್ ರಸ್ತೆಯ ಶ್ರೀ ಸಿದ್ಧಲಿಂಗೇಶ್ವರ ಶಾಪಿಂಗ್ ಮಾಲ್ ನಲ್ಲಿ ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ.ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಜೆಡಿಎಸ್ ತಾಲೂಕಾ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ನಮ್ಮ ಕಾರ್ಯಕರ್ತರು ನಮ್ಮಲ್ಲಿ ಯೇ ಸ್ಪರ್ಧದೆ ಮಾಡಿ ಅನ್ಯಪಕ್ಷದ ಅಭ್ಯರ್ಥಿಯ ಗೆಲುವಿಗೆ ಹಾದಿಮಾಡಿಕೊಡಬಾರದು, ರಾಜ್ಯದಲ್ಲಿ ಕುಮಾರಸ್ವಾಮಿಯವರು ಆಡಳಿತಾವಧಿಯಲ್ಲಿ ಮಾಡಿದ ರೈತರ ಸಾಲ ಮನ್ನಾ ಮಾಡಿದ ವಿಚಾರ ಮುಂತಾದ ವಿಚಾರಗಳನ್ನು ಗ್ರಾಮೀಣ ಜನರಿಗೆ ಅಭ್ಯರ್ಥಿಗಳು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಹಾಗೂ ಕರೋನಾ ಹೆಸರಿನಲ್ಲಿ ರಾಜ್ಯ ಸರ್ಕಾರ ರೈತರ, ಹಾಗೂ ಜನಸಾಮಾನ್ಯರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಉಪಾಧ್ಯಕ್ಷ ನಾನಾಗೌಡ ಬಿರಾದಾರವರು ಮಾತನಾಡಿ, ಇಂಡಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಬಿ.ಡಿ.ಪಾಟೀಲರಿಗೆ ರಾಜ್ಯ ಘಟಕ ವಿಶೇಷವಾದ ಶಕ್ತಿಯನ್ನು ತುಂಬಲಾಗುತ್ತದೆ. ಅದೆ ರೀತಿಯಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಆರೋಗ್ಯಕರವಾದ ಸ್ಪರ್ಧೆಮಾಡಿ , ಗ್ರಾಮ ಪಂಚಾಯಿತಿಗಳು ತಾಯಿಯ ಬೇರು ಇದ್ದಹಾಗೆ ತಾಯಿಯ ಬೇರು ಎಷ್ಟು ಗಟ್ಟಿ ಇರುತ್ತವೇಯೊ ಪಕ್ಷಕ್ಕೆ ಅಷ್ಟು ಶಕ್ತಿ ತುಂಬಿದಂತೆ ಎಂದರು. ಮುಂಬರುವ ದಿನಮಾನಗಳಲ್ಲಿ ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ವಿಶೇಷವಾಗಿ ಶಕ್ತಿಯನ್ನು ತುಂಬಲಾಗುತ್ತದೆ ಎಂದರು.

ಅತಿಥಿಗಳಾಗಿ ಮಂಜುನಾಥ ಕಾಮಗೋಂಡ, ಶ್ರೀಶೈಲಗೌಡ ಪಾಟೀಲರು ಮಾತನಾಡಿದರು. ರಾಮು ರಾಠೋಡ, ನಾನಾಗೌಡ ಪಾಟೀಲ, ಸಿದ್ದು ಡಂಗಾ, ಶ್ರೀಶೈಲ ಪೂಜಾರಿ, ಮಹಿಬೂಬ ಶಾಖೆ ಬೇವನೂರ, ಸಾಹೇಬಗೌಡ ಪಾಟೀಲ, ಬಸಗೋಂಡ ಪಾಟೀಲ, ನಾರಾಯಣ ವಾಲಿಕಾರ, ಬಸವರಾಜ ಹಂಜಗಿ, ಮಜಿದ ಸೌದಾಗರ, ತಮ್ಮರಾಯಗೌಡ ಬಿರಾದಾರ, ಹಣಮಂತ ಹಿರೇಕುರಬರ, ಅಜೀತ ಕಾಂಬ್ಳೆ, ಮಾಳು ಮ್ಯಾಕೇರಿ, ಧೂಳಪ್ಪ ಕವಡಿ, ನಾಗೇಶ್ ಹೇಗಡ್ಯಾಳ ನಿರೂಪಿಸಿ ವಂದಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.