ಶಿಕ್ಷಣದಿಂದ ಆಂತರಿಕ ಶಕ್ತಿಯ ವಿಸ್ತಾರ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭ

0

67 ವಿದ್ಯಾರ್ಥಿಗಳಿಗೆ ಚಿನ್ನದ ಪದಕ
ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 67 ವಿದ್ಯಾರ್ಥಿಗಳಿಗೆ 70 ಚಿನ್ನದ ಪದಕ ಹಾಗೂ ನಗದು ಬಹುಮಾನ ಮತ್ತು ಒಟ್ಟು 55 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ ಪದವಿ ಪ್ರಧಾನ ಮಾಡಲಾಯಿತು.

Gummata Nagari : Bijapur News

ಬಿಜಾಪುರ ಸೆ,19: ಕೊರೊನಾ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಹಾಗೂ ವಿಶ್ವವಿದ್ಯಾಲಯದ ಎಂದಿನ ಸಂಪ್ರದಾಯದಂತೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 11 ಘಟಿಕೋತ್ಸವ ಸಮಾರಂಭ ನಡೆಯಿತು.

ಕೊರೊನಾ ಹಿನ್ನೆಲೆಯಲ್ಲಿ ಕೇವಲ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರು, ಪಿಎಚ್‌ಡಿ ಪದವಿ ಪಡೆದ ವಿದ್ಯಾರ್ಥಿನಿಯರು, ಸಿಂಡಿಕೇಟ್ ಸದಸ್ಯರ ಸಮ್ಮುಖದಲ್ಲಿ ಘಟಿಕೋತ್ಸವ ನಡೆಯಿತು. ಮೆರವಣಿಗೆಯಿಂದ ಹಿಡಿದು ಮುಖ್ಯ ವೇದಿಕೆಯವರೆಗೂ ಸಾಮಾಜಿಕ ಅಂತರ ಪಾಲನೆ, ಆರೋಗ್ಯ ಮಾರ್ಗಸೂಚಿಗಳ ಪಾಲನೆ ಮಾಡಲಾಯಿತು. ಎಲ್ಲ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲು ವಿಶ್ವವಿದ್ಯಾಲಯದ ಪ್ರಾಯೋಗಿಕ ನ್ಯೂಸ್ ಚಾನೆಲ್ `ಅಕ್ಕ’ ಟಿವಿಯ ಮೂಲಕ ಘಟಿಕೋತ್ಸವದ ನೇರ ಪ್ರಸಾರದ ಮೂಲಕ ಬಿತ್ತರಿಸಲಾಯಿತು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಸದಸ್ಯ ಪ್ರೊ.ಎಂ.ಕೆ. ಶ್ರೀಧರ ಅವರು ಆನಲೈನ್ ಮೂಲಕ ಪ್ರಧಾನ ಭಾಷಣ ಮಂಡಿಸಿ, ಮಹಿಳೆಯರ ಸೂಕ್ಷ್ಮತೆ, ಬಹುಮುಖ ಪ್ರತಿಭೆ, ಸವಾಲುಗಳನ್ನು ಎದುರಿಸಲು ಇರುವ ಆಂತರ್ಯ ಶಕ್ತಿ, ವಿಶಿಷ್ಟ ದೃಷ್ಟಿಕೋನ ಮತ್ತು ಕಾರ್ಯಕ್ಷಮತೆ ಇವೆಲ್ಲವೂ ಅವರನ್ನು ಒಬ್ಬ ಪರಿಪೂರ್ಣ ವ್ಯಕ್ತಿತ್ವವಾಗಿಸುತ್ತದೆ. ಶಿಕ್ಷಣವು ಮಹಿಳೆಯರ ವಿವಿಧ ಮಜಲುಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಬಹುದು. ಶಿಕ್ಷಣದಿಂದ ನಮ್ಮ ಆಂತರಿಕ ಶಕ್ತಿಯ ವಿಸ್ತಾರವಾಗುತ್ತದೆ. ಆಂತರ್ಯ ಬಲವಿದ್ದರೆ ಹೊರ ಪ್ರಪಂಚದ ಸವಾಲುಗಳನ್ನು ಎದುರಿಸುವ ಮಾನಸಿಕ ಸ್ಥೈರ್ಯ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ವಿಶ್ವವೇ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಭಯಭೀತವಾಗಿದೆ. ಇನ್ನು ಹಲವು ತಿಂಗಳಲ್ಲಿ ನಾವು ಈ ಸಂಕಟದಿಂದಲೂ ಮುಕ್ತರಾಗುತ್ತೇವೆ. ನಿಮ್ಮಲ್ಲಿರುವ ಆತಂಕಗಳನ್ನು ಇಲ್ಲಿಯೇ ಬಿಟ್ಟುಬಿಡಿ. ಧೈರ್ಯದಿಂದ ಮುಂಬರುವ ಉಜ್ವಲ ದಿನಗಳನ್ನು ಎದುರು ನೋಡೋಣ ಎಂದು ವಿದ್ಯಾರ್ಥಿಗಳಿಗೆ ಅಭಯ ತುಂಬಿದರು.

ವಿಶ್ವವಿದ್ಯಾಲಯದ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ವಿವರಣೆ ನೀಡಿದ ಪ್ರಭಾರಿ ಕುಲಪತಿ ಡಾ.ಓಂಕಾರ ಕಾಕಡೆ ಮಾತನಾಡಿ, ಮಹಿಳಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ಇಡೀ ದೇಶದಲ್ಲಿಯೇ ವಿಶಿಷ್ಟವಾಗಿರುವ ಮಹಿಳಾ ವಸ್ತುಸಂಗ್ರಹಾಲಯ ಕಾರ್ಯಾರಂಭ ಮಾಡಲಿದ್ದು, ಆ ಮೂಲಕ ವಿಶ್ವವಿದ್ಯಾಲಯದ ಘನತೆ ಮತ್ತಷ್ಟು ಹೆಚ್ಚಾಗಲಿದೆ ಎಂದರು.

ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ, ಸಿಂಡಿಕೇಟ್, ವಿದ್ಯಾ ವಿಷಯಕ ಪರಿಷತ್ ಸದಸ್ಯರು ಹಾಗೂ ವಿವಿಧ ನಿಕಾಯಗಳ ಡೀನ್‌ಗಳು ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.