8 ಲಕ್ಷ ವೆಚ್ಚದಲ್ಲಿ ನೀರು ಶುದ್ಧೀಕರಣಕ್ಕೆ ಟೆಂಡರ್
ಶುದ್ಧೀಕರಣ ನೀರಿಗೆ ತಮಿಳುನಾಡಿನ ಮರಳು, ಬಳ್ಳಾರಿಯ ಜಲ್ಲಿಕಲ್ಲು ಬಳಕೆ...
ಈ ಹಿಂದೆ ನೀರು ಶುದ್ದಿಕರಣಕ್ಕೆ ಸ್ಥಳಿಯ ಮಳನ್ನು ಬಳಸಲಾಗುತಿತ್ತು ಆದರೆ ಈ ಬಾರಿ ಜಲನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದು ಜಲ್ಲಿಕಲ್ಲು ಹಾಗೂ ತಮೀಳನಾಡು ರಾಜ್ಯದಿಂದ ಮರಳು ತಂದು ನೀರು ಶುದ್ದಿಕರಣಕ್ಕೆ ಬಳಸಲಾಗುತ್ತಿದೆ ಇದಕ್ಕೆ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ ಅವರು ನಮಗೆ ಎಲ್ಲ ರೀತಿಯ ಸಲಹೇ ಸಹಕಾರ ನೀಡಿದ್ದಾರೆ.
– ಎಂ.ಆರ್.ದಾಯಿ, ಮುಖ್ಯಾಧಿಕಾರಿ
ನಾಲತವಾಡ : ಕೊರೋನಾ ವೈರಸ್ ಹಾಗೂ ಸಾಂಕ್ರಾಮಿಕ ರೋಗ ತಡೆಗಟ್ಟಲು ಶುದ್ಧೀಕರಣ ಘಟಕದಲ್ಲಿ ತಮಿಳುನಾಡು ಹಾಗೂ ಬಳ್ಳಾರಿ ಜಲ್ಲಿಕಲ್ಲು ಉಪಯೋಗಿಸಿ ಶುದ್ಧ ಕುಡಿಯುವ ನೀರು ಬಳಸಲು ನಾಲತವಾಡ ಪಟ್ಟಣದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮುಂದಾಗಿದ್ದಾರೆ.
ಭೂಮಿಯ ಮೇಲಿನ ಎಲ್ಲ ಜೀವರಾಶಿಗಳಿಗೂ ನೀರು ಮೂಲಾಧಾರ.ಜೀವಿಯ ಪ್ರಮುಖ ಅಗತ್ಯಗಳಾದ ಗಾಳಿ, ನೀರು, ಆಹಾರ ಗಳಲ್ಲಿ ಎರಡನೇ ಸ್ಥಾನ ನೀರಿಗಿದೆ.ಆಹಾರ ವಿಲ್ಲದೇ ಹಲವಾರು ದಿನ ಬದುಕಬಹುದು ಆದರೆ ಗಾಳಿ, ನೀರು ಇಲ್ಲದೇ ಅಷ್ಟು ದಿನ ಬದುಕುವುದು ಅಸಾಧ್ಯದ ಮಾತು. ಜಲ ನಮಗೆ ಮಾತ್ರವಲ್ಲ ನಮ್ಮ ಮುಂದಿನ ಪೀಳಿಗೆಗೂ ದೊರಕಬೇಕು ಎಂದು ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸೂಚನೆ ಹಿನ್ನೆಲೆ ನಾಲತವಾಡ ಪಟ್ಟಣದ ಅಧಿಕಾರಿಗಳು 8 ಲಕ್ಷದ ಅಂದಾಜು ವೆಚ್ಚದ ಟೆಂಡರ್ ಮೂಲಕ ಗುತ್ತಿಗೆ ನೀಡಿ ತಮಿಳುನಾಡಿನಿಂದ ಮರಳು ಹಾಗೂ ಬಳ್ಳಾರಿಯಿಂದ 2, 3, 4 ಎಮ್.ಎಮ್ ಮೂರು ತರಹ ಜಲ್ಲಿಕಲ್ಲು ಬಳಿಸಿ ಶುದ್ಧೀಕರಣಕ್ಕಾಗಿ ತಮಿಳುನಾಡು ಹಾಗೂ ಬಳ್ಳಾರಿ ಮರಳು ಹಾಗೂ ಜಲ್ಲಿಕಲ್ಲು ಆಮದು ಮಾಡಿಕೊಳ್ಳಲಾಗಿದೆ.
ಇನ್ನು ಘಟಕದಲ್ಲಿ ನೀರು ಶುದ್ಧೀಕರಿಸುವುದರಿಂದ ಜನತೆಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದ್ದು, ಅದಕ್ಕಾಗಿ ಕೂಡಲೇ ನಾಲತವಾಡ ಪಟ್ಟಣದ ಪಂಚಾಯ್ತಿ ಅಧಿಕಾರಿ ಎಂ.ಆರ್. ದಾಯಿ ಮೂರು ವಿಭಿನ್ನ ತರಹದ ಮರಳು ಎಂಟು ನೂರು ಚೀಲಗಳನ್ನು ತಮಿಳುನಾಡಿನಿಂದ ಟೆಂಡರ್ ನಿಂದ ಆಮದು ಮಾಡಿಕೊಂಡ ಶುದ್ಧೀಕರಣ ಘಟಕದಲ್ಲಿ ಬಳಿಸುತ್ತಿದ್ದಾರೆ. ಒಟ್ಟಿನಲ್ಲಿ ಕೊರೋನಾ ನಡುವೆ ನಾಲತವಾಡ ಪಟ್ಟಣದ ಜನತೆಗೆ ಆರೋಗ್ಯ ಕೆಡದಂತೆ ಶುದ್ಧ ನೀರು ಪೂರೈಸಲು ಶಾಸಕ ನಡಹಳ್ಳಿ ಹಾಗೂ ಅಧಿಕಾರಿಗಳು ಶ್ರಮಪಡುತ್ತಿದ್ದಾರೆ.
ಬುದವಾರ ಬೆಳಗ್ಗೆ ನಾಲತವಾಡ ನೀರು ಶುದ್ದಿಕರಣ ಘಟಕಕ್ಕೆ ಬಂದು ಇಳಿದ ತಮಿಳನಾಡು ಮರಳು ಹಾಗೂ ಬಳ್ಳಾರಿಯ ಜಲ್ಲಿಕಲ್ಲುಗಳನ್ನು ಪರೀಕ್ಷೆ ಮಾಡುತ್ತಿರುವ ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿ ಎಂ.ಆರ್.ದಾಯಿ, ಚಂದ್ರಶೇಖರ ಸಗರ್ ಕಿರಿಯ ಆರೋಗ್ಯ ನಿರೀಕ್ಷಕ ಪ್ರಸನ್ ಅವಟಿ, ಇಂಜಿನಿಯರ್ ವೀರೇಶ ದೂಡಮನಿ, ವೀರೆಶ ತಂಗಡಗಿ ವಾಟರ್ ಮ್ಯಾನ್ ಇದ್ದರು.
-ಯೂನುಸ್ ಮೂಲಿಮನಿ
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..