ದೇಶದ ಸಾರ್ವಭೌಮತ್ವದ ರಕ್ಷಣೆ ಶಿಕ್ಷಕರ ಹೊಣೆ

0

Gummata Nagari : Bijapur News

ಬಿಜಾಪುರ: ದೇಶದ ಸಾರ್ವಭೌಮತ್ವದ ರಕ್ಷಣೆ ಶಿಕ್ಷಕರ ಹೊಣೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.

ಬಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶಿಕ್ಷಕರ ದಿನೋತ್ಸವ ಪ್ರಯುಕ್ತ `ಉತ್ತಮ ಶಿಕ್ಷಕ’ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಚಿಂತನಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಕರು ಸಮಾಜ ಸುಧಾರಕರು, ರೈತ ಈ ಜಗತ್ತಿಗೆ ಅನ್ನವನ್ನು ನೀಡಿದರೆ, ಸೈನಿಕ ದೇಶದ ಸಾರ್ವಭೌಮತ್ವವನ್ನು ಕಾಯುವ ಮತ್ತು ನಾಗರಿಕರ ರಕ್ಷಣೆಗಾಗಿ ತನ್ನ ಜೀವವನ್ನೇ ಮುಡಿಪಾಗಿಡುವನು. ಅದರಂತೆ ಭವಿಷ್ಯದ ಭವ್ಯ ಭಾರತವನ್ನು ನಿರ್ಮಿಸುವಂತಹ ಯುವಪೀಳಿಗೆಗೆ ಜ್ಞಾನದ ಜ್ಯೋತಿಯನ್ನು ಹಚ್ಚುವ ಕಾರ್ಯ ಹಾಗೂ ದೇಶದ ಸಾರ್ವಭೌಮತ್ವದ ರಕ್ಷಣೆ ಶಿಕ್ಷಕರ ಮೇಲಿದೆ ಎಂದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಸಾಹಿತ್ಯದ ಜ್ಯೋತಿ ಪ್ರತಿಯೊಬ್ಬರು ತಮ್ಮ ಮನೆ ಮನಗಳಲ್ಲಿ ನಿತ್ಯ ಬೆಳಗಿಸಿ ಕನ್ನಡದ ನೆಲ, ಜಲ, ಭಾಷೆ ರಕ್ಷಣೆಗೆ ಕಂಕಣಬದ್ಧರಾಗಬೇಕು. ಕರೋನಾದಂತಹ ಮಹಾಮಾರಿ ರೋಗಕ್ಕೆ ಶಾಸ್ತ್ರೀಯ ಸಂಗೀತ ಸಾಹಿತ್ಯದ ಸುಧೆ ಸಂತೃಪ್ತಿ ಬದುಕಿಗೆ ಪೂರಕವಾಗಿ ನಿಂತಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಹಾಗೂ ಸಮಾಜ ಸೇವಕ ಡಿ.ಎಸ್. ಗುಡ್ಡೋಡಗಿ ಮಾತನಾಡಿ, ಮನುಷ್ಯ ಸಮಾಜ ತಂದೆ ತಾಯಿ, ಕುಟುಂಬ, ಬಂಧು ಬಳಗ ಶಿಕ್ಷಕ ಇವರೆಲ್ಲರ ಋಣಗಳ ಮಧ್ಯೆ ಬದುಕಬೇಕಾಗುತ್ತದೆ. ಅದಕ್ಕಾಗಿ ನಾವುಗಳು ಕಿಂಚಿತ್ತಾದರು ಸಮಾಜಮುಖಿ ಕಾರ್ಯವನ್ನು ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ಹಿಂದಿನ ಹಿರಿಯರು ಸಂತರು ತಮಗೆ ಏನನ್ನು ಬಯಸದೇ ಕೇವಲ ಸಮಾಜಮುಖಿ ಕಾರ್ಯವನ್ನು ಮಾಡಿ ಪ್ರಾತಃಸ್ಮರಣಿಯರಾಗಿದ್ದಾರೆ ಎಂದರು.

ಸಿಕ್ಯಾಬ್ ಮಹಿಳಾ ಪ.ಪೂ. ಕಾಲೇಜ ಉಪನ್ಯಾಸಕ ಪ್ರೊ. ಯು.ಎನ್. ಕುಂಟೋಜಿ ತಮ್ಮ ಉಪನ್ಯಾಸವನ್ನು ನೀಡುತ್ತಾ, ನಮ್ಮ ಬದುಕು ಸುಂದರಗೊಳ್ಳಲು ಸ್ವಚ್ಛ ಮತ್ತು ಸಮಾಧಾನಕರ ನಡೆ ಬದುಕಿಗೆ ಬಹಳ ಮುಖ್ಯ. ನಮ್ಮ ಪ್ರಾತಃಸ್ಮರಣಿಯರ ಬದುಕು ಇಂದಿನ ಯುವಪೀಳಿಗೆಗೆ ದಾರಿದೀಪವಿದ್ದಂತೆ ಎಂದರು.

ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಮಾತನಾಡಿದರು. ಭೌರಮ್ಮ ಮುಗಳೊಳ್ಳಿ ಮಾತನಾಡಿದರು. ಜಿಲ್ಲಾ ಕ.ಸಾ.ಪ. ಕಾರ್ಯದರ್ಶಿ ಎಸ್.ಎಸ್. ಖಾದ್ರಿಇನಾಮದಾರ, ಪ್ರೊ., ಬಸವರಾಜ ಕುಂಬಾರ, ದಾಕ್ಷಾಯಣಿ ಬಿರಾದಾರ, ಮಂಜುನಾಥ ಜುನಗೊಂಡ, ಸೋಮಶೇಖರ ಕುರ್ಲೆ, ರಾಜಕುಮಾರ ಜೊಲ್ಲೆ, ವಿಜಯಕುಮಾರ ಇಂಡಿ, ರವಿ ಕಿತ್ತೂರ, ಸೋಮನಾಥ ಕಳ್ಳಿಮನಿ, ನಾಗರಾಜ ಬನಸೋಡೆ, ಎಮ್.ಎಮ್. ತೆಲಗಿ, ಎಮ್.ಆಯ್. ಬೇಪಾರಿ, ಎಲ್.ಎಲ್. ತೊರವಿ, ಶಿವಲಿಂಗ ಕಿಣಗಿ, ರಾಜೇಂದ್ರಕುಮಾರ ಬಿರಾದಾರ, ಮುಸ್ತಾಕ ಮಲಘಾಣ, ಮಹಾದೇವ ರಾವಜಿ, ಪುಷ್ಪಾ ಮಹಾಂತಮಠ, ಶಶಿಕಲಾ ಇಜೇರಿ ಉಪಸ್ಥಿತರಿದ್ದರು.

ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಎಸ್.ಜಿ. ಹಂಚಿನಾಳ, ಬಸವರಾಜ ಅಗಸರ, ವಿದ್ಯಾ ಕೊಟೆಣ್ಣವರ, ಮಹೇಶ ಕಿತ್ತೂರ, ರಾಜಶೇಖರ ಉಮರಾಣಿ, ಮೆಹಬೂಬ್ ಭಾಷ ಭಾವಿಪಟೇಲ್, ಪ್ರತಿಭಾ ತೊರವಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಗೊಂಡ ಶಿಕ್ಷಕರ ಪರವಾಗಿ ಎಸ್.ಜಿ. ಹಂಚಿನಾಳ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.