ಶಿಕ್ಷಕ ರಾಷ್ಟ್ರದ ಅಮೂಲ್ಯ ಸಂಪತ್ತು

0

Gummata Nagari : Bijapur News

ಬಿಜಾಪುರ : ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಇಡೀ ಸಮಾಜಕ್ಕೆ ಹಾನಿಯಾಗುತ್ತದೆ, ಶಿಕ್ಷಕ ರಾಷ್ಟ್ರದ ಅಮೂಲ್ಯ ಸಂಪತ್ತು ಎಂದು ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಸುರೇಶ ಬಿರಾದಾರ ಹೇಳಿದರು.

ಬಿಜಾಪುರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಣ ಸಂಸ್ಥೆಯ 19 ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ಇಂಜಿನೀಯರ ತಪ್ಪು ಮಾಡಿದರೆ ಒಂದು ಕಟ್ಟಡಕ್ಕೆ ಹಾನಿ ಆಗುತ್ತದೆ ವೈದ್ಯ ತಪ್ಪು ಮಾಡಿದರೆ ಒಬ್ಬ ರೋಗಿಗೆ ಹಾನಿಯಾಗುತ್ತದೆ ಆದರೆ ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಇಡೀ ಸಮಾಜಕ್ಕೆ ಹಾನಿಯಾಗುತ್ತದೆ ಅದಕ್ಕಾಗಿ ಶಿಕ್ಷಕ ಕೆಲಸ ಶ್ರೇಷ್ಠವಾದದ್ದು ಅದಕ್ಕಾಗಿ ಶಿಕ್ಷಕರ ಮೂಲ ಧ್ಯೇಯ ಒಳ್ಳೆಯ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವದಾಗಿರಬೇಕು ಎಂದರು.

ಸಂಸ್ಥೆಯ ಅಧ್ಯಕ್ಷೆ ಪ್ರೊ.ಶೀಲಾ ಎಸ್. ಬಿರಾದಾರ ಮಾತನಾಡಿ, ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಶಿಕ್ಷಣ ಪ್ರಸಾರವನ್ನೇ ತನ್ನ ಮೂಲ ಧ್ಯೇಯವಾಗಿಸಿಕೊಂಡಿದೆ, ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆಯಲು ಹಲವಾರು ಜನರು ತಮ್ಮ ಕೊಡುಗೆಯನ್ನು ನೀಡಿದ್ದಾರೆ, ಅವರೆಲ್ಲರನ್ನೂ ಅನುಕ್ಷಣವೂ ನೆನೆಯುತ್ತೇವೆ ಎಂದರು.

ದ್ರೋಣಾಚಾರ್ಯ ಪುರಸ್ಕಾರ ಪಡೆದ ಪ್ರಾಚಾರ್ಯ ಚಂದನಗೌಡ ಮಾಲಿಪಾಟೀಲ, ಆನಂದ ಕೋರಿಕಂತಿಮಠ, ದೀಪಾ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಭರತ ಬಿರಾದಾರ, ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ದೀಪಾ ತಿಳಿಗೂಳ, ಶ್ರೀದೇವಿ ಜೋಳದ, ಮೀನಾಕ್ಷಿ ಹಿಪ್ಪರಗಿ, ರೇಣುಕಾ ಕಡೇಮನಿ, ಮೊಹ್ಮದ ಇಲಿಯಾಸ, ಸೀಮಾ, ನಿಕಿತಾ, ಸರೋಜಾ, ಶ್ವೇತಾ, ವೀವೆಕ, ಪ್ರಶಾಂತ, ಸಿದ್ದು ತೊರವಿ, ಸವಿತಾ ಪಾಲ್ಗೊಂಡಿದ್ದರು.

ಪ್ರಾಚಾರ್ಯ ಶ್ರೀಧರ ಕುರಬೇಟ ಸ್ವಾಗತಿಸಿದರು. ಆನಂದ ಕೋರಿಕಂತಿಮಠ ಕಾರ್ಯಕ್ರಮ ನಿರೂಪಿಸಿದರು, ಸ್ಮೀತಾ ರಾಠೋಡ ವಂದಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.