ತಾಳಿಕೋಟೆ: ಬಾಬು ಭಜಂತ್ರಿ ಅಧ್ಯಕ್ಷ

0

Gummata Nagari : Bijapur News

ತಾಳಿಕೋಟೆ : ಇಲ್ಲಿಯ ಶ್ರೀ ಶಿವಶರಣ ನೂಲಿ ಚಂದಯ್ಯ ಕೋರಮ-ಭಜಂತ್ರಿ ಸಮಾಜ ಸೇವಾ ಅಭಿವೃಧ್ದಿ ಸಂಘದ ನೂತನ ತಾಲೂಕಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಬಾವೂರದ ಬಾಬು ಭಜಂತ್ರಿ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ನೂತನ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆ ಹಾಗೂ ಜನ ಜಾಗೃತಿ ಸಭೆ ನಡೆಸಲಾಯಿತು.

ಸಭೆಯಲ್ಲಿ ನೂತನ ತಾಲೂಕು ಅಸ್ತಿತ್ವಕ್ಕೆ ಬಂದಿದ್ದು, ತಾಳಿಕೋಟೆ ನೂತನ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅದರಂತೆ ಅಧ್ಯಕ್ಷರಾಗಿ ಬಾಬು ಭಜಂತ್ರಿ, ಉಪಾದ್ಯಕ್ಷರಾಗಿ ಬಸವರಾಜ ಭಜಂತ್ರಿ, ಕಾರ್ಯದರ್ಶಿಯಾಗಿ ಲಕ್ಷ್ಮಣ ಬಜಂತ್ರಿ, ಉಪಕಾರ್ಯದರ್ಶಿ ಹಣಮಂತ್ರಾಯ ಭಜಂತ್ರಿ, ಖಜಾಂಚಿಯಾಗಿ ಹಿರಗಪ್ಪ ಭಜಂತ್ರಿ, ಸಮಘಟನಾ ಸದಸ್ಯರಾಗಿ ಭಿಮ್ಮಣ್ಣ ಬಜಂತ್ರಿ, ದುಂಡಪ್ಪ ಭಜಂತ್ರಿ, ಲಕ್ಷö್ಮಣ ಬಾಳಪ್ಪ ಬಜಂತ್ರಿ, ನಿಂಗಪ್ಪ ಭಜಂತ್ರಿ, ತಿಪ್ಪಣ್ಣ ಭಜಂತ್ರಿ, ಯಮನಪ್ಪ ಭಜಂತ್ರಿ, ನಾಗಪ್ಪ ಭಜಂತ್ರಿ, ಹಣಮಂತ ಭಜಂತ್ರಿ, ಜಟ್ಟಪ್ಪ ಭಜಂತ್ರಿಯವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ ವಾಜಂತ್ರಿ ಮಾತನಾಡಿ, ನಮ್ಮ ಸಮಾಜ ಅತಿ ಹಿಂದುಳಿದ ಸಮಾಜವಾಗಿದೆ. ಸಮಾಜದ ಶಿಕ್ಷಣವಂತರ ಸಂಖ್ಯೆ ಕಡಿಮೆಯಾಗಿದೆ. ಸಮಾಜದ ಮಕ್ಕಳಿಗೆ ಹೆಚ್ಚು ಶಿಕ್ಷಣವಂತರನ್ನಾಗಿ ಮಾಡಬೇಕು. ತಾಲೂಕಿನ ಸಮಾಜ ಬಾಂಧವರನ್ನು ವಿಶ್ವಾಸಕ್ಕೆ ತೆಗದುಕೊಂಡು ನೂತನ ಪದಾದಿಕಾರಿಗಳು ಸಂಘಟನೆಯನ್ನು ಮಾಡಬೇಕು. ಯಾವುದೇ ಸಮಸ್ಯೆ3 ಬಂದರು ಸಹ ಜಿಲ್ಲಾ ಘಟಕಕ್ಕೆ ಮಾಹಿತಿ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಉಪಾದ್ಯಕ್ಷ ಸಿದ್ದಪ್ಪ ಬಜಂತ್ರಿ, ಬಸವರಾಜ ಭಜಂತ್ರಿ, ಕೃಷ್ಣಾ ಬಜಂತ್ರಿ, ರವಿಂದ್ರ ಜಾದವ, ಹಣಮಂತ ಬಜಂತ್ರಿ, ಟ್ರೆಲರ್ ರಾಮು ಸೇರಿದಂತೆ ಇತರರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.